• November 13, 2024

ಹಗ್ಗ ಕುತ್ತಿಗೆಗೆ ಸುತ್ತಿಕೊಂಡು ಜೀವನ್ಮರಣ ಹೋರಾಟದಲ್ಲಿದ್ದ ಹಸುವೊಂದನ್ನು ರಕ್ಷಿಸಿದ ಗೃಹರಕ್ಷಕ ದಳದ ಸಿಬ್ಬಂದಿ

 ಹಗ್ಗ ಕುತ್ತಿಗೆಗೆ ಸುತ್ತಿಕೊಂಡು ಜೀವನ್ಮರಣ ಹೋರಾಟದಲ್ಲಿದ್ದ ಹಸುವೊಂದನ್ನು ರಕ್ಷಿಸಿದ ಗೃಹರಕ್ಷಕ ದಳದ ಸಿಬ್ಬಂದಿ

 

ಬೆಳ್ತಂಗಡಿ; ಜಾನುವಾರು ಕಟ್ಟಿ ಹೋಗಿದ್ದಲ್ಲಿ ಅದರ ಹಗ್ಗ ಕುತ್ತಿಗೆಗೆ ಸುತ್ತಿಕೊಂಡು ಜೀವನ್ಮರಣ ಹೋರಾಟದಲ್ಲಿದ್ದ ಹಸುವೊಂದನ್ನು ಗೃಹರಕ್ಷಕ ದಳದ ಸಿಬ್ಬಂದಿಯೊಬ್ಬರು ಸಕಾಲಿಕವಾಗಿ ಸ್ಪಂದಿಸಿ ರಕ್ಷಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಪೆರಣಮಂಜ ಸ್ಥಳದ ರಸ್ತೆ ಬದಿಯಲ್ಲಿ ಯಾರೋ ಮೇಯಲು ಕಟ್ಟಿ ಹೋಗಿದ್ದ ಹಸು ವಿನ ಕುತ್ತಿಗೆಗೆ ಹಾಕಲಾಗಿದ್ದ ಹಗ್ಗ ಬಿಗಿಯಾಗಿ ಜಾನುವಾರು ಅಂಗಾತ ಬಿದ್ದಿತ್ತು. ಕೈಕಾಲುಗಳನ್ನು ಅಲ್ಲಾಡಿಸಿ ಮೇಲೇಳಲು ಭಾರೀ ಪ್ರಯತ್ನ ಪಟ್ಟು ಕೊನೆಗೆ ಬಸವಳಿದಿತ್ತು. ಇದೇ ರಸ್ತೆಯ ಮೂಲಕ ಹೋಗುತ್ತಿದ್ದ ಗೃಹರಕ್ಷಕ ದಳದ ಸಿಬ್ಬಂದಿ ಹಾಗೂ ಸರ್ವೋದಯ ಫ್ರೆಂಡ್ಸ್ ಕ್ಲಬ್ ಅಟ್ಲಾಜೆ ಇದರ ಸದಸ್ಯ ಪ್ರಮೋದ್ ಪೂಜಾರಿ ತೂಪಲ್ಕೆ- ಬಳೆಂಜ ಅವರು ಹಸುವಿನ ಪ್ರಾಣ ಉಳಿಸಿದ್ದಾರೆ. ಇದೇ ವೇಳೆ ಬಂದ ಇನ್ನಿಬ್ಬರು ದ್ವಿಚಕ್ರ ವಾಹನ ಸವಾರರು ಅವರಿಗೆ ಸಾತ್ ನೀಡಿದ್ದಾರೆ. ಪ್ರಮೋದ್ ಅವರ ಈ‌ ಸೇವೆಯ ವೀಡಿಯೋ ಹರಿದಾಡುತ್ತಿದ್ದು ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.

Related post

Leave a Reply

Your email address will not be published. Required fields are marked *

error: Content is protected !!