• October 16, 2024

ಉಕ್ಕು ಸಚಿವಾಲಯದಲ್ಲಿರುವ ಸಾರ್ವಜನಿಕ ಉದ್ದಿಮೆಗಳಾದ KIOCL ಸಂಸ್ಥೆಯನ್ನು NMDC ಸಂಸ್ಥೆಯೊಂದಿಗೆ ವಿಲೀನ ಪ್ರಕ್ರಿಯೆಗೆ ಚಾಲನೆ ನೀಡುವಂತೆ ರಾಜ್ಯಸಭಾ ಸದಸ್ಯರಾದ ಹೆಗ್ಗಡೆಯವರಲ್ಲಿ ಮನವಿ

 ಉಕ್ಕು ಸಚಿವಾಲಯದಲ್ಲಿರುವ ಸಾರ್ವಜನಿಕ ಉದ್ದಿಮೆಗಳಾದ KIOCL ಸಂಸ್ಥೆಯನ್ನು NMDC ಸಂಸ್ಥೆಯೊಂದಿಗೆ ವಿಲೀನ ಪ್ರಕ್ರಿಯೆಗೆ ಚಾಲನೆ ನೀಡುವಂತೆ ರಾಜ್ಯಸಭಾ ಸದಸ್ಯರಾದ ಹೆಗ್ಗಡೆಯವರಲ್ಲಿ ಮನವಿ

 

ಉಕ್ಕು ಸಚಿವಾಲಯದಲ್ಲಿರುವ ಸಾರ್ವಜನಿಕ ಉದ್ದಿಮೆಗಳಾದ KIOCL ಸಂಸ್ಥೆಯನ್ನು NMDC ಸಂಸ್ಥೆ ಯೊಂದಿಗೆ ವೀಲೀನ ಪ್ರಕ್ರಿಯೆಗೆ ಚಾಲನೆ ನೀಡುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಉಕ್ಕು ಸಚಿವರಾದ HD.ಕುಮಾರಸ್ವಾಮಿ ಯವರನ್ನು ಒತ್ತಾಯಿಸುವ ಅಂಗವಾಗಿ ರಾಜ್ಯಸಭಾ ಸದಸ್ಯರೂ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿಗಳಾದ ಪೂಜ್ಯ ವೀರೇಂದ್ರ ಹೆಗ್ಗಡೆಯವರನ್ನು ಧರ್ಮಸ್ಥಳದಲ್ಲಿ ಭೇಟಿಯಾಗಿ ಮನವಿಯನ್ನು ನೀಡಲಾಯಿತು.

ವಿಧಾನ ಪರಿಷತ್‌ ಸದಸ್ಯರಾದ ಪ್ರತಾಪ್‌ ಸಿಂಹ ನಾಯಕ್, ರಾಜ್ಯ ಭಾರತೀಯ ಮಜೂ ರ್‌ ಸಂಘದ ಕಾರ್ಯದರ್ಶಿ ಜಯರಾಜ್ ಸಾಲಿಯನ್ ದ.ಕ ಜಿಲ್ಲಾ ಬಿಎಮ್‌ಎಸ್‌ ಅಧ್ಯಕ್ಷರಾದ ಅನಿಲ್ ಕುಮಾರ್ ರವರ ನೇತೃತ್ವದಲ್ಲಿ ಕುದುರೆಮುಖ ಮದ್ದೂರ್ ಸಂಘದ ಕೇಂದ್ರ ಸಮಿತಿಯ ಪದಾಧಿಕಾರಿಗಳಾದ ಪ್ರಧಾನ ಕಾರ್ಯದರ್ಶಿ ಚಂದ್ರೇಗೌಡ, ಕಾರ್ಯಾಧ್ಯಕ್ಷರಾದ ಭಗವಾನ್ ದಾಸ್, ಕಾರ್ಯಾಧ್ಯಕ್ಷರಾದ ಕೆಂಚೇಗೌಡ, ಖಜಾಂಚಿ ಉದಯಕುಮಾ‌ರ್ B. C, ಸಂಘಟನಾ ಕಾರ್ಯದರ್ಶಿಯಾದ ಶ್ರೀಧ‌ರ್ ಉಳ್ಳಾಲ್ ಈ ಮನವಿಯನ್ನು ನೀಡಿ ತ್ವರಿತವಾಗಿ ವಿಲೀನ ಪ್ರಕ್ರಿಯೆಯನ್ನು ಜಾರಿಗೊಳಿಸಲು ಸಹಕರಿಸಬೇಕಾಗಿ ವಿನಂತಿಸಲಾಯಿತು.

ವೀರೇಂದ್ರ ಹೆಗ್ಗಡೆಯವರು ಮನವಿಯನ್ನು ಸ್ವೀಕರಿಸಿ ಪ್ರಧಾನಮಂತ್ರಿಯವರಿಗೆ ಈ ನಿಟ್ಟಿನಲ್ಲಿ ಮಾಹಿತಿ ನೀಡಿ ತ್ವರಿತ ಗತಿಯಲ್ಲಿ ವಿಲೀನ ಪ್ರಕ್ರಿಯೆಯನ್ನು ಮಾಡುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

Related post

Leave a Reply

Your email address will not be published. Required fields are marked *

error: Content is protected !!