ಕೊಕ್ರಾಡಿ – ನಾರಾವಿ ರಸ್ತೆಯಲ್ಲಿ ಬೈಕ್ ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಏ.12 ರಂದು ಮಧ್ಯರಾತ್ರಿ ನಡೆದಿದೆ. ನಾರಾವಿಯಿಂದ ವೇಣೂರು ಕಡೆಗೆ ಬೈಕ್ ಸವಾರ ಪ್ರಶಾಂತ್ ಹೋಗುತ್ತಿದ್ದ ವೇಳೆ ತಿರುವು ರಸ್ತೆಯಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಪ್ರಶಾಂತ್ ಹಾಗೂ ಸಹಸವಾರ ದಿನೇಶ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಬೆಳಾಲು: ಕಾಡಿನ ಮಧ್ಯೆ ಪತ್ತೆಯಾದ ಪುಟ್ಟ ಕಂದಮ್ಮ:ಹಸುಗೂಸಿನ ಅಳುವಿನ ಶಬ್ಧ ಕೇಳಿ ಸಾರ್ವಜನಿಕರಿಂದ
ಬೆಳಾಲು: ಕೊಡೋಳುಕೆರೆ ಎಂಬಲ್ಲಿ ಪುಟ್ಟ ಕಂದಮ್ಮನನ್ನು ಯಾರೋ ಕಾಡಿನಲ್ಲಿ ಬಿಟ್ಟು ಹೋದ ಘಟನೆ ಇಂದು ನಡೆದಿದೆ. ಕಾಡಿನ ದಾರಿ ಮಧ್ಯೆಯಿಂದ ಸಾಗುತ್ತಿದ್ದ ಮಹಿಳೆಯೊಬ್ಬರಿಗೆ ಮಗುವು ಅಳುವ ಶಬ್ಧ ಕೇಳಿದ್ದು, ತಕ್ಷಣ ಮಗುವಿನ ಬಳಿ ಬಂದು ಸಂಬಂಧಪಟ್ಟವರಿಗೆ ತಿಳಿಸಿದ್ದಾರೆ. ಮಾಹಿತಿ ತಿಳಿದ ಸ್ಥಳೀಯರು ತಕ್ಷಣ ಸ್ಥಳಕ್ಕೆ ಆಗಮಿಸಿ ಮಗು ಯಾರದೆಂದು ಪತ್ತೆಹಚ್ಚುವಲ್ಲಿ ತೊಡಗಿದ್ದಾರೆRead More
ಬಾಂಗ್ಲಾದೇಶಿ ಹಿಂದೂಗಳಿಗೆ ನ್ಯಾಯದೊರಕಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಸಲು ಭಾರತಾದ್ಯಂತ ಮೌನ ಪ್ರತಿಭಟನೆ !ಹಿಂದೂಗಳ
ಬೆಳ್ತಂಗಡಿ.: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಿರಂತರ ದಾಳಿ ನಡೆಯುತ್ತಿದ್ದು ಇದುವರೆಗೆ 230 ಜನರು ಸಾವನ್ನಪ್ಪಿದ್ದಾರೆ. ಬಾಂಗ್ಲಾದೇಶದ 64 ಜಿಲ್ಲೆಗಳ ಪೈಕಿ 52 ಜಿಲ್ಲೆಗಳಲ್ಲಿ ಹಿಂದೂ ವಿರೋಧಿ ಹಿಂಸಾಚಾರದ ಘಟನೆಗಳು ನಡೆದಿವೆ. ಶೇಖ್ ಹಸೀನಾ ಸರಕಾರ ರಾಜೀನಾಮೆ ನೀಡಿದ ನಂತರ ಹಿಂದೂಗಳ ಮೇಲಿನ ಹಲ್ಲೆಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ, ಹಿಂದೂ ಯುವಕ, ಉತ್ಸವ್ ಮಂಡಲನನ್ನು ತಥಾಕಥಿತ ಧರ್ಮನಿಂಧನೆಯ ಆರೋಪದ ಮೇಲೆ ಜಿಹಾದಿ ಜನಸಮೂಹವು ನೇರವಾಗಿ ಪೊಲೀಸ್ ಠಾಣೆಗೆ ನುಗ್ಗಿ ಆ ಯುವಕನ ಎರಡೂ ಕಣ್ಣುಗಳನ್ನು ಕಿತ್ತು ಹಾಕಿದೆ. ಬಾಂಗ್ಲಾದೇಶದಲ್ಲಿ […]Read More
