ಬೆಳಾಲು ಗ್ರಾ.ಪಂ ಅದೃಷ್ಟ ಚೀಟಿಯಲ್ಲಿ ಬಿಜೆಪಿಯ ವಿದ್ಯಾ ಶ್ರೀನಿವಾಸ್ ಗೆ ಅಧ್ಯಕ್ಷ ಸ್ಥಾನ, ಉಪಾಧ್ಯಕ್ಷರಾಗಿ ಗೀತಾ ಅವಿರೋಧ ಆಯ್ಕೆ

ಬೆಳಾಲು: ಬೆಳಾಲು ಗ್ರಾ.ಪಂ ನ ಅಧ್ಯಕ್ಷ ಸ್ಥಾನಕ್ಕೆ ಮುಂದಿನ ಎರಡೂವರೆ ವರ್ಷದ ಅವಧಿಗೆ ಬಿಜೆಪಿ ಬೆಂಬಲಿತ ವಿದ್ಯಾ ಶ್ರೀನಿವಾಸ್ ಗೌಡ ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಗೀತಾ ಆಯ್ಕೆಯಾಗಿದ್ದಾರೆ.
ಇಲ್ಲಿ 12 ಸದಸ್ಯರ ಬಲ ಇದ್ದು 6 ಮಂದಿ ಬಿಜೆಪಿ ಮತ್ತು 6 ಮಂದಿ ಕಾಂಗ್ರೆಸ್ ಬೆಂಬಲಿ ಸದಸ್ಯರನ್ನು ಹೊಂದಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾಗಿದ್ದು ಬಿಜೆಪಿಯಿಂದ ಸುರೇಂದ್ರ ಗೌಡ, ವಿದ್ಯಾ ಶ್ರೀನಿವಾಸ್ ಗೌಡ ಮತ್ತು ಕಾಂಗ್ರೆಸ್ ನಿಂದ ದಿನೇಶ್ ಕೋಟ್ಯಾನ್ ನಾಮಪತ್ರ ಸಲ್ಲಿಸಿದ್ದು ಬಿಜೆಪಿಯ ಸುರೇಂದ್ರ ಗೌಡ ನಾಮಪತ್ರ ವಾಪಸ್ ಪಡೆದರು.
ಬಳಿಕ ದಿನೇಶ್ ಕೋಟ್ಯಾನ್ ಮತ್ತು ವಿದ್ಯಾ ಶ್ರೀನಿವಾಸ ಗೌಡರ ನಡುವೆ ಮತದಾನ ನಡೆದು ಸಮಬಲ ತಲಾ 6 ಮತಗಳನ್ನು ಪಡೆದರು. ಬಳಿಕ ಚೀಟಿ ಎತ್ತುವ ಮೂಲಕ ಬಿಜೆಪಿ ಬೆಮಬಲಿತ ವಿದ್ಯಾ ಶ್ರೀನಿವಾಸ್ ಗೌಡ ಆಯ್ಕೆಯಾದರು.