• June 24, 2024

ಕರ್ನಾಟಕ ರಾಜ್ಯ ಸರಕಾರಿ NPS ನೌಕರರ ಸಂಕಲ್ಪ ಯಾತ್ರೆ

 ಕರ್ನಾಟಕ ರಾಜ್ಯ ಸರಕಾರಿ NPS ನೌಕರರ ಸಂಕಲ್ಪ ಯಾತ್ರೆ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರಕಾರಿ NPS ಸಂಘ(ರಿ) ಬೆಂಗಳೂರು ಇದರ ವತಿಯಿಂದ ಪ್ರಾರಂಭಗೊಂಡಿರುವ OPS ಸಂಕಲ್ಪ ಯಾತ್ರೆ ಅ.17 ರಂದು ಬೆಳ್ತಂಗಡಿಗೆ ಆಗಮಿಸಿತ್ತು. ಇದರ ಭಾಗವಾಗಿ ತಾಲೂಕಿನ ಎಲ್ಲಾ ಸರಕಾರಿ ನೌಕರರು ರಾಜ್ಯ ಸಂಘದ ಈ ಸಂಕಲ್ಪ ಯಾತ್ರೆ ಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸ್ವಾಗತಿಸಿ ಬೆಳ್ತಂಗಡಿ ಗೆ ಕರೆ ತರಲಾಯಿತು.ನಂತರ ಬೆಳ್ತಂಗಡಿ ಬಸ್ ನಿಲ್ದಾಣದಿಂದ ಮೂರು ಮಾರ್ಗವಾಗಿ ಕಾಲ್ನಡಿಗೆ ಜಾಥಾದಲ್ಲಿ ತಾಲೂಕಿನ ತಹಸೀಲ್ದಾರ್ ರಿಗೆ ಮನವಿ ಸಲ್ಲಿಸಲಾಯಿತು.

ತದನಂತರ ಯಾತ್ರೆ ಗುರುವಾಯನಕೆರೆ ಮೂಲಕ ಉಪ್ಪಿನಂಗಡಿಯಾಗಿ ಪುತ್ತೂರು ಹೊರಟಿತು.

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಶಾಂತಾರಾಮ, ಹಿರಿಯ ಉಪಾಧ್ಯಕ್ಷ ಸಿದ್ದಪ್ಪ ಸಂಗಣ್ಣನವರು, ಪ್ರಧಾನ ಕಾರ್ಯದರ್ಶಿ ನಾಗನಗೌಡ, ಉಪಾಧ್ಯಕ್ಷರಾದ ಚಂದ್ರಕಾಂತ ತಳವಾರ, ಸಂಘಟನಾ ಕಾರ್ಯದರ್ಶಿ ದಯಾನಂದ ಹಾಗೂ ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಸಂಘದ ಅಧ್ಯಕ್ಷ ರಾದ ಇಬ್ರಾಹಿಂ,ಕಾರ್ಯದರ್ಶಿ ಆದರ್ಶ ಕಟ್ಟಿನಮಕ್ಕಿ, ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ ಸುರೇಶ್ ಮಾಚಾರ್,ಕಾರ್ಯದರ್ಶಿ ಸೀತಾರಾಮ, ಸಂಘಟನಾ ಕಾರ್ಯದರ್ಶಿ ಪರಮೇಶ್, ಬೆಳ್ತಂಗಡಿ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಜಯರಾಜ್ ಜೈನ್,ಪ್ರೌಢಶಾಲಾ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಮಹಮ್ಮದ್ ರಿಯಾಝ್,ತಾಲೂಕು ಕಾರ್ಯದರ್ಶಿ ಶಿವ ಪುತ್ರ ,ಕಡಬ ಸರಕಾರಿ ನೌಕರರ ಅಧ್ಯಕ್ಷರು,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ವಿಮಲ್ ನೆಲ್ಯಾಡಿ, ಬೆಳ್ತಂಗಡಿ ಅಧ್ಯಕ್ಷರಾದ ಕಿಶೋರ್ ಕುಮಾರ್ ಎಚ್.ಕೆ‌,ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳಾದ ಡಾ.ಸಂಜತ್ ಆರ್.ಬಿ,ಡಾ.ಸುನಿಲ್,ಡಾ.ಮನೋಜ್ ಹಾಗೂ ಇಲಾಖೆಯ ಪ್ರತಿನಿಧಿಗಳಾದ ವೆಂಕಟೇಶ್, ಸ್ವತಂತ್ರ ರಾವ್,ಮೆಸ್ಕಾಂ ಸಂಘಟನೆ ಯ ಕಿಟ್ಟಣ್ಣ,ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರತಿನಿಧಿಸುವ ಮೋಹನ್ ಬಂಗೇರ ಸೇರಿದಂತೆ ಅನೇಕ ಸಂಘಗಳ ಪ್ರಮುಖರು ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!