ಹೊಸ್ಮರ್ :ಕರ್ನಾಟಕ ಪಬ್ಲಿಕ್ ಸ್ಕೂಲ್ ಹೊಸ್ಮಾರ್ ಶಾಲಾ ಶತಮಾನೋತ್ಸವ ಆಚರಣಾ ಸಂಭ್ರಮದ ಮನವಿ ಪತ್ರ ಬಿಡುಗಡೆ ಕಾರ್ಯಕ್ರಮ ಹೈಸ್ಕೂಲ್ ಸಭಾಂಗಣದಲ್ಲಿ ಜರುಗಿತು. ಮನವಿ ಪತ್ರವನ್ನು ಶಾಸಕರು ಹಾಗೂ ಸಚಿವರಾದ ವಿ. ಸುನೀಲ್ ಕುಮಾರ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಅತಿಥಿ-ಗಣ್ಯರು ಮತ್ತು ಪಂಚಾಯತ್ಅಧ್ಯಕ್ಷರು, ಎಸ್ ಡಿ ಎಂ ಅಧ್ಯಕ್ಷರು, ಸದಸ್ಯರು ಮತ್ತು ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕಿ ವೃಂದ ಹಾಗೂ ಮಕ್ಕಳ ಪೋಷಕರು ಜೊತೆಗಿದ್ದರು.
ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಗ್ರಾಮ ಸುಭೀಕ್ಷಾ ಕಾರ್ಯಕ್ರಮದಲ್ಲಿ ಸೀಯಾಳ ಅಭಿಷೇಕ ಮತ್ತು ಭಜನಾ
ಕೊರಿಂಜ ಪ್ರಗತಿ ಬಂಧು ಸ್ವ – ಸಹಾಯ ಸಂಘಗಳ ಒಕ್ಕೂಟ ಉರುವಾಲು ವಿಭಾಗ, ಜನ ಜಾಗೃತಿ ಗ್ರಾಮ ಸಮಿತಿ ಉರುವಾಲು, ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಆಡಳಿತ ಸಮಿತಿ ಕೊರಿಂಜ ಇದರ ವತಿಯಿಂದ , ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಗ್ರಾಮ ಸುಭೀಕ್ಷಾ ಕಾರ್ಯಕ್ರಮದಲ್ಲಿ ಸೀಯಾಳ ಅಭಿಷೇಕ ಮತ್ತು ಭಜನಾ ಕಾರ್ಯಕ್ರಮ ಅ.22 ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಪ್ರಗತಿ ಬಂಧು ಸ್ವ ಸಹಾಯ ಸಂಘದ ಸದಸ್ಯರು, ದೇವಸ್ಥಾನ ಆಡಳಿತ ಸಮಿತಿ ಸದಸ್ಯರು, ವಲಯ ಮೇಲ್ವಿಚಾರಕರಾದ ಶ್ರೀ ಮತಿ […]Read More
ಉಜಿರೆ: ದೀಪಾವಳಿ ದೋಸೆ ಹಬ್ಬದ ಪ್ರಯುಕ್ತ ಉಜಿರೆ, ಲಾಯಿಲ,ಧರ್ಮಸ್ಥಳ ಮಹಾಶಕ್ತಿ ಕೇಂದ್ರದ ಪ್ರಮುಖರಿಂದ
ಉಜಿರೆ: ಬೆಳ್ತಂಗಡಿ ಮಂಡಲ ಯುವ ಮೋರ್ಚಾ ವತಿಯಿಂದ ಸೋಮವಾರ ನಡೆಯುವಂತಹ “ದೀಪಾವಳಿ ದೋಸೆ ಹಬ್ಬದ “ಪ್ರಯುಕ್ತ ಉಜಿರೆ,ಲಾಯಿಲ,ಧರ್ಮಸ್ಥಳ ಮಹಾಶಕ್ತಿ ಕೇಂದ್ರದ ಪ್ರಮುಖರ ಪೂರ್ವಭಾವಿ ಸಭೆ ಅ.21 ರಂದು ಉಜಿರೆ ಶಾರದ ಮಂಟಪದಲ್ಲಿ ನಡೆಯಿತು. ವೇದಿಕೆಯಲ್ಲಿ ಶಾಸಕರಾದ ಹರೀಶ್ ಪೂಂಜ ,ಬಿಜೆಪಿ ಮಂಡಲ ಅಧ್ಯಕ್ಷರಾದ ಜಯಂತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ್ ರಾವ್,ಗಣೇಶ್ ಗೌಡ, ಉಪಾಧ್ಯಕ್ಷರಾದ ಸೀತಾರಾಮ್ ಬೆಳಾಲು ಯುವ ಮೋರ್ಚಾ ಅಧ್ಯಕ್ಷರಾದ ಯಶವಂತ್ ಗೌಡ ಬೆಳಾಲು, ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ಕುಲಾಲ್, ವಿನೀತ್ ಕೋಟ್ಯಾನ್ ಹಾಗೂ […]Read More
ಗುರುವಾಯನಕೆರೆ: ದೀಪಾವಳಿ ದೋಸೆ ಹಬ್ಬದ ಪ್ರಯುಕ್ತ ಕುವೆಟ್ಟು, ನಾರಾವಿ,ಅಳದಂಗಡಿ , ಕಣಿಯೂರು ಮಹಾಶಕ್ತಿಕೇಂದ್ರದ
ಗುರುವಾಯನಕೆರೆ:ಬೆಳ್ತಂಗಡಿ ಮಂಡಲ ಯುವ ಮೋರ್ಚಾ ವತಿಯಿಂದ ಸೋಮವಾರ ನಡೆಯುವಂತಹ “ದೀಪಾವಳಿ ದೋಸೆ ಹಬ್ಬದ “ಪ್ರಯುಕ್ತ ಕುವೆಟ್ಟು,ನಾರಾವಿ,ಅಳದಂಗಡಿ ಕಣಿಯೂರು ಮಹಾಶಕ್ತಿ ಕೇಂದ್ರದ ಪ್ರಮುಖರ ಪೂರ್ವಭಾವಿ ಸಭೆ ಗುರುವಾಯನಕೆರೆಯ ಕುಲಾಲ ಮಂದಿರದಲ್ಲಿ ಅ.21 ರಂದು ನಡೆಯಿತು. ವೇದಿಕೆಯಲ್ಲಿ ಶಾಸಕರಾದ ಹರೀಶ್ ಪೂಂಜ ,ಬಿಜೆಪಿ ಮಂಡಲ ಅಧ್ಯಕ್ಷರಾದ ಜಯಂತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ್ ರಾವ್,ಗಣೇಶ್ ಗೌಡ, ಉಪಾಧ್ಯಕ್ಷರಾದ ಸೀತಾರಾಮ್ ಬೆಳಾಲು ಯುವ ಮೋರ್ಚಾ ಅಧ್ಯಕ್ಷರಾದ ಯಶವಂತ್ ಗೌಡ ಬೆಳಾಲು, ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ಕುಲಾಲ್, ವಿನೀತ್ ಕೋಟ್ಯಾನ್ ಹಾಗೂ […]Read More
ಪುತ್ತೂರು: ಹಿಂದೂ ಜನಜಾಗೃತಿ ಸಮಿತಿಯು ದ್ವಿದಶಕ ಪೂರ್ಣಗೊಳಿಸಿದ ಸಂದರ್ಭದಲ್ಲಿ ಪುತ್ತೂರಿನ ಟೌನ್ ಬ್ಯಾಂಕ್ ಹಾಲ್ ನಲ್ಲಿ ಇಂದು “ಹಲಾಲ್ ವ್ಯಾಖ್ಯಾನ” ದ ಆಯೋಜನೆಯನ್ನು ಅಭಿನವ ಭಾರತ ಮಿತ್ರ ಮಂಡಳಿ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರಮುಖ ವಕ್ತಾರರಾಗಿ ಧಾರ್ಮಿಕ ಉಪನ್ಯಾಸಕರಾದ ಕೃಷ್ಣ ಉಪಾಧ್ಯಾಯ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ರಮೇಶ ಶಿಂದೆ ಮತ್ತು ಹಿಂದೂ ಜನಜಾಗೃತಿಯ ರಾಜ್ಯ ಸಮನ್ವಯಕಾರದ ಗುರುಪ್ರಸಾದ್ ಗೌಡ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶ್ರೀ ಕೃಷ್ಣ […]Read More
