ಉಜಿರೆ: ಉಜಿರೆ ಗ್ರಾಮದ ನಿವಾಸಿ ಸುರೇಶ್ (40) ಎಂಬ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಬಾಬು ಮುಗೇರ ಇವರ ಪುತ್ರ ಎಂದು ತಿಳಿದುಬಂದಿದ್ದು, ನಿರ್ಮಾಣ ಹಂತದಲ್ಲಿರುವ ಮನೆಯ ಕೋಣೆಯ ಒಳಗೆ ನೇಣು ಬಿಗಿದುಕೊಂಡಿದ್ದಾರೆ. ನಿಖರ ಕಾರಣ ತಿಳಿದುಬರಬೇಕಿದೆ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ
ಪ್ರಧಾನಿ ನರೇಂದ್ರ ಮೋದಿ ಯವರ ವಿರುದ್ದ ಪ್ರಚೋದನಕಾರಿ ಭಾಷಣ, ಸಮಾಜದಲ್ಲಿ ಅಶಾಂತಿ ಮತ್ತು ಗಲಭೆಗೆ ಪ್ರಚೋದನೆ ಹೇಳಿಕೆ ನೀಡಿದ ರಕ್ಷಿತ್ ಶಿವರಾಂ ವಿರುದ್ಧ ಬೆಳ್ತಂಗಡಿ ಬಿಜೆಪಿ ಯುವಮೋರ್ಚಾದಿಂದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಯಿತು. ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನೀತ್ ಸಾವ್ಯ, ಪದಾಧಿಕಾರಿಗಳಾದ ಪ್ರಕಾಶ್ ಬಾರ್ಯ, ಗಿರೀಶ್ ಗೌಡ ಬಿ. ಕೆ, ಹರೀಶ್ ಸoಬೊಲ್ಯ, ಪವನ್ ,ಜಗದೀಶ್ ಕನ್ನಾಜೆ, ಮೇಘರಾಜ್, ಸನತ್ ನಾಲ್ಕೂರು, ಪ್ರಮುಖರಾದ ಪ್ರದೀಪ್ ಗುರುವಾಯನಕೆರೆ, ಪ್ರದೀಪ್ ಶೆಟ್ಟಿ, ಉಪಸ್ಥಿತರಿದ್ದರು.Read More
ದುರ್ಗದ ಬೆಟ್ಟ, ರಾಣಿ ಝರಿ, ಮೈದಾಡಿ ಬೆಟ್ಟದ ಕಡೆಯಿಂದ ಹೊಳೆಯ ನೀರಿನಲ್ಲಿ ಮಣ್ಣು ಮಿಶ್ರಿತ ನೀರು ರಭಸದಿಂದ ಬರುತ್ತಿರುವ ಕುರಿತು ಸ್ಥಳೀಯರಿಂದ ಮಾಹಿತಿ ಬಂದಿದ್ದು, ಬೆಟ್ಟಗಳ ಹಾಗೂ ನದಿಯ ಪಾತ್ರದಲ್ಲಿರುವ ತಾಲೂಕಿನ ಜನರು ಜಾಗರುಕರಾಗಿರುವಂತೆ ಶಾಸಕರು ಮನವಿ ಮಾಡಿದ್ದಾರೆ. ಜಿಲ್ಲಾಡಳಿತ ಹಾಗೂ ಭೂ ಶಾಸ್ತ್ರಜ್ಞರು ಈ ಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವಸ್ತುಸ್ಥಿತಿ ಬಗ್ಗೆ ವರದಿ ನೀಡಲಿದ್ದಾರೆ. ನೀರಿನ ಮಟ್ಟ ಹಾಗೂ ಭೂ ಕುಸಿತದ ಲಕ್ಷಣ ಕಂಡರೆ ಕೂಡಲೇ ಸಮಯಾಸಮಯವೆನ್ನದೆ ಶಾಸಕರನ್ನು, ಅವರ ಕಚೇರಿಯನ್ನು […]Read More
