ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ ಉಜಿರೆಯಲ್ಲಿ ಪದವಿ ಶಿಕ್ಷಣವನ್ನು ಪಡೆದಿರುವ ರಕ್ಷಿತಾ ಎಂ ಬಿ ಇವರು ಭಾರತೀಯ ಸೇನೆಯ ಪ್ಯಾರಾ ಮಿಲಿಟರಿ ಫೋರ್ಸ್ SSCGD ಅಸ್ಸಾಂ ರೈಫಲ್ಸ್ ಗೆ ಆಯ್ಕೆಯಾಗಿದ್ದಾರೆ. ಇವರು ಮೂಲತಃ ಸುಳ್ಯ ತಾಲೂಕಿನ ಐವರ್ನಾಡಿಯವರಾಗಿದ್ದು ಪ್ರಸ್ತುತ ಧರ್ಮಸ್ಥಳದ ಪಾಂಗಾಳದಲ್ಲಿ ವಾಸವಿದ್ದಾರೆ. ಈಕೆ ಭಾಸ್ಕರ ಮಡ್ತಿಲ ಮತ್ತು ಮಮತಾ ದಂಪತಿಗಳ ಸುಪುತ್ರಿ. ಇವರಿಗೆ ಶಾಸಕರಾದ ಹರೀಶ್ ಪೂಂಜರವರು ಶಾಲು ಹೊದಿಸಿ ಗೌರವವನ್ನು ಸಲ್ಲಿಸಿದ್ದಾರೆ.
ಭಾರತೀಯ ಸೇನೆಯ ಅಗ್ನಿಪಥ ಯೋಜನೆಗೆ ಅಗ್ನಿವೀರರಾಗಿ ಆಯ್ಕೆಯಾದ ಬೆಳ್ತಂಗಡಿ ತಾಲೂಕಿನ 4 ಜನ
ಬೆಳ್ತಂಗಡಿ: ಭಾರತೀಯ ಸೇನೆಗೆ ಅಗ್ನಿವೀರ್ ನೇಮಕಾತಿಯಲ್ಲಿ ಬೆಳ್ತಂಗಡಿ ತಾಲೂಕಿನಿಂದ ಅಗ್ನಿವೀರರಾಗಿ ನಾಲ್ಕು ಜನ ಆಯ್ಕೆಗೊಂಡಿರುವುದು ಶ್ಲಾಘನೀಯ. ಭಾರತೀಯ ಭೂ ಸೇನೆ ತಾಂತ್ರಿ ವಿಭಾಗಕ್ಕೆ ಬೆಳ್ತಂಗಡಿ ತಾಲೂಕಿನ ಧನುಷ್ ಗೌಡ, ಭಾರತೀಯ ನೌಕಾ ಸೇನೆಗೆ ಸೂರಜ್ ಶೆಟ್ಟಿ, ಭಾರತೀಯ ಭೂ ಸೇನೆಗೆ ರಜನೀಶ್ ಹಾಗೂ ವಿಜೇತ್ ಆಯ್ಕೆಗೊಂಡಿದ್ದಾರೆ. ಇವರಿಗೆ ಬೆಳ್ತಂಗಡಿ ತಾಲೂಕಿನ ಜನತೆಯ ಪರವಾಗಿ ಬೆಳ್ತಂಗಡಿ ಶಾಸಕರು ಹರೀಶ್ ಪೂಂಜ ಅಭಿನಂದನೆಯನ್ನು ತಿಳಿಸಿದ್ದಾರೆ.Read More
ಬಂದಾರು: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ವಾಲಿಬಾಲ್, ಖೊ-ಖೊ ಪಂದ್ಯಾವಳಿಯಲ್ಲಿ ಹಾಗೂ ಅಥ್ಲೆಟಿಕ್ಸ್ ನಲ್ಲಿ ಬೆಳ್ತಂಗಡಿ ತಾಲೂಕಿನ ಹೆಸರನ್ನು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚುವಂತೆ ಮಾಡಿದ ಸ.ಉ.ಹಿ.