ಕುಂದಾಪುರ: ಎಲ್ಲಿ ನೋಡಿದರೂ ಕಾಂತರದ್ದೇ ಹವ. ಜಗತ್ತಿನಾದ್ಯಂತ ಈ ಸಿನಿಮಾದ್ದೇ ಅಬ್ಬರ. ರಿಷಬ್ ಶೆಟ್ಟಿಯವರ ನಿರ್ದೇಶನ, ನಟನೆ ಜನರ ಮನಸ್ಸನ್ನು ಗೆದ್ದಿದೆ. ಕಾಂತಾರದಲ್ಲಿ ಕ್ಲೈಮ್ಯಾಕ್ಸಲ್ಲಿ ಬರೋ 20 ನಿಮಿಷದ ದೃಶ್ಯ ನೋಡುಗರನ್ನು ಮೂಕವಿಸ್ಮಿತರನ್ನಾಗಿಸಿದೆ. ಬಹಳಷ್ಟು ಜನ ಇವರ ಅಭಿನಯವನ್ನು ಕಂಡು ದಂಗಾಗಿದ್ದಾರೆ. ಈ ಸಿನೆಮಾ ನೋಡಿ ಉಡುಪಿಯ ಸ್ಯಾಂಡ್ ಥೀಂ ತಂಡದ ಕಲಾವಿದರು ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಪ್ರಸಾದ್ ಆರ್ ಮರಳಿನ ಶಿಲ್ಪ ಕಲಾಕೃತಿಯ ಮೂಲಕ ಕಾಂತಾರ ಸಿನಿಮಾದ ಬಗ್ಗೆ ಅಭಿನಂದನೆ ತೋರಿಸಿ […]Read More
ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರಕಾರಿ NPS ಸಂಘ(ರಿ) ಬೆಂಗಳೂರು ಇದರ ವತಿಯಿಂದ ಪ್ರಾರಂಭಗೊಂಡಿರುವ OPS ಸಂಕಲ್ಪ ಯಾತ್ರೆ ಅ.17 ರಂದು ಬೆಳ್ತಂಗಡಿಗೆ ಆಗಮಿಸಿತ್ತು. ಇದರ ಭಾಗವಾಗಿ ತಾಲೂಕಿನ ಎಲ್ಲಾ ಸರಕಾರಿ ನೌಕರರು ರಾಜ್ಯ ಸಂಘದ ಈ ಸಂಕಲ್ಪ ಯಾತ್ರೆ ಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸ್ವಾಗತಿಸಿ ಬೆಳ್ತಂಗಡಿ ಗೆ ಕರೆ ತರಲಾಯಿತು.ನಂತರ ಬೆಳ್ತಂಗಡಿ ಬಸ್ ನಿಲ್ದಾಣದಿಂದ ಮೂರು ಮಾರ್ಗವಾಗಿ ಕಾಲ್ನಡಿಗೆ ಜಾಥಾದಲ್ಲಿ ತಾಲೂಕಿನ ತಹಸೀಲ್ದಾರ್ ರಿಗೆ ಮನವಿ ಸಲ್ಲಿಸಲಾಯಿತು. ತದನಂತರ ಯಾತ್ರೆ ಗುರುವಾಯನಕೆರೆ ಮೂಲಕ ಉಪ್ಪಿನಂಗಡಿಯಾಗಿ […]Read More
ಬೆಳ್ತಂಗಡಿ:ಹಿಂದೂ ಜನಜಾಗೃತಿ ಸಮಿತಿಯು ಸ್ಥಾಪನೆಯಾಗಿ ದ್ವಿದಶಕ ಪೂರ್ತಿಯ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಲಾದ ಹಿಂದೂ ಸಂಘಟನಾ ಮೇಳವು ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಿನಾಕಿ ಸಭಾಭವನದಲ್ಲಿ ಅಕ್ಟೋಬರ್ 15 ರಂದು