ತುಳುನಾಡಿನ ದೈವಾರಾಧನೆಗೆ ಅಪಚಾರ ಎಸಗಿದ ಮಹಿಳೆ: ಕದ್ರಿ ದೇವಸ್ಥಾನದಲ್ಲಿ ಕಣ್ಣೀರಿಟ್ಟು ದೇವರ ಮುಂದೆ
ಮಂಗಳೂರು (ಆ.14): ತುಳುನಾಡಿನ ಜನರ ನಂಬಿಕೆ ಹಾಗೂ ಅಸ್ಮಿತೆಯಾದ ದೈವಾರಾಧನೆಗೆ ಅಪಚಾರ ಎಸಗಿದ ಮಹಿಳೆಯೊಬ್ಬರು ಬುಧವಾರ ಕದ್ರಿ ದೇವಸ್ಥಾನಕ್ಕೆ ಆಗಮಿಸಿ ಕಣ್ಣೀರಿಟ್ಟು ದೇವರ ಕ್ಷಮೆ ಕೇಳಿದ್ದಾರೆ. ಬಳಿಕ ಕದ್ರಿ ಮಂಜುನಾಥನಿಗೆ ಮಂಡಿಮಯೂರಿ ಮಹಿಳೆ ಕ್ಷಮೆಯಾಚಿಸಿದ್ದಾರೆ. ದೈವನರ್ತನ ಮಾಡುವ ಮೂಲಕ ತುಳುನಾಡ ದೈವಾರಾಧನೆಗೆ ಮಹಿಳೆ ಅಪಮಾನ ಮಾಡಿದ್ದರು. ಇದಕ್ಕೆ ಸಾಕಷ್ಟು ಆಕ್ರೋಶ ವ್ಯಕ್ತವಾದ ಬಳಿಕ ಕದ್ರಿ ಮಂಜುನಾಥ ಸ್ವಾಮಿಗೆ ಮಂಡಿಯೂರಿ ಮಹಿಳೆ ಕ್ಷಮೆ ಯಾಚಿಸಿದ್ದಾರೆ. ಅದರೊಂದಿಗೆ ದೇವರಿಗೆ ತಪ್ಪು ಕಾಣಿಕೆಯನ್ನೂ ಕೂಡ ಅವರು ಸಲ್ಲಿಕೆ ಮಾಡಿದ್ದಾರೆ. ಮಂಗಳೂರಿನ […]Read More
ಉಜಿರೆ : ಉಜಿರೆ ಗ್ರಾಮದ ಯಳಚಿತ್ತಾಯ ನಗರ ನಿವಾಸಿ ಜಗದೀಶ್ ಆಚಾರ್ಯ ಅವರ ಮನೆಗೆ ಇತ್ತೀಚೆಗೆ ಬಂದ ವಿಪರೀತ ಮಳೆಗೆ ಗುಡ್ಡ ಕುಸಿದು ವಾಸ್ತವ್ಯ ಮನೆಗೆ ಹಾನಿಯಾಗಿತ್ತು.ಹಾಗೂ ಲಕ್ಷ್ಮಣ ಇವರ ಮನೆಯ ಹಿಂಭಾಗ ಗುಡ್ಡ ಕುಸಿದು ಅಪಾಯದ ಮುನ್ಸೂಚನೆಯಲ್ಲಿದೆ.ಆಗಸ್ಟ್ 14 ರಂದು ಸ್ಥಳಕ್ಕೆ ಶಾಸಕ ಹರೀಶ್ ಪೂಂಜಾ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀನಿವಾಸ್ ರಾವ್, ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಪಾರೆಂಕಿ, […]Read More
ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಭ್ರಷ್ಟಾಚಾರ ಮಾಡಿದ್ದಾರೆ ಎಂಬ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಆರೋಪಕ್ಕೆ ಹರೀಶ್ ಪೂಂಜ ಸ್ಪಷ್ಟನೆ ನೀಡಿದ್ದಲ್ಲದೆ ಮಾರಿಗುಡಿಯಲ್ಲಿ ಪ್ರಮಾಣ ಮಾಡುತ್ತೇನೆ ಎಂದು ಹೇಳಿದ್ದು ಇಂದು ಮಾರಿಗುಡಿಗೆ ಭೇಟಿ ನೀಡಿ ಶಾಸಕ ಹರೀಶ್ ಪೂಂಜ ಪ್ರಮಾಣ ಮಾಡಿದ್ದಾರೆ. ನಾನು ಒಂದು ರೂಪಾಯಿಯು ಮುಟ್ಟಿಲ್ಲ. ಯಾವುದೇ ಭ್ರಷ್ಟಾಚಾರ ಮಾಡಿಲ್ಲ ನನ್ನ ಮೇಲೆ ಆರೋಪಿಸಿದ ರಕ್ಷಿತ್ ಶಿವರಾಂ ಹಾಗೂ ಆರೋಪಿಸಿದ ಎಲ್ಲರನ್ನೂ ಆ ಮಾರಿಗುಡಿ ಮಹಾದೇವಿ ಶಿಕ್ಷಿಸಲಿ ಒಂದು ವೇಳೆ ನಾನು ತಪ್ಪು […]Read More
ಬೆಳ್ತಂಗಡಿ: ಶಾಸಕರ ವಿರುದ್ದ ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ ನೀಡಿದ ಆರೋಪಕ್ಕೆ ಶಾಸಕ ಹರೀಶ್ ಪೂಂಜ ಇಂದು ಸ್ಪಷ್ಟನೆ ನೀಡಿದ್ದಾರೆ. ಅವರು ಇಂದು ದಿ ಓಷ್ಯನ್ ಪರ್ಲ್ ಉಜಿರೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹರೀಶ್ ಪೂಜರವರು ಇಂದು ಓಷ್ಯನ್ ಪರ್ಲ್ ನಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ರಕ್ಷಿತ್ ಶಿವರಾಂ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ಐ ಬಿ ಯಲ್ಲಿ ಭ್ರಷ್ಟಾಚಾರದ ಬಗ್ಗೆ ಹೇಳಿಕೆ ನೀಡಿದ ರಕ್ಷಿತ್ ಶಿವರಾಂ ರವರೆ ಬ್ರಿಟಿಷರ ಕಾಲದ ಐ ಬಿಯನ್ನು ಕೆಡವಿದ್ದೀರಿ ಎಂದಿರುವ […]Read More
ಕಲ್ಮಂಜ ಗ್ರಾಮದ ಗುತ್ತು ಬೈಲು ಎಂಬಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಗೆ ಕಿರು ಸೇತುವೆಯೊಂದು ಸಂಪೂರ್ಣ ಕೊಚ್ಚಿ ಹೋಗಿತ್ತು. ಈ ವಿಷಯವನ್ನು ಶಾಸಕರ ಗಮನಕ್ಕೆ ತಂದಾಗ ಮಳೆ ಕಡಿಮೆಯಾದಲ್ಲಿ ತಾತ್ಕಾಲಿಕವಾಗಿ ಸಂಪರ್ಕ ವ್ಯವಸ್ಥೆ ಮಾಡಿಸಿಕೊಡುತ್ತೇನೆ ಎಂದು ಭರವಸೆ ನೀಡಿದ್ದರು. ಅದರಂತೆ ಕೆಲವು ದಿನದಿಂದ ಮಳೆ ಕಡಿಮೆಯಾದರಿಂದ ತಕ್ಷಣವೇ ಇಂದು ತಾತ್ಕಾಲಿಕ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ಇದು ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು. ಸರಕಾರದಿಂದ ಯಾವುದೇ ನೆರವು ಬಾರದಿರುವುದರಿಂದ ಕಂಗೆಟ್ಟಿದ್ದಕಲ್ಮಂಜ ಗ್ರಾಮಸ್ಥರಿಗೆ ನಿಟ್ಟುಸಿರು ಬಿಡುವಂತಾಗಿದೆRead More