ಇಳಂತಿಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ (ರಿ.) ಬಿ.ಸಿ. ಟ್ರಸ್ಟ್ ಗುರುವಾಯನಕೆರೆ. ಕಣಿಯೂರು ವಲಯದ ಇಳಂತಿಳ ಮತ್ತು ಅಂಡೆತ್ತಡ್ಕ ಒಕ್ಕೂಟದ ಪದಗ್ರಹಣ ಸಮಾರಂಭ ಅ 06 ರಂದು ವಾಣಿಶ್ರೀ ಸಭಾಭವನದಲ್ಲಿ ನಡೆಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ವಕೀಲರಾದ ಸುಬ್ರಹ್ಮಣ್ಯ ಕುಮಾರ್ ಅಗರ್ತ ನೆರವೇರಿಸಿದರು.ಅಧ್ಯಕ್ಷತೆಯನ್ನು ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷರು ಬಾಲಕೃಷ್ಣ ಪೂಜಾರಿ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಎಸ್ ಕೆ ಡಿಆರ್ ಡಿಪಿ ಬಿ.ಸಿ ಟ್ರಸ್ಟ್ (ರಿ) ಗುರುವಾಯನಕೆರೆ ಯೋಜನಾಧಿಕಾರಿ ದಯಾನಂದ ಪೂಜಾರಿ, ಪ್ರಪುಲ್ಲ ಚಂದ್ರ ಅಡ್ಯಂತಾಯ […]Read More
ತಿರುವನಂತಪುರಂ ಅಕ್ಟೋಬರ್ 06: ಶಬರಿಮಲೆ ಯಾತ್ರೆಯ ಋತು ಪ್ರಾರಂಭವಾಗಲಿದ್ದು, ಈ ಹಿನ್ನಲೆ ಸಿಎಂ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಲಾಗಿದ್ದು, ಈ ಬಾರಿ ಶಬರಿಮಲೆಗೆ ಆನ್‌ಲೈನ್ ಬುಕ್ಕಿಂಗ್‌ಗೆ ಮಾತ್ರ ಅವಕಾಶ ನೀಡಲು ನಿರ್ಧರಿಸಲಾಗಿದೆ. ಒಂದು ದಿನದಲ್ಲಿ ಗರಿಷ್ಠ 80,000 ಮಂದಿಗೆ ಮಾತ್ರ ಅಯ್ಯಪ್ಪನ ದರ್ಶನಕ್ಕೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ನಡೆದ ಶಬರಿಮಲೆ ಮಂಡಲ-ಮಕರವಿಳಕ್ ಮಹೋತ್ಸವದ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವರ್ಚುವಲ್ ಕ್ಯೂ ಬುಕಿಂಗ್ ಸಮಯದಲ್ಲಿ ಪ್ರಯಾಣದ ಮಾರ್ಗವನ್ನು […]Read More
ಸವಣಾಲು : ಮಂಜದಬೆಟ್ಟು ನಿವಾಸಿ ದೇವಕಿ ಆಚಾರ್ಯ ಎಂಬವರು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘತದಿಂದ ನಿಧನರಾದರು.ತನ್ನ ಗಂಡನ ಒಂದನೇ ವರ್ಷದ ತಿಥಿಯ ದಿನದಂದೆ ಪತ್ನಿಯು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆRead More