ಧರ್ಮಸ್ಥಳ-ಮಂಗಳೂರು ವೇಗದೂತ ಬಸ್ಸಿನ ಬೇಡಿಕೆಗಾಗಿ ರಾಜ್ಯ ಸಾರಿಗೆ ಅಧಿಕಾರಿಗಳನ್ನು ಭೇಟಿಯಾದ ಎಸ್ಡಿಪಿಐ ಬೆಳ್ತಂಗಡಿ
ಬೆಳ್ತಂಗಡಿ (ಡಿ-18): ದಿನಂಪ್ರತಿ ಮಂಗಳೂರು ಉದ್ಯೋಗಕ್ಕೆ ಹೋಗುವ ಪ್ರಯಾಣಿಕರು ಕೆಎಸ್ಆರ್ಟಿಸಿ ಬಸ್ ಸೌಕರ್ಯವಿಲ್ಲದ ಕಾರಣ ಅನಾನುಕೂಲವಾಗಿದ್ದು, ಇದನ್ನು ನಿವಾರಿಸಲು ಧರ್ಮಸ್ಥಳದಿಂದ ಬಿ.ಸಿ ರೋಡ್ ಮಂಗಳೂರು ಮಾತ್ರ ನಿಲುಗಡೆ ಇರುವ ವೇಗದೂತ ಬಸ್ಸುಗಳನ್ನು ಪ್ರಾರಂಭಿಸಿ ಸುಮಾರು ವರ್ಷಗಳಿಂದ ಇರುವ ಪ್ರಯಾಣಿಕರ ಸಮಸ್ಯೆಗಳಿಗೆ ಸ್ಪಂದಿಸಿ ತಕ್ಷಣ ಬಸ್ ಸೌಲಭ್ಯ ಕಲ್ಪಿಸಿ ನೆರವಾಗಬೇಕು ಎಂದು ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ಕ್ಷೇತ್ರ ಸಮಿತಿ ನಿಯೋಗ ರಾಜ್ಯ ಸಾರಿಗೆ ಅಧಿಕಾರಿಗಳನ್ನು ಬುಧವಾರ ಭೇಟಿಯಾಗಿ ಮನವಿ ಸಲ್ಲಿಸಿದರು.Read More
ಮಂಗಳೂರು: ಡ್ರೀಮ್ ಡೀಲ್ ಗ್ರೂಪ್ ಮಂಗಳೂರು ವತಿಯಿಂದ ಪ್ರತೀ ತಿಂಗಳು ಪ್ರಮೋಷನ್ ಗಾಗಿ ಗಿಫ್ಟ್ ನೀಡುತ್ತೇವೆ.. ಇತ್ತೀಚೆಗೆ ಲಕ್ಕಿ ಡ್ರಾ ವೇಳೆ ಉಬೈದ್ ಮತ್ತು ಹರ್ಷಿತ್ ಅನ್ನುವ ನಮ್ಮ ಕೆಲಸದವರು ಸಂಸ್ಥೆ ಗೆ ಮೋಸ ಮಾಡಿದ್ದಾರೆ. ಇದು ಗಮನಕ್ಕೆ ಬಂದ ತಕ್ಷಣವೇ ಮರು ಡ್ರಾ ಮಾಡಿದ್ದೇವೆ. ಬಳಿಕ ಅವರ ವಿರುದ್ಧ ಕಂಕನಾಡಿ ಪೋಲೀಸ್ ಠಾಣೆಗೆ ದೂರು ನೀಡಿದ್ದೇವೆ.ಅವರು ತಮ್ಮ ತಪ್ಪನ್ನು ಒಪ್ಪಿಜೊಂಡಿದ್ದಾರೆ. ಕಂಪೆನಿ ಮುಂದೆಯೂ ಜನರ ವಿಶ್ವಾಸಕ್ಕೆ ಬದ್ಧವಾಗಿದೆ. ಪೊಲೀಸ್ ಅಧಿಕಾರಿಗಳು ಈ ನಿಟ್ಟಿನಲ್ಲಿ ತನಿಖೆ […]Read More