ಜರುಗಿತು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಚಂದ್ರ ಮೊಗೇರ ಮಾತನಾಡುತ್ತಾ ಕರ್ನಾಟಕದಲ್ಲಿ 32000 ದೇವಸ್ಥಾನ ಸರಕಾರದ ಅಧೀನದಲ್ಲಿದೆ. ಆದರೆ ಚರ್ಚ್ ಮಸೀದಿಗಳು ಸರಕಾರದ ನಿಯಂತ್ರಣದಲ್ಲಿ ಇಲ್ಲ. ನಮ್ಮ ದೇಶದ ಸಂವಿಧಾನದಲ್ಲಿ ಹಿಂದೂಗಳಿಗೆ ವಿರುದ್ಧವಾದ ಅನೇಕ ಕಾನೂನುಗಳಿವೆ ಧರ್ಮದ ಅಧಿಷ್ಠಾನದಿಂದ ನಡೆಯುವ ರಾಜ್ಯ […]Read More
ಶೌರ್ಯ ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣೆ ಸಮಿತಿ ಕಣಿಯೂರು ಘಟಕದ ಮಾಸಿಕ ಸಭೆ ಹಾಗೂ ನೂತನ ಸ್ವಯಂ ಸೇವಕರ ಸೇರ್ಪಡೆ ಸಭೆಯನ್ನು ಅ.14 ರಂದು ಕೊರಿಂಜ ಸಭಾಭವನದಲ್ಲಿ ನಡೆಸಲಾಯಿತು. ಈ ಸಭೆಗೆ ವಿಪತ್ತು ನಿರ್ವಹಣಾ ಯೋಜನಾಧಿಕಾರಿ ಜೈವಂತ ಪಟಗಾರ ಹಾಗೂ ಕಣಿಯೂರು ವಲಯದ ಮೇಲ್ವಿಚಾರಕರಾದ ಪ್ರೇಮಾ,ಕಣಿಯೂರು ಘಟಕದ ಸಂಯೋಜಕಿ ಶ್ರೀಮತಿ ಚಂದ್ರಕಲಾ ಹಾಗೂ ಕಣಿಯೂರು ಘಟಕದ ಎಲ್ಲಾ ಸ್ವಯಂಸೇವಕರು ಹಾಗೂ ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು. ಹೊಸದಾಗಿ 13 ಸದಸ್ಯರ ಇಳಂತಿಲ ಘಟಕವನ್ನು […]Read More
ದೀಪಾವಳಿ ಪ್ರಯುಕ್ತ ನಡೆಯುವ ದೋಸೆ ಹಬ್ಬದ ಕಾರ್ಯಕರ್ಮದ ರೂಪುರೇಷೆಯ ಬಗ್ಗೆ ಪೂರ್ವಭಾವಿ ಸಭೆ
ಬೆಳ್ತಂಗಡಿ: ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಮಂಡಲ ಇದರ ಆಶ್ರಯದಲ್ಲಿ ಶಾಸಕರಾದ ಹರೀಶ್ ಪೂಂಜಾ ರವರ ಕಲ್ಪನೆ ಯಂತೆ ಯುವಮೋರ್ಚಾ ದ ವತಿಯಿಂದ ದೀಪಾವಳಿ ಪ್ರಯುಕ್ತ ನಡೆಯುವ ದೋಸೆ ಹಬ್ಬದ ಕಾರ್ಯಕರ್ಮದ ರೂಪುರೇಷೆಯ ಬಗ್ಗೆ ಪೂರ್ವಭಾವಿ ಸಭೆ ಅ.14 ರಂದು ನಡೆಸಲಾಯಿತು. ಸಭೆಯಲ್ಲಿ ಅಕ್ಟೋಬರ್ 24 ರಂದು ದೀಪಾವಳಿ ಹಬ್ಬದಂದು ಹಮ್ಮಿಕೊಂಡಿರುವ ದೋಸೆ ಹಬ್ಬ ಹಾಗೂ ಪೇಟೆಗಳಲ್ಲಿ ವಿಶೇಷ ವಿದ್ಯುತ್ ದೀಪಾಲಂಕಾರ,ವಿಶೇಷ ಸಾಂಸ್ಕೃತಿಕ,ಭಜನೆ,ಸಭಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. ಈ ವೇಳೆ ಶಾಸಕರು ಮಾತನಾಡಿ ಕಾರ್ಯಕ್ರಮದ ಪ್ರತಿ […]Read More