ಮೂಡಬಿದಿರೆ: ನವರಾತ್ರಿ ಪ್ರಯುಕ್ತ, TOP ENTERTAINERS ಡಾನ್ಸ್ ಸ್ಟುಡಿಯೊ ಇವರಿಂದ ವೈವಿಧ್ಯಮಯ ಕಾರ್ಯಕ್ರಮ
ಮೂಡುಬಿದಿರೆ ಸಮಾಜ ಮಂದಿರದ 77 ನೇ ನವರಾತ್ರಿ ಉತ್ಸವದ ಪ್ರಯುಕ್ತಇಂದು ಸಂಜೆ 7 ಗಂಟೆಗೆ TOP ENTERTAINERS ಡಾನ್ಸ್ ಸ್ಟುಡಿಯೋ ಇವರಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ. ಈ ಸಂಸ್ಥೆಯ ವಿದ್ಯಾರ್ಥಿಗಳಿಂದ ವಿವಿಧ ನೃತ್ಯಗಳು ಸಮಾಜ ಮಂದಿರ ಮೂಡಬಿದಿರೆಯಲ್ಲಿ ಜರುಗಲಿದೆ.Read More
ಹಗ್ಗ ಕುತ್ತಿಗೆಗೆ ಸುತ್ತಿಕೊಂಡು ಜೀವನ್ಮರಣ ಹೋರಾಟದಲ್ಲಿದ್ದ ಹಸುವೊಂದನ್ನು ರಕ್ಷಿಸಿದ ಗೃಹರಕ್ಷಕ ದಳದ ಸಿಬ್ಬಂದಿ
ಬೆಳ್ತಂಗಡಿ; ಜಾನುವಾರು ಕಟ್ಟಿ ಹೋಗಿದ್ದಲ್ಲಿ ಅದರ ಹಗ್ಗ ಕುತ್ತಿಗೆಗೆ ಸುತ್ತಿಕೊಂಡು ಜೀವನ್ಮರಣ ಹೋರಾಟದಲ್ಲಿದ್ದ ಹಸುವೊಂದನ್ನು ಗೃಹರಕ್ಷಕ ದಳದ ಸಿಬ್ಬಂದಿಯೊಬ್ಬರು ಸಕಾಲಿಕವಾಗಿ ಸ್ಪಂದಿಸಿ ರಕ್ಷಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಪೆರಣಮಂಜ ಸ್ಥಳದ ರಸ್ತೆ ಬದಿಯಲ್ಲಿ ಯಾರೋ ಮೇಯಲು ಕಟ್ಟಿ ಹೋಗಿದ್ದ ಹಸು ವಿನ ಕುತ್ತಿಗೆಗೆ ಹಾಕಲಾಗಿದ್ದ ಹಗ್ಗ ಬಿಗಿಯಾಗಿ ಜಾನುವಾರು ಅಂಗಾತ ಬಿದ್ದಿತ್ತು. ಕೈಕಾಲುಗಳನ್ನು ಅಲ್ಲಾಡಿಸಿ ಮೇಲೇಳಲು ಭಾರೀ ಪ್ರಯತ್ನ ಪಟ್ಟು ಕೊನೆಗೆ ಬಸವಳಿದಿತ್ತು. ಇದೇ ರಸ್ತೆಯ ಮೂಲಕ ಹೋಗುತ್ತಿದ್ದ ಗೃಹರಕ್ಷಕ ದಳದ ಸಿಬ್ಬಂದಿ ಹಾಗೂ ಸರ್ವೋದಯ ಫ್ರೆಂಡ್ಸ್ […]Read More
ಹುಣ್ಸೆಕಟ್ಟೆ: ಇಲ್ಲಿಯ ನಿವಾಸಿ, ರಿಕ್ಷಾ ಚಾಲಕ ನೀಲಯ್ಯ ಗೌಡ ಅವರು ಅ.6 ರಂದು ಬೆಳಗ್ಗೆ ಅಸೌಖ್ಯದಿಂದ ನಿಧನರಾದರು. ಪತ್ನಿ ರೂಪಾ, ಮಕ್ಕಳಾದ ದರ್ಶನ್, ದೀಪಕ್ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆRead More
ದೇವಾಲಯಗಳನ್ನು ಸರ್ಕಾರೀಕರಣದಿಂದ ಮುಕ್ತಗೊಳಿಸುವಂತೆ ವಿ.ಹಿಂ.ಪ ಪುತ್ತೂರು ಜಿಲ್ಲೆ ವತಿಯಿಂದ ಒಂದು ದಿನದ ಉಪವಾಸ