ಚಾರ್ಮಾಡಿ : ಚಾರ್ಮಾಡಿ ಗ್ರಾಮದ ಮೈಕಾನ್, ಪರ್ಲಾಣಿ ಸ್ಥಳದಲ್ಲಿ ಇಂದು ಮುಂಜಾನೆ 7.00 ಗಂಟೆ ಸುಮಾರಿಗೆ ಮೃತ್ಯುಂಜಯ ನದಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿದೆ.ಹೊಸಮಠ ಕಡೆಗೆ ತೆರಲಿರುವ ಬಗ್ಗೆ ವರದಿಯಾಗಿದೆ. ಯಾವುದೇ ಕೃಷಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ ಪದೇ ಪದೇ ಆನೆಯ ದಾಳಿಯಾಗುತ್ತಲೆ ಇದೆ ಆ ಭಾಗದ ಜನರು ಭಯಭೀತಗೊಂಡಿದ್ದಾರೆ ಈ ಬಗ್ಗೆ ಅರಣ್ಯ ಇಲಾಖೆ, ಸರ್ಕಾರ ಸೂಕ್ತ ಶಾಶ್ವತ ಪರಿಹಾರ ಒದಗಿಸಬೇಕೆಂದು ಆ ಭಾಗದ ನೊಂದ ನಾಗರಿಕರ ಒಕ್ಕೊರಲ ಆಗ್ರಹವಾಗಿದೆ.Read More
ಗುರುವಾಯನಕೆರೆ – ಉಪ್ಪಿನಂಗಡಿ ರಸ್ತೆಯನ್ನು ಶೀಘ್ರ ದುರಸ್ಥಿಗೆ ಆಗ್ರಹಿಸಿ ರಸ್ತೆ ತಡೆದು SDPI
ಬೆಳ್ತಂಗಡಿ (ನ-15): ಸಂಪೂರ್ಣ ಹದಗೆಟ್ಟು ಹೋದ ಗುರುವಾಯನಕೆರೆ – ಉಪ್ಪಿನಂಗಡಿ ರಸ್ತೆಯನ್ನು ಶೀಘ್ರ ದುರಸ್ಥಿಗೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಕಣಿಯೂರು ಬ್ಲಾಕ್ ಸಮಿತಿ ವತಿಯಿಂದ ಅಧ್ಯಕ್ಷರಾದ ಮುಸ್ತಾಫ ಬಂಗೇರಕಟ್ಟೆ ನೇತೃತ್ವದಲ್ಲಿ ಶುಕ್ರವಾರ ಕಲ್ಲೇರಿ ಜಂಕ್ಷನ್ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು. ಕಣಿಯೂರು ಬ್ಲಾಕ್ ಅಧ್ಯಕ್ಷರಾದ ಮುಸ್ತಾಫ ಬಂಗೇರಕಟ್ಟೆ ಮಾತನಾಡಿ ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಗುರುವಾಯನಕೆರೆ – ಉಪ್ಪಿನಂಗಡಿ ರಸ್ತೆಯನ್ನು ಬಹಳಷ್ಟು ಅಪಘಾತಗಳು ಸಂಭವಿಸಿ, ಸಾಕಷ್ಟು ಸಾವು- ನೋವು ಸಂಭವಿಸಿದರೂ […]Read More
ಬೆಳ್ತಂಗಡಿ:ಮಾರಿಗುಡಿಯ ಮುಂಭಾಗದಲ್ಲಿರುವ ಚರಂಡಿಯಲ್ಲಿ ಹರಿದುಹೋಗುತ್ತಿದೆ ಶೌಚಾಲಯದ ನೀರು:ದುರ್ವಾಸನೆಯಿಂದ ಮೂಗುಮುಚ್ಚಿಕೊಂಡು ಹೋಗುವ ಪರಿಸ್ಥಿತಿ: ಕ್ರಮ
ಬೆಳ್ತಂಗಡಿಯ ಮಾರಿಗುಡಿ ದೇವಸ್ಥಾನದ ಮುಂಭಾಗದಲ್ಲಿರುವ ಚರಂಡಿಯಲ್ಲಿ ಶೌಚಾಲಯದ ನೀರು ಹರಿದುಹೋಗುತ್ತಿದ್ದು ದುರ್ವಾಸನೆಯಿಂದ ಕೂಡಿದೆ. ಚರಂಡಿಯಲ್ಲಿ ಮಳೆ ನೀರನ್ನು ಹೊರೆತುಪಡಿಸಿ ಶೌಚಾಲಯದ ನೀರನ್ನು ಹರಿಯ ಬಿಡುತ್ತಿದ್ದು ರಾತ್ರಿ ವೇಳೆ ಸುತ್ತಮುತ್ತಲಿನ ವ್ಯಾಪರಸ್ಥರು, ಮನೆಯವರು, ಪಾದಾಚಾರಿಗಳು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ದುರ್ವಾಸನೆಯಿಂದಾಗಿ ಸೊಳ್ಳೆಗಳು ಉತ್ಪತ್ತಿಗೊಂಡು ಡೆಂಗ್ಯೂ ಹೀಗೆ ಮಾರಣಾಂತಿಕ ಖಾಯಿಲೆಗೆ ಸ್ಥಳೀಯರು ಬಲಿಯಾಗಬೇಕಾದಿತು. ನಗರ ಪಂಚಾಯತ್ ಗೆ ಒಳಪಟ್ಟ ಈ ಚರಂಡಿಯಲ್ಲಿ ಮಳೆ ನೀರು ಮಾತ್ರ ಹರಿದುಹೋಗುವಂತೆ ಗಮನಹರಿಸಬೇಕಾಗಿದೆ. ಯಾರು ಈ ಚರಂಡಿಯಲ್ಲಿ ಶೌಚಾಲಯದ […]Read More
ಪದ್ಮುಂಜ: ಕೃಷಿಕರ ಬದುಕಿಗೆ ಆಧಾರ ಆಗಿರುವ ಅಡಿಕೆ ಕೃಷಿಗೆ ಎಲೆ ಚುಕ್ಕೆ ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನವೆಂಬರ್ 07 ಗುರುವಾರ ಬೆಳಗ್ಗೆ 10.30 ಕ್ಕೆ ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಅಡಿಕೆ ಬೆಳೆ ಮತ್ತು ಕಾಳು ಮೆಣಸು ಬೆಳೆಗಳ ಆಧುನಿಕ ಬೇಸಾಯ ಕ್ರಮದ ಕುರಿತು ಕೃಷಿಕರಿಗೆ ತರಭೇತಿ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಹಾಗೂ ತೋಟಗಾರಿಕಾ ಇಲಾಖೆಯ ಸಹಕಾರದೊಂದಿಗೆ ಹಮ್ಮಿಕೊಂಡಿದ್ದು ಸಿ.ಪಿ.ಸಿ.ಆರ್.ಐ ವಿಜ್ಞಾನಿಗಳು, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತರಬೇತಿ ನೀಡಲಿದ್ದಾರೆ, ಈ ಕಾರ್ಯಕ್ರಮಕ್ಕೆ […]Read More
ಬೆಳ್ತಂಗಡಿ ಉಪವಿಭಾಗದ ಕಲ್ಲೇರಿ ಶಾಖಾ ವ್ಯಾಪ್ತಿಯ 110/33/11 ಕೆವಿ ಕರಾಯ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಕಲ್ಲೇರಿ ಟೌನ್ ಹಾಗೂ ಮುಗೇರಡ್ಕ ಫೀಡರುಗಳ ಹೊರೆಯನ್ನು ವಿಂಗಡಿಸಲು ಪ್ರತ್ಯೇಕವಾದ ಫೀಡರನ್ನು ನಿರ್ಮಿಸುವ ಹಾಗೂ ಉಪ್ಪಿನಂಗಡಿ ಟೌನ್, ಕೆಮ್ಮಾರ, ಕಲ್ಲೇರಿ ಟೌನ್ ಹಾಗೂ ಪದ್ಮುಂಜ ಫೀಡರುಗಳ ಹೆಚ್ ಟಿ ಲೈನ್ ಗೆ ತಾಗುತ್ತಿರುವ ಮರದ ಗೆಲ್ಲುಗಳನ್ನು ತೆರವುಗೊಳಿಸುವ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ನಾಳೆ (29) ರಂದು ಬೆಳಗ್ಗೆ 10 ರಿಂದ ಸಂಜೆ 5.30 ರ ತನಕ 11 ಕೆವಿ […]Read More