• November 21, 2024
General

ಲಕ್ಷ್ಮೀಪೂಜೆ (ಆಶ್ವಯುಜ ಅಮಾವಾಸ್ಯೆ)

  ಲಕ್ಷ್ಮೀಪೂಜೆಯ ದಿನದಂದು ಎಲ್ಲಾ ದೇವಸ್ಥಾನಗಳಲ್ಲಿ, ಅಂಗಡಿಗಳಲ್ಲಿ ಹಾಗೆಯೇ ಮನೆ-ಮನೆಗಳಲ್ಲಿ ಲಕ್ಷ್ಮೀಪೂಜೆಯನ್ನು ಮಾಡಲಾಗುತ್ತದೆ. ಸಾಮಾನ್ಯವಾಗಿ ಅಮಾವಾಸ್ಯೆಯನ್ನು ಅಶುಭದಿನವೆಂದು ಪರಿಗಣಿಸಲಾಗುತ್ತದೆ; ಆದರೆ ಈ ಅಮಾವಾಸ್ಯೆಯು ಅದಕ್ಕೆ ಅಪವಾದವಾಗಿದೆ. ಈ ದಿನವು ಶುಭದಿನವೆಂದು ಮನ್ನಣೆ ಪಡೆದಿದೆ; ಆದರೆ ಅದು ಎಲ್ಲ ಕಾರ್ಯಗಳಿಗಲ್ಲ. ಆದುದರಿಂದ ಈ ದಿನವನ್ನು ಶುಭದಿನ ಎನ್ನುವುದಕ್ಕಿಂತ ಆನಂದದ ದಿನ ಎನ್ನುವುದೇ ಯೋಗ್ಯವಾಗಿದೆ. ಈ ದಿನ ಶ್ರೀವಿಷ್ಣುವು ಲಕ್ಷ್ಮೀಸಹಿತ ಎಲ್ಲ ದೇವತೆಗಳನ್ನು ಬಲಿಚಕ್ರವರ್ತಿಯ ಸೆರೆಮನೆಯಿಂದ ಮುಕ್ತಗೊಳಿಸಿದನು. ಅನಂತರ ಆ ಎಲ್ಲ ದೇವತೆಗಳು ಕ್ಷೀರಸಾಗರದಲ್ಲಿ ಹೋಗಿ ಮಲಗಿದರು ಎನ್ನುವ ಕಥೆ […]Read More

ಕಾರ್ಯಕ್ರಮ

ಅಳದಂಗಡಿ ಸಿಎ ಬ್ಯಾಂಕ್ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಬ್ರಹತ್ ರಕ್ತದಾನ ಶಿಬಿರ

  ತೆಂಕಕಾರಂದೂರು:ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನವೀಕೃತಗೊಂಡ ಪೆರೋಡಿತ್ತಾಯಕಟ್ಟೆ ಶಾಖೆಯ ಉದ್ಘಾಟನೆ ಅಂಗವಾಗಿ,ಗ್ರಾಮ ಪಂಚಾಯತ್ ಬಳಂಜ,ಹಳೆ ವಿದ್ಯಾರ್ಥಿ ಸಂಘ ಪೆರೋಡಿತ್ತಾಯಕಟ್ಟೆ,ಮೀಡಿಯಾ ಕ್ಲಬ್ ಬೆಳ್ತಂಗಡಿ ಇವರ ಸಹಯೋಗದೊಂದಿಗೆ ಪೆರೋಡಿತ್ತಾಯಕಟ್ಟೆಯಲ್ಲಿ ಬ್ರಹತ್ ರಕ್ತದಾನ ಶಿಬಿರ ನಡೆಯಿತು. ಉಭಯ ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಾಕಾಧ್ಯಕ್ಷ ಕೆ.ವಸಂತ ಸಾಲಿಯಾನ್ ರಕ್ತದಾನ ಶಿಬಿರ ಉದ್ಘಾಟಿಸಿದರು. ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ವೇದಿಕೆಯಲ್ಲಿ ಎಸ್.ಡಿ.ಎಂ ಮಲ್ಟಿ […]Read More

