ಸೌತ್ ಕೆನರಾ ಫೋಟೋಗ್ರಾಪರ್ಸ್ ಅಸೋಸಿಯೇಷನ್ (ರಿ) ದಕ್ಷಿಣ ಕನ್ನಡ ಉಡುಪಿ ಇದರಜಿಲ್ಲಾ ಕ್ರೀಡಾ ಕಾರ್ಯದರ್ಶಿಯಾಗಿ ಬೆಳ್ತಂಗಡಿ ವಲಯದ ಭಾರದ್ವಜ್ ಉಜಿರೆ ಆಯ್ಕೆಯಾಗಿದ್ದಾರೆ.
ಬೆಳಾಲು: ಅ 01 ಮೈತ್ರಿ ಯುವಕ ಮಂಡಲ (ರಿ.) ಬೆಳಾಲು ಇದರಮುಂದಿನ ಎರಡು ವರ್ಷದ ಅವಧಿಗೆ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಸಂಘದ ಸಭಾಂಗಣದಲ್ಲಿ ಜರುಗಿತು. ಗೌರವಾಧ್ಯಕ್ಷರಾದ ಪ್ರವೀಣ್ ವಿಜಯ್ ,ಅಧ್ಯಕ್ಷರಾದ ರಾಜೇಶ್ ಪಾರಳ, ಕಾರ್ಯದರ್ಶಿ ಮಹಮ್ಮದ್ ಆದರ್ಶನಗರ ಹಾಗೂ ಗೌರವ ಸಲಹೆಗಾರ ಶ್ರೀನಿವಾಸ್ ಗೌಡ ನೋಟರಿ ವಕೀಲರು, ಹಾಗೂ ಸಂಘದ ಸರ್ವ ಸದಸ್ಯರ ಸಮ್ಮುಖದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ನಿತಿನ್ ಮೋನಿಸ್,ಕಾರ್ಯದರ್ಶಿಯಾಗಿ ವಿಘ್ನೇಶ್ ಮುಂಡೆತ್ಯಾರ್, ಉಪಾಧ್ಯಕ್ಷರಾಗಿ ಆಸೀಫ್ ಮುಂಡೆತ್ಯಾರ್,ಜತೆ ಕಾರ್ಯದರ್ಶಿಯಾಗಿ ನವನೀತ್ ಗೌಡ […]Read More
ಕಲ್ಮಂಜದಲ್ಲಿ ನೂತನವಾಗಿ ಸ್ಥಾಪನೆಯಾದ “ದೇವರಗುಡ್ಡೆ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಕಲ್ಮಂಜ” ಇದರ ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ನಡೆದಿದೆ. ಸಂಘದ ಅಧ್ಯಕ್ಷರಾಗಿ ರಮೇಶ್ ಗೌಡ ಗಲ್ಲೋಡಿ ಮತ್ತು ಉಪಾಧ್ಯಕ್ಷರಾಗಿ ಸೂರ್ಯನಾರಾಯಣ ಹೊಳ್ಳ ಪಜಿರಡ್ಕ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸಚಿನ್ ಗೌಡ ಕಲ್ಮಂಜ ಅವರನ್ನು ನೇಮಿಸಿಕೊಳ್ಳಲಾಗಿದೆ.ಹಾಗೆಯೇ ನಿರ್ದೇಶಕರುಗಳಾಗಿ ರಾಧಾಕೃಷ್ಣ,ಶ್ರೀನಿವಾಸ್,ಮಂಜುನಾಥ್ ಗುಡಿಗಾರ್,ಗೀತಾ ನಾಯ್ಕ್,ಪುಷ್ಪವತಿ,ಶಿವಪ್ರಸಾದ್,ದೇಜಪ್ಪ ಪೂಜಾರಿ,ಗಿರೀಶ್ ಗೌಡ,ರಾಘವೇಂದ್ರ ವಿಷ್ಣುನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.Read More
ಬಳಂಜ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಬಳಂಜ,ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಬಳಂಜ,ನಾಲ್ಕೂರು,ತೆಂಕಕಾರಂದೂರು ಇದರ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಸಾಮಾಜಿಕ,ಧಾರ್ಮಿಕ,ಶೈಕ್ಷಣಿಕ ಕ್ಷೇತ್ರದ ಯುವ ಮುಂದಾಳು ಸಂತೋಷ್ ಪಿ ಕೋಟ್ಯಾನ್ ಬಳಂಜ ಆಯ್ಕೆಯಾಗಿದ್ದಾರೆ. ಒಂದೇ ಜಾತಿ,ಒಂದೇ ಮತ, ಒಬ್ಬನೇ ದೇವರು ಎಂಬ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಂದೇಶಗಳನ್ನು ಪರಿಪಾಲಿಸಿಕೊಂಡು ಬರುತ್ತಿರುವಸುಮಾರು 44 ವರ್ಷಗಳ ಪರಂಪರೆಯಿರುವ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಗೌರವಾಧ್ಯಕ್ಷ ಹೆಚ್.ಧರ್ಣಪ್ಪ ಪೂಜಾರಿ ಮತ್ತು […]Read More
