ಬೆಳ್ತಂಗಡಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿ ಪದವಿ ಪೂರ್ವ ಕಾಲೇಜಿಗೆ 98.17% ಫಲಿತಾಂಶ ಬಂದಿದ್ದು, ಕಾಮರ್ಸ್ ನಲ್ಲಿ 3 ವಿದ್ಯಾರ್ಥಿಗಳು, ಸೈನ್ಸ್ ನಲ್ಲಿ 3 ವಿದ್ಯಾರ್ಥಿಗಳು, ಆರ್ಟ್ಸ್ ನಲ್ಲಿ 3 ವಿದ್ಯಾರ್ಥಿಗಳು ಅತ್ಯುತ್ತಮ ಸ್ಥಾನ ಗಳಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ 98.23%, ಕಾಮರ್ಸ್ ವಿಭಾಗದಲ್ಲಿ 97.91%, ಆರ್ಟ್ಸ್ ವಿಭಾಗದಲ್ಲಿ 100% ಗಳಿಸಿಕೊಂಡಿದೆ.
Feature Post
ಶ್ರೀ.ಧ.ಮ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ 8 ರಂದು ಪೋಷಕರ ಸಮಾಲೋಚನಾ ಸಭೆಯನ್ನು ಕರೆಯಲಾಯಿತು. ಈ ಸಭೆಗೆ ಎಸ್ . ಡಿ. ಎಮ್ ತಾಂತ್ರಿಕ ಮಹಾವಿದ್ಯಾಲಯ ಉಜಿರೆಯ ಮುಖ್ಯ ಗ್ರಂಥಪಾಲಕಿಯಾದ ಡಾಕ್ಟರ್ ರಜತ ಪಿ ಶೆಟ್ಟಿ ಆಗಮಿಸಿದ್ದರು. ಇವರು ಮಕ್ಕಳಿಗೆ ಓದುವ ಪ್ರವೃತ್ತಿಯನ್ನು ಹೇಗೆ ಅಭಿವೃದ್ಧಿ ಪಡಿಸಬೇಕು ಎಂಬುದನ್ನು ತಿಳಿ ಹೇಳಿದರು. ಮಕ್ಕಳು ಮುಖ್ಯವಾಗಿ ಪುಸ್ತಕವನ್ನು ಪ್ರೀತಿಸಬೇಕು ಹಾಗೂ ಇಂದಿನ ಯುವ ಪೀಳಿಗೆಯು ದಾರಿ ತಪ್ಪುವುದನ್ನು ಪುಸ್ತಕ ತಡೆಗಟ್ಟುತ್ತದೆ ಎಂಬುದನ್ನು ಅನೇಕ ಉದಾಹರಣೆಗಳೊಂದಿಗೆ ತಿಳಿಸಿ ಹೇಳಿದರು. […]Read More
ಫಾರಿನರ್ಸ್ ಗೆ ಯೋಗ ತರಬೇತಿ ನೀಡಿದ ಉಜಿರೆಯ ಕಾಲೇಜು!ಒಂದು ತಿಂಗಳು ಉಜಿರೆಯಲ್ಲಿದ್ದು ಯೋಗದ
ಈಗಿನ ಕಾಲದಲ್ಲಿ ಎಲ್ಲರೂ ಜಿಮ್, ಯೋಗ ಅಂತ ಹೋಗ್ತಾನೆ ಇರ್ತಾರೆ.. ನಮ್ಮ ಭಾರತೀಯರು ಯೋಗವನ್ನು ಮಾಡುವುದರ ಜೊತೆಗೆ ತರಗತಿಯನ್ನು ಕೂಡ ಮಾಡುತ್ತಾರೆ. ಅದನ್ನು ವಿದೇಶಿಗರು ಕಲಿಯುತ್ತಾರೆ ಅಂದ್ರೆ ಅಚ್ಚರಿಯ ಸಂಗತಿಯೇ ನಿಜ. ಇಂಥದ್ದೇ ತರಬೇತಿ ಇದೀಗ ಉಜಿರೆಯಲ್ಲಿ ನಡೆಯುತ್ತಿದೆ. ಭಾರತದ ಅಸ್ಮಿತೆ ಯೋಗ ವಿಶ್ವದ್ಯಾಂತ ಪಸರಿಸಿದೆ. ಪ್ರಧಾನಿ ಮೋದಿ ಅವರ ಆಸಕ್ತಿಯಿಂದ ಯೋಗದ ಮಹತ್ವವನ್ನು ವಿದೇಶಿಗರೂ ಅರಿಯುವಂತಾಗಿದೆ. ಯೋಗಾಭ್ಯಾಸಕ್ಕಾಗಿ ದೂರದ ಜರ್ಮನಿಯ ವಿದ್ಯಾರ್ಥಿಗಳು ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಗೆ ಬಂದು ಯೋಗ ತರಬೇತಿ ಪಡೆದುಕೊಂಡಿದ್ದಾರೆ. ಒಂದು […]Read More
