• July 15, 2024

ಶ್ರೀ ಧ.ಮ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಪೋಷಕರ ಸಮಾಲೋಚನ ಸಭೆ

 ಶ್ರೀ  ಧ.ಮ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಪೋಷಕರ ಸಮಾಲೋಚನ ಸಭೆ


ಶ್ರೀ.ಧ.ಮ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ 8 ರಂದು ಪೋಷಕರ ಸಮಾಲೋಚನಾ ಸಭೆಯನ್ನು ಕರೆಯಲಾಯಿತು.

ಈ ಸಭೆಗೆ ಎಸ್ . ಡಿ. ಎಮ್ ತಾಂತ್ರಿಕ ಮಹಾವಿದ್ಯಾಲಯ ಉಜಿರೆಯ ಮುಖ್ಯ ಗ್ರಂಥಪಾಲಕಿಯಾದ ಡಾಕ್ಟರ್ ರಜತ ಪಿ ಶೆಟ್ಟಿ ಆಗಮಿಸಿದ್ದರು. ಇವರು ಮಕ್ಕಳಿಗೆ ಓದುವ ಪ್ರವೃತ್ತಿಯನ್ನು ಹೇಗೆ ಅಭಿವೃದ್ಧಿ ಪಡಿಸಬೇಕು ಎಂಬುದನ್ನು ತಿಳಿ ಹೇಳಿದರು.

ಮಕ್ಕಳು ಮುಖ್ಯವಾಗಿ ಪುಸ್ತಕವನ್ನು ಪ್ರೀತಿಸಬೇಕು ಹಾಗೂ ಇಂದಿನ ಯುವ ಪೀಳಿಗೆಯು ದಾರಿ ತಪ್ಪುವುದನ್ನು ಪುಸ್ತಕ ತಡೆಗಟ್ಟುತ್ತದೆ ಎಂಬುದನ್ನು ಅನೇಕ ಉದಾಹರಣೆಗಳೊಂದಿಗೆ ತಿಳಿಸಿ ಹೇಳಿದರು. ಈ ಕಾರ್ಯಕ್ರಮವನ್ನು ಮಹಿತ್ ಮತ್ತು ತಂಡದವರು ಪ್ರಾರ್ಥನೆಯೊಂದಿಗೆ ಆರಂಭಿಸಿ, ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಪರಿಮಳ ಎಂ ವಿ ಸ್ವಾಗತಿಸಿ ಶ್ರೀಮತಿ ಅಮೃತ ವಿ ಶೆಟ್ಟಿ ಅತಿಥಿಗಳ ಪರಿಚಯ ನೀಡಿ, ಶ್ರೀಮತಿ ದಿವ್ಯ ನಿರೂಪಿಸಿ ಮತ್ತು ಶ್ರೀಮತಿ ಜಯವತಿ ಜೈನ್ ಕಾರ್ಯಕ್ರಮವನ್ನು ವಂದಿಸಿದರು.

Related post

Leave a Reply

Your email address will not be published. Required fields are marked *

error: Content is protected !!