ಪ್ರಾ ಶಾಲೆ ಬಂದಾರು ಇಲ್ಲಿಯ ದೈಹಿಕ ಶಿಕ್ಷಣ ಶಿಕ್ಷರು, ಅಪ್ರತಿಮ ಕ್ರೀಡಾ ಸಾಧಕರಾದ ಪ್ರಶಾಂತ್ ಅವರು ಈ ಬಾರಿಯ ರಾಜ್ಯ ಮಟ್ಟದ “ಅಕ್ಷರ ಸಿರಿ” ಪ್ರಶಸ್ತಿಗೆ ಬಾಜನರಾಗಿದ್ದಾರೆ. ತುಮಕೂರಿನಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ರಾಜ್ಯದ ಶಿಕ್ಷಣ ಸಚಿವರಿಂದ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಇವರಿಗೆ ತಾಲೂಕಿನ ಸಮಸ್ತ ಗುರುಬಳಗ ಅಭಿನಂದನೆಯನ್ನು […]Read More
ಕೊಕ್ಕಡ: ವಿದ್ಯಾಭಾರತಿಯ ಕ್ರೀಡಾ ವಿಭಾಗದಿಂದ ರಾಜಸ್ಥಾನದ ಜೈಪುರದಲ್ಲಿ ನಡೆದ ರಾಷ್ಟ್ರ ಮಟ್ಟದ ಕೋಕೋ ಸ್ಪರ್ಧೆಯಲ್ಲಿ ನೆಲ್ಯಾಡಿ ಶ್ರೀ ರಾಮ ಶಾಲೆಯ ವಿದ್ಯಾರ್ಥಿನಿ ಸಾನ್ವಿ ಆಲಂಬಿಲ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಈಕೆ ಕೊಕ್ಕಡ ಗ್ರಾಮದ ನಿವಾಸಿ ರಮೇಶ್ ಮತ್ತು ಪ್ರೀತಾ ದಂಪತಿ ಪುತ್ರಿ. ಈಕೆಯ ಸಾಧನೆಗೆ ಶಾಸಕ ಹರೀಶ್ ಪೂಂಜರವರು ಅಭಿನಂದನೆ ಸಲ್ಲಿಸಿದ್ದಾರೆ.Read More
ಶೌರ್ಯ ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣೆ ಸಮಿತಿ ಕಣಿಯೂರು ಘಟಕದ ಮಾಸಿಕ ಸಭೆ ಹಾಗೂ ನೂತನ ಸ್ವಯಂ ಸೇವಕರ ಸೇರ್ಪಡೆ ಸಭೆಯನ್ನು ಅ.14 ರಂದು ಕೊರಿಂಜ ಸಭಾಭವನದಲ್ಲಿ ನಡೆಸಲಾಯಿತು. ಈ ಸಭೆಗೆ ವಿಪತ್ತು ನಿರ್ವಹಣಾ ಯೋಜನಾಧಿಕಾರಿ ಜೈವಂತ ಪಟಗಾರ ಹಾಗೂ ಕಣಿಯೂರು ವಲಯದ ಮೇಲ್ವಿಚಾರಕರಾದ ಪ್ರೇಮಾ,ಕಣಿಯೂರು ಘಟಕದ ಸಂಯೋಜಕಿ ಶ್ರೀಮತಿ ಚಂದ್ರಕಲಾ ಹಾಗೂ ಕಣಿಯೂರು ಘಟಕದ ಎಲ್ಲಾ ಸ್ವಯಂಸೇವಕರು ಹಾಗೂ ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು. ಹೊಸದಾಗಿ 13 ಸದಸ್ಯರ ಇಳಂತಿಲ ಘಟಕವನ್ನು […]Read More