ಕೊಕ್ಕಡ: ವಿಶ್ವ ಹಿಂದೂ ಪರಿಷದ್, ಪುತ್ತೂರು ಜಿಲ್ಲೆ ವತಿಯಿಂದ ದೇವಾಲಯಗಳನ್ನು ಸರ್ಕಾರೀಕರಣದಿಂದ ಮುಕ್ತಗೊಳಿಸಿ, ಹಿಂದೂ ದೇವಾಲಯಗಳನ್ನು ಸರ್ಕಾರದ ಹಿಡಿತದಿಂದ ಮಯಕ್ತಗೊಳಿಸುವಂತೆ ಹಾಗೂ ಪ್ರತ್ಯೇಕ ಸ್ವಾಯತ್ತ ಮಂಡಳಿ ರಚಿಸುವಂತೆ ಆಗ್ರಹಿಸಿ ಒಂದು ದಿನದ ಉಪವಾಸ ಸತ್ಯಾಗ್ರಹವು ಇಂದು ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರುRead More
ಮಂಗಳೂರು:ದಾವಣಗೆರೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಕರ್ನಾಟಕ ೭೭ನೇ ಕನ್ನಡ ರಾಜ್ಯೋತ್ಸವದ ಸುಸಂದರ್ಭದಲ್ಲಿ ಕೊಡಮಾಡುವ “ಕರ್ನಾಟಕ ಮುಕುಟಮಣಿ”ರಾಜ್ಯಪ್ರಶಸ್ತಿಯನ್ನು ಸಾಹಿತ್ಯಕೇತ್ರದ ಸಾಧನೆಯನ್ನು ಪರಿಗಣಿಸಿ ಯುವ ಸಾಹಿತಿ ಸತೀಶ್ ಬಿಳಿಯೂರು ಇವರನ್ನು ಆಯ್ಕೆ ಮಾಡಲಾಗಿದೆ.ಇವರು ಹಲವಾರೂ ಪ್ರಶಸ್ತಿಗಳ ಜೊತೆ “ಕರ್ನಾಟಕ ಕನ್ನಡ ಬುಕ್ ಆಫ್ ರೆಕಾರ್ಡ್ “ಹಾಗೂ” ವರ್ಲ್ಡ್ ಪ್ರೆಸ್ ಬುಕ್ ಆಫ್ ರೆಕಾರ್ಡ್” ನ ಪುಟದಲ್ಲಿ ಹೆಸರನ್ನು ದಾಖಲಿಸಿರುತ್ತಾರೆ.Read More
ಬಂದಾರು: ಶ್ರೀ ಕಾವೇರಿ ದಸರಾ ಸಮಿತಿ ಮತ್ತು ಪೊಣ್ಣoಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಅಕ್ಟೋಬರ್ 11 ರಂದು ಗೋಣಿಕೊಪ್ಪದ ದಸರಾ ವೇದಿಕೆಯಲ್ಲಿ ನಡೆಯುವ ರಾಜ್ಯಮಟ್ಟದ ಬಹುಭಾಷಾ ಕವಿಗೋಷ್ಠಿಗೆ ಕುಂಬಾರ ಭಾಷೆಯಿಂದ ಬೆಳ್ತಂಗಡಿ ತಾಲೂಕಿನ ಚಂದ್ರಹಾಸ ಕುಂಬಾರ ಬಂದಾರು ಆಯ್ಕೆಯಾಗಿರುತ್ತಾರೆ. 13 ಭಾಷೆಗಳ ಕವನಗಳು ಆಯ್ಕೆ ಆಗಿದ್ದು 78 ಕವಿಗಳು ಕವನ ವಾಚಿಸಲಿದ್ದಾರೆ.Read More
ಬೆಳ್ತಂಗಡಿ ಭಾರತೀಯ ಜನತಾ ಪಾರ್ಟಿಯ ಮಂಡಲದ ಮಾಜಿ ಪ್ರಧಾನ ಕಾರ್ಯದರ್ಶಿ ಗುರುವಾಯನಕೆರೆಯ ನಾರಾಯಣ್ ಆಚಾರ್ ಅ.4 ರಂದು ನಿಧನರಾದರು. ಬೆಳ್ತಂಗಡಿ ಭಾಜಪ ಪಕ್ಷದ ಕಚೇರಿಯಲ್ಲಿ ಸುಮಾರು ವರ್ಷಗಳ ಪಕ್ಷದ ಕಚೇರಿ ಕೆಲಸ ಕಾರ್ಯಗಳನ್ನು ಮಾಡುತ್ತ, ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದರು.Read More