ಮೊಗ್ರು :ಮೊಗ್ರು ಗ್ರಾಮದ ಶ್ರೀ ಕ್ಷೇತ್ರ ಮುಗೇರಡ್ಕ ದೈವಸ್ಥಾನ ವತಿಯಿಂದ ಸಾಮಾಜಿಕ ಸೇವಾ ಅಂಗವಾಗಿ ಮುಗೇರಡ್ಕ ಅಂಗನವಾಡಿ ಕೇಂದ್ರಕ್ಕೆ ಗೋದ್ರೇಜ್ ಮತ್ತು ಮಕ್ಕಳಿಗೆ ಅನುಕೂಲವಾಗುವ ಹತ್ತು ಕುರ್ಚಿಯನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮುಗೇರಡ್ಕ ದೈವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷರು ಶ್ರೀ ಡಿ ರಾಮಣ್ಣ ಗೌಡ ದೇವಸ್ಯ ಉಪಾಧ್ಯಕ್ಷರಾದ ಶ್ರೀ ಮನೋಹರ್ ಗೌಡ ಅಂತರ, ಕಾರ್ಯದರ್ಶಿಗಳಾದ ಸುಧಾಕರ್ ಗೌಡ ನ್ಯಾಮಾರ್ , ಪದಾಧಿಕಾರಿಗಳಾದ ಶ್ರೀ ರಾಮಣ್ಣ ಗೌಡ ಎರ್ಮಾಲ, ಕೇಶವ ಗೌಡ ಜಾಲ್ನಡೆ, ಬಾಬು ಗೌಡ […]Read More
ಬಂದಾರು : ಬಂದಾರು ಗ್ರಾಮದ ಕುಂಟಾಲಪಲ್ಕೆ ಅಂಗನವಾಡಿ ಕೇಂದ್ರದಲ್ಲಿ ಪೋಲಿಯೋ ಲಸಿಕೆ ಅಭಿಯಾನಕ್ಕೆ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪದ್ಮುಂಜ ಪ್ರಾಥಮಿಕ ಅರೋಗ್ಯ ಕೇಂದ್ರ ಶುಶ್ರೂಷಕಿ ಶ್ವೇತ, ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆ ಹಾಗೂ ಮಕ್ಕಳು, ಪೋಷಕರು ಉಪಸ್ಥಿತರಿದ್ದರು.Read More
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅಂಗಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ವಿಜ್ಞಾನ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಿಯುಸಿ ಕಾಲೇಜು ಉಜಿರೆ ಇಲ್ಲಿನ ಪ್ರಾಧ್ಯಾಪಕರಾಗಿರುವ ಶ್ರೀಯುತ ಸುನಿಲ್ ಪಿ.ಜೆ ಆಗಮಿಸಿದ್ದರು. ಸರ್ ಸಿ ವಿ ರಾಮನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮುಖಾಂತರ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತದನಂತರ ರಾಷ್ಟ್ರೀಯ ವಿಜ್ಞಾನ ದಿನದ ಈ ಸಂದರ್ಭದಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಪ್ರತಿಜ್ಞೆಯನ್ನು ಸ್ವೀಕರಿಸಲಾಯಿತು. […]Read More
ಬೆಳ್ತಂಗಡಿ: ಪುಣೆಯಲ್ಲಿ ಸ್ವ ಉದ್ಯೋಗ ನಡೆಸುತ್ತಿರುವ ಗುರಿಪಳ್ಳ ಸರಕಾರಿ ಶಾಲಾ ಪೂರ್ವ ವಿದ್ಯಾರ್ಥಿ ಸುಬ್ರಹ್ಮಣ್ಯ ಭಟ್ ಅವರು ಪೋಷಕರ ಸಭೆಯ ಸಂದರ್ಭ ಅಪೂರ್ವ ಕೊಡುಗೆ ಸಮರ್ಪಿಸುವ ಮೂಲಕ ತನ್ನ ಶಾಲೆಯ ಮೇಲಿನ ಅಭಿಮಾನವನ್ನು ಎತ್ತಿಹಿಡಿದರು.ದಾನಿಗಳಾದ ಅವರು ಶಾಲೆಯ “ನಲಿಕಲಿ” ವಿಭಾಗದ ಮಕ್ಕಳಿಗೆ 5 ರೌಂಡ್ ಟೇಬಲ್ಗಳು, 35 ಕುರ್ಚಿಗಳು, 5 ರೇಕ್ ಗಳು, ಒಂದು ಕಪಾಟು, ಮರದಿಂದ ನಿರ್ಮಿಸಿದ4 ಟೇಬಲ್ ಮತ್ತು 4 ಕುರ್ಚಿಗಳು,ಒಂದು ಫ್ಯಾನ್ ಇವಿಷ್ಟು ಕೊಡುಗೆಗಳನ್ನು ಈ ಸಮಾರಂಭದಲ್ಲಿ ಅರ್ಪಿಸಿದರು. ಗುರಿಪಳ್ಳದ ಕೃಷಿಕರಾದ […]Read More