ಸಮಸ್ಯೆ ಸ್ಥಳೀಯ

ಕಲ್ಲೇರಿ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ ನಾಳೆ ಬೆಳಗ್ಗೆ 10 ಗಂಟೆಯಿಂದ ಸಂಜೆ

  ಬೆಳ್ತಂಗಡಿ ಉಪವಿಭಾಗದ ಕಲ್ಲೇರಿ ಶಾಖಾ ವ್ಯಾಪ್ತಿಯ 110/33/11 ಕೆವಿ ಕರಾಯ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಕಲ್ಲೇರಿ ಟೌನ್ ಹಾಗೂ ಮುಗೇರಡ್ಕ ಫೀಡರುಗಳ ಹೊರೆಯನ್ನು ವಿಂಗಡಿಸಲು ಪ್ರತ್ಯೇಕವಾದ ಫೀಡರನ್ನು ನಿರ್ಮಿಸುವ ಹಾಗೂ ಉಪ್ಪಿನಂಗಡಿ ಟೌನ್, ಕೆಮ್ಮಾರ, ಕಲ್ಲೇರಿ ಟೌನ್ ಹಾಗೂ ಪದ್ಮುಂಜ ಫೀಡರುಗಳ ಹೆಚ್ ಟಿ ಲೈನ್ ಗೆ ತಾಗುತ್ತಿರುವ ಮರದ ಗೆಲ್ಲುಗಳನ್ನು ತೆರವುಗೊಳಿಸುವ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ನಾಳೆ (29) ರಂದು ಬೆಳಗ್ಗೆ 10 ರಿಂದ ಸಂಜೆ 5.30 ರ ತನಕ 11 ಕೆವಿ […]Read More

ಕ್ರೀಡೆ

ಜರ್ಮನಿಯಲ್ಲಿ ನಡೆದ ರೈಲ್ವೇಸ್ ವಾಲಿಬಾಲ್ ಚಾಂಪಿಯನ್ ಶಿಪ್: ಭಾರತೀಯ ತಂಡದಲ್ಲಿ ಬೆಳ್ತಂಗಡಿಯ ಅಶ್ವಲ್

  ಜರ್ಮನಿಯ ಬರ್ಲಿನ್ ನಲ್ಲಿ ನಡೆದ ವಲ್ಡ್ ರೈಲ್ವೇಸ್ ವಾಲಿಬಾಲ್ ಚಾಂಪಿಯನ್ ಶಿಪ್ ನಲ್ಲಿ ಭಾರತೀಯ ರೈಲ್ವೇಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾರತೀಯ ತಂಡದಲ್ಲಿ ಕಾರ್ಕಳ ತಾಲೂಕಿನ ಬೈಲೂರು ಗ್ರಾಮದ ಸುಧೀರ್ ಶೆಟ್ಟಿ ಹಾಗೂ ಬೆಳ್ತಂಗಡಿ ತಾಲೂಕಿನ ಅಶ್ವಲ್ ರೈ ತಂಡದಲ್ಲಿ ಆಟಗಾರರಾಗಿ ಭಾಗಿಯಾಗಿದ್ದು ವಾಲಿಬಾಲ್ ಚಾಂಪಿಯನ್ ಶಿಪ್ ನಲ್ಲಿ ವಿಶ್ವದ ಎಂಟು ರೈಲ್ವೇಸ್ ತಂಡಗಳು ಭಾಗಿಯಾಗಿದ್ದವು. ಫೈನಲ್ ಪಂದ್ಯದಲ್ಲಿ ಭಾರತ ತಂಡವು ಅತಿಥೇಯ ಜರ್ಮನಿ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಗೆದ್ದುಕೊಂಡಿದೆRead More