ಬೆಳ್ತಂಗಡಿ: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ. ಮಂಗಳೂರು ವತಿಯಿಂದ ಮಂಗಳೂರಿನ ಕೊರ್ಡೆಲ್ ಹಾಲ್ ನಲ್ಲಿ 2022-23ನೇ ಸಾಲಿನ 37ನೇ ವಾರ್ಷಿಕ ಸಭೆ ನಡೆಯಿತು. ಕಾರ್ಯಕ್ರಮದಲ್ಲಿ ಒಕ್ಕೂಟದ ಜಿಲ್ಲಾವಾರು ಉತ್ತಮ ಸಂಘ ಪ್ರಶಸ್ತಿಯು ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ನೀಡಲಾಯಿತು. ಪ್ರಶಸ್ತ್ರಿಯನ್ನು ಸಂಘದ ಅಧ್ಯಕ್ಷರಾದ ಮಮತಾ ಕೆ ಮತ್ತು ಕಾರ್ಯನಿರ್ವಹಣಾಧಿಕಾರಿ ಭವ್ಯ ಕೆ. ಎಸ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ. […]Read More
ಕ್ರಿಯಾಶೀಲತೆ, ಪಾದರಸದ ಚಟುವಟಿಕೆ,ನ್ಯಾನೋ ಕಥೆಯ ಸರದಾರಿಣಿ ಶ್ವೇತಾ ನಿಹಾಲ್ ಜೈನ್ಈಗಾಗಲೇ 20 ಕೃತಿಗಳನ್ನು ಬರೆದಿ ದ್ದಾರೆ, 8 ತರಗತಿಯಿಂದಲೇ ಬರವಣಿಗೆ ಪ್ರಾರಂಭ ಮಾಡಿದ ಯುವ ಲೇಖಕಿ, ಇವರು ವಿಶೇಷ ವಾಗಿ ಬರೆಯುವ ನ್ಯಾನೋ ಕತೆ ಕರ್ನಾಟಕದ ಮನ ಮನೆ ಗೆದ್ದಿದೆ. ಮನಸ್ಸು, ದೇಹ, ಆತ್ಮ ಮೂರನ್ನು ಸಮನ್ವಯ ಸಾದಿಸುವ ಪರಿಶುದ್ಧ ಕ್ರಿಯೆಯ ಮೂಲಕ 42 ಕ್ಕೂ ಹೆಚ್ಚು ಕ್ರಿಯೆಗಳನ್ನು ಕರಗತ ಮಾಡಿ,ಸಂಶೋಧನೆ ಮಾಡಿ ಹಲವಾರು ಉಚಿತ ಹೀಲಿಂಗ್ ತರಗತಿಗಳನ್ನು ನೀಡಿದ್ದಾರೆ, ಪರಿಶುದ್ಧ ಕ್ರಿಯೆಯಲ್ಲಿ ಸಪ್ತ ಚಕ್ರ […]Read More
ಬೆಳಾಲು: ಬೆಳಾಲು ಗ್ರಾ.ಪಂ ನ ಅಧ್ಯಕ್ಷ ಸ್ಥಾನಕ್ಕೆ ಮುಂದಿನ ಎರಡೂವರೆ ವರ್ಷದ ಅವಧಿಗೆ ಬಿಜೆಪಿ ಬೆಂಬಲಿತ ವಿದ್ಯಾ ಶ್ರೀನಿವಾಸ್ ಗೌಡ ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಗೀತಾ ಆಯ್ಕೆಯಾಗಿದ್ದಾರೆ. ಇಲ್ಲಿ 12 ಸದಸ್ಯರ ಬಲ ಇದ್ದು 6 ಮಂದಿ ಬಿಜೆಪಿ ಮತ್ತು 6 ಮಂದಿ ಕಾಂಗ್ರೆಸ್ ಬೆಂಬಲಿ ಸದಸ್ಯರನ್ನು ಹೊಂದಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾಗಿದ್ದು ಬಿಜೆಪಿಯಿಂದ ಸುರೇಂದ್ರ ಗೌಡ, ವಿದ್ಯಾ ಶ್ರೀನಿವಾಸ್ ಗೌಡ ಮತ್ತು ಕಾಂಗ್ರೆಸ್ ನಿಂದ ದಿನೇಶ್ ಕೋಟ್ಯಾನ್ ನಾಮಪತ್ರ ಸಲ್ಲಿಸಿದ್ದು […]Read More
ಬಂದಾರು; ಬಂದಾರು ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ದಿನೇಶ್ ಗೌಡ ಖoಡಿಗ ಹಾಗೂ ಉಪಾಧ್ಯಕ್ಷೆಯಾಗಿ ಪುಷ್ಪಾವತಿ ಬರಮೇಲು ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಾಮಾಜಿಕ ವಲಯ ಅರಣ್ಯಾಧಿಕಾರಿ ಸಂಧ್ಯಾ.ಪಿ.ಡಿ ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಮೋಹನ್ ಬಂಗೇರ,ಸಿಬ್ಬಂದಿ ವರ್ಗ, ಗ್ರಾಮ ಪಂಚಾಯತ್ ಸದಸ್ಯರು,ಬಿಜೆಪಿ ಪಕ್ಷದ ಪ್ರಮುಖರು,ಕಾರ್ಯಕರ್ತರು ಉಪಸ್ಥಿತರಿದ್ದರು.Read More