ಶ್ರೀ. ಧ.ಮಂ.ಆಂ.ಮಾಧ್ಯಮ ಶಾಲೆ ಧರ್ಮಸ್ಥಳ ದಲ್ಲಿ ಉಚಿತ ಮಧುಮೇಹ ಹಾಗು ರಕ್ತದೊತ್ತಡ ಪರೀಕ್ಷೆ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಉಚಿತ ಮಧುಮೇಹ ಹಾಗೂ ರಕ್ತದೊತ್ತಡ ಪರೀಕ್ಷೆಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಜೂನಿಯರ್ ರೆಡ್ ಕ್ರಾಸ್ ವತಿಯಿಂದ ವಿದ್ಯಾರ್ಥಿಗಳ ಹೆತ್ತವರಿಗೆ ರಕ್ತದೊತ್ತಡ ಹಾಗೂ ಮಧುಮೇಹ ಪರೀಕ್ಷೆಯನ್ನು ತರಬೇತಿ ಹೊಂದಿದ ವಿದ್ಯಾರ್ಥಿಗಳುಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ ವಿ ಅವರ ಮುತುವರ್ಜಿಯಿಂದ ಶಿಕ್ಷಕರ ಮಾರ್ಗದರ್ಶನದೊಂದಿಗೆ ಉಚಿತವಾಗಿ ನಡೆಸಿಕೊಟ್ಟರು. ಇದರ ಉಪಯೋಗವನ್ನು ವಿದ್ಯಾರ್ಥಿಗಳ ಹೆತ್ತವರು ಶಾಲಾ ಶಿಕ್ಷಕ ವೃಂದ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಪಡೆದುಕೊಂಡರು.Read More
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ 10ನೇ ತರಗತಿಯ ವಿದ್ಯಾರ್ಥಿ ಹೆತ್ತವರ ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿತ್ತು.ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಉಜಿರೆಯ ದಂತ ವೈದ್ಯರಾಗಿರುವ ಡಾ .ದೀಪಾಲಿ ಎಸ್. ಡೊಂಗ್ರೆ ಆಗಮಿಸಿದ್ದರು.ಇರುವ ಕೆಲವು ದಿನಗಳಲ್ಲಿ ವಿದ್ಯಾರ್ಥಿಗಳ ಜೊತೆಗೆ ಹೆತ್ತವರ ಸಮಾಲೋಚನೆ ಹೇಗಿರಬೇಕು,ಅವರ ಚಲನವನಗಳ ಕುರಿತು ಹೇಗೆ ಗಮನಿಸಬೇಕು,ಮಾತುಕತೆ ಮುಕ್ತವಾಗಿ ಹೇಗಿರಬೇಕು ಎಂಬಿತ್ಯಾದಿ ವಿಚಾರಗಳನ್ನು ಹಲವಾರು ನೈಜ ಉದಾಹರಣೆಗಳ ಮುಖಾಂತರ ವಿದ್ಯಾರ್ಥಿಗಳ ಹೆತ್ತವರಿಗೆ ಅವರು ತಿಳಿಯ ಪಡಿಸಿದರು . ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ.ವಿ.ಹತ್ತನೇ […]Read More
ರಾಜ್ಯಮಟ್ಟದ ಪ್ರತಿಭಾ ಕಾರಂಜಿ 2023-24 ಸಾಲಿನ ಪದ್ಯ /ಕವನ ವಾಚನ ಸ್ಪರ್ಧೆಯಲ್ಲಿ 3
ಬಂದಾರು : ಫೆ 08,09 ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ, ಇಲಾಖೆ, ಬೆಂಗಳೂರು. ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಧಾರವಾಡ, ಉಪನಿರ್ದೇಶಕರ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ, ಧಾರವಾಡ ಇವುಗಳ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ 2023-24 ಕವನ ವಾಚನ ಸ್ಪರ್ಧೆಯಲ್ಲಿ ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಪೆರ್ಲ-ಬೈಪಾಡಿ ಸರಕಾರಿ ಪ್ರೌಢ ಶಾಲೆಯ 9 ತರಗತಿ ವಿದ್ಯಾರ್ಥಿನಿ ಕು|ನಿತ್ಯಶ್ರೀ. ಖಂಡಿಗ. 3 ನೇ ಸಮಾಧಾನಕರ ಪ್ರಶಸ್ತಿ ಪಡೆದಿರುತ್ತಾಳೆ. ಇವರು ಬಂದಾರು […]Read More