ಬೆಳ್ತಂಗಡಿ: ಪದವಿ ಪೂರ್ವ ಶಿಕ್ಷಣ ಇಲಾಖೆ ಮಂಗಳೂರು ಮತ್ತು ಶಾರದಾ ಪದವಿ ಪೂರ್ವ ಕಾಲೇಜು ಮಂಗಳೂರು ಇವರ ಆತಿಥ್ಯದಲ್ಲಿ ನಡೆದ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಬೆಳ್ತಂಗಡಿ ತಾಲೂಕನ್ನು ಪ್ರತಿನಿಧಿಸಿದ ವಾಣಿ ಪದವಿ ಪೂರ್ವ ಕಾಲೇಜಿನ ಬಾಲಕರ ತಂಡವು ದ್ವಿತೀಯ ಸ್ಥಾನವನ್ನು ಪಡೆದು ಕೊಂಡಿದೆ ಮತ್ತು ವಾಣಿ ಪದವಿ ಪೂರ್ವ ಕಾಲೇಜಿನ ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಗೌತಮ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ತಂಡವನ್ನು ತರಬೇತಿ ಗೊಳಿಸಿದ ಕಾಲೇಜಿನ ಕ್ರೀಡಾ ಸಂಯೋಜಕ ನಂದಕುಮಾರ್ ನ್ನು ಮತ್ತು […]Read More
ಬೆಳ್ತಂಗಡಿ: ಕಾಂಗ್ರೆಸ್ ಪಕ್ಷದ ವತಿಯಿಂದ ನಡೆಯುವ ಕನ್ಯಾಕುಮಾರಿ ಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಪಾದಯಾತ್ರೆ ಕಾರ್ಯಕ್ರಮ ದ ಗುಂಡ್ಲುಪೇಟೆ ಮತ್ತು ವರುಣ ಕ್ಷೇತ್ರದ ಉಸ್ತುವಾರಿಯಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರವರು ಕೆಪಿಸಿಸಿ ಯಿಂದ ನೇಮಕಗೊಂಡಿದ್ದಾರೆ. 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಕವರ್ ಮಾಡಲು ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಪ್ರತಿದಿನ 6 ಗಂಟೆಗಳ ಕಾಲ ನಡೆಯಲಿದ್ದಾರೆ. ಎಲ್ಲಾ ರಾಜ್ಯ ಘಟಕಗಳ ಅಧ್ಯಕ್ಷರು ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು […]Read More
ಬೆಳ್ತಂಗಡಿ : ಬೆಳ್ತಂಗಡಿ ವ್ಯಾಪ್ತಿಯ ರೆಂಕೆದ ಗುತ್ತು ನಿವಾಸಿ ದೀಪಕ್ ಇವರು ಬಿಡಿಸಿದ “ಮ್ಯಾಗ್ಸಿಮಮ್ ಪೈಂಟಿಂಗ್ಸ್ ಆನ್ ಗ್ಲಾಸ್ ಶೀಟ್” (ಗ್ಲಾಸ್ ಆರ್ಟ್ )ಗೆ “ಇಂಡಿಯಾ ಬುಕ್ ಆಫ್ ರೆಕಾರ್ಡ್” ಲಭಿಸಿದೆ. ಇವರು ರಚಿಸಿದ ಹಲವಾರು ಗ್ಲಾಸ್ ಆರ್ಟ್ ಗೆ ವಿವಿಧ ಕಡೆಗಳಲ್ಲಿ ಹಲವು ಪ್ರಶಸ್ತಿಗಳು ದೊರೆತಿದ್ದು, ಇತ್ತೀಚೆಗೆ ಮೋದಿಯವರ 8ನೇ ವರ್ಷದ ಸಮರ್ಥ ಆಡಳಿತದ ಪ್ರಯುಕ್ತ ಆಯೋಜಿಸಲಾಗಿದ್ದ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ತಾಲೂಕಿನ ಶಾಸಕರಾದ ಹರೀಶ್ ಪೂಂಜ ರವರು ಇವರ ಸಾಧನೆಗೆ ಸನ್ಮಾನವನ್ನು ಮಾಡಿದ್ದಾರೆ. ಉದ್ಯೋಗದ […]Read More
ಬೆಳ್ತಂಗಡಿ: ” ಅಗ್ನಿ ವೀರ್” ಆಯ್ಕೆ ಶಿಬಿರವು ಹಾವೇರಿಯಲ್ಲಿ ಸಪ್ಟೆಂಬರ್ 1ರಂದು ಜರುಗಲಿದ್ದು ಈ ನಿಟ್ಟಿನಲ್ಲಿ ಆಸಕ್ತ ಅಭ್ಯರ್ಥಿಗಳಿಗೆ ಸುಮಾರು ಒಂದು ತಿಂಗಳಿನಿಂದ ಮಾಜಿ ಸೈನಿಕರಾದ ಉಮೇಶ್ ಬಂಗೇರ ಅವರ ನೇತೃತ್ವದಲ್ಲಿ ತರಬೇತಿ ನೀಡಲಾಗಿತ್ತು, ಇಂದು ಮತ್ತು ನಾಳೆ ಬೆಳ್ತಂಗಡಿಯ ಸುಮಾರು 50 ಮಂದಿ ಅಭ್ಯರ್ಥಿಗಳು ಹಾವೇರಿಗೆ ತೆರಳುತ್ತಿದ್ದು , ಅಭ್ಯರ್ಥಿಗಳು ಇಂದು ಶ್ರಮಿಕ ಕಚೇರಿಗೆ ಆಗಮಿಸಿದರು. ಈ ಸಂಧರ್ಭದಲ್ಲಿ ಶಾಸಕ ಹರೀಶ್ ಪೂಂಜ ಇವರು ಬೆಳ್ತಂಗಡಿಯ ಅಭ್ಯರ್ಥಿಗಳಿಗೆ ಶುಭಕೋರಿ ಬೀಳ್ಕೊಟ್ಟರು.Read More
ಬೆಳ್ತಂಗಡಿ: ಪ್ರತಿಷ್ಠಿತ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ 5 ಮಂದಿ ಸದಸ್ಯರು ವಲಯ ತರಬೇತುದಾರರಾಗಿ ಆಯ್ಕೆಯಾಗಿದ್ದಾರೆ. ಜೋನ್ ಟ್ರೈನಿಂಗ್ ವರ್ಕಶಾಪ್ ಸೆಮಿನರ್ ನಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಕಾರ್ಯದರ್ಶಿ ಶಂಕರ್ ರಾವ್, ಉಪಾಧ್ಯಕ್ಷರುಗಳಾದ ರಂಜಿತ್ ಹೆಚ್.ಡಿ, ಸುಧೀರ್ ಕೆ ಎನ್ , ಹೇಮಾವತಿ,ಸದಸ್ಯೆ ಸುಭಾಷಿಣಿ ಇವರು ವಲಯ ತರಬೇತುದಾರರಾಗಿ ಆಯ್ಕೆಯಾಗಿದ್ದಾರೆ. ವಲಯಾಧ್ಯಕ್ಷ ರೋಯನ್ ಕ್ರಾಸ್ತ, ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷ ಪ್ರಸಾದ್ ಬಿ.ಎಸ್,ವಲಯ ಉಪಾಧ್ಯಕ್ಷ ಪ್ರಶಾಂತ್ ಲಾಯಿಲ, ವಲಯಾಧಿಕಾರಿಗಳಾದ ಅಭಿನಂದನ್ ಹರೀಶ್ ಕುಮಾರ್,ಸ್ವರೂಪ್ ಶೇಖರ್ ಅಭಿನಂದಿಸಿ ಗೌರವಿಸಿದರು.Read More