ಕಾರ್ಯಕ್ರಮ

ಅ.29 ರಂದು ಪೆರೋಡಿತ್ತಾಯಕಟ್ಟೆಯಲ್ಲಿ ಬೃಹತ್ ರಕ್ತದಾನ ಶಿಬಿರ

  ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(ನಿ) ಅಳದಂಗಡಿ ಮತ್ತು ಗ್ರಾಮ ಪಂಚಾಯತ್ ಬಳಂಜ ಹಳೇ ವಿದ್ಯಾರ್ಥಿ ಸಂಘ ಪೆರೋಡಿತ್ತಾಯಕಟ್ಟೆ ಮೀಡಿಯಾ ಕ್ಲಬ್ ಬೆಳ್ತಂಗಡಿ ಇವರ ಸಹಯೋಗದೊಂದಿಗೆ ಶ್ರೀ ಮಂಜುನಾಥೇಶ್ವರ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ಉಜಿರೆ ಮತ್ತು ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇವರ ನೇತೃತ್ವದಲ್ಲಿ ಅ.29 ರಂದು ಪೆರೋಡಿತ್ತಾಯಕಟ್ಟೆಯಲ್ಲಿ ಬೃಹತ್ ರಕ್ತದಾನ ಶಿಬಿರ ಜರುಗಲಿದೆ. ಸೂಚನೆ: ಆರೋಗ್ಯವಂತರಾಗಿರಬೇಕು, 18 ರಿಂದ 55 ವರ್ಷ ಪ್ರಾಯದವರಾಗಿರಬೇಕು, ಪ್ರತೀ 3 ತಿಂಗಳಿಗೊಮ್ಮೆ ಸುರಕ್ಷಿತವಾಗಿ ರಕ್ತದಾನ ಮಾಡಬಹುದುRead More

ಜಿಲ್ಲೆ ಧಾರ್ಮಿಕ ರಾಜ್ಯ ಸ್ಥಳೀಯ

ರಾಜ್ಯದಾದ್ಯಂತ ‘ಹಲಾಲ್ ಮುಕ್ತ ದೀಪಾವಳಿ ಅಭಿಯಾನ’ಕ್ಕೆ ಚಾಲನೆ !ರಾಷ್ಟ್ರರಕ್ಷಣೆಗಾಗಿ ಹಲಾಲ್ ಖರೀದಿಸದಂತೆ ವಿವಿಧೆಡೆ

  ಕಳೆದ ಅನೇಕ ವರ್ಷಗಳಿಂದ ಭಾರತದಲ್ಲಿ ಉದ್ದೇಶಪೂರ್ವಕವಾಗಿ ಹಲಾಲ್ ಉತ್ಪನ್ನಕ್ಕಾಗಿ ಬೇಡಿಕೆ ಕೊಡಲಾಗುತ್ತಿದ್ದು ಆದ್ದರಿಂದ ಹಿಂದೂ ವ್ಯಾಪಾರಿಗಳು ವ್ಯಾಪಾರ ಮಾಡಲು ಹಲಾಲ್ ಪ್ರಮಾಣ ಪತ್ರ ಪಡೆಯಬೇಕಾಗುತ್ತಿದೆ. ಮೊದಲು ಹಲಾಲ್ ಪರಿಕಲ್ಪನೆಯು ಕೇವಲ ಮಾಂಸದ ಉತ್ಪನ್ನಗಳು ಮತ್ತು ಮುಸ್ಲಿಂ ದೇಶಗಳಿಗೆ ರಫ್ತಿಗೆ ಸೀಮಿತವಾಗಿತ್ತು. ಆದರೆ ಈಗ ಭಾರತದಲ್ಲಿ ಅಕ್ಕಿಹಿಟ್ಟು, ಸಕ್ಕರೆ, ಚಾಕಲೇಟ್, ಬಿಸ್ಕೆಟ್ ಇತರೆ ದಿನನಿತ್ಯದ ಉತ್ಪನ್ನ, ಔಷಧಿಗಳು, ಸೌಂದರ್ಯವರ್ಧಕಗಳು, ಹೀಗೆ ವಿವಿಧ ಉತ್ಪನ್ನಗಳು ಹಲಾಲ್ ಪ್ರಮಾಣಿಕೃತ ಆಗತೊಡಗಿದೆ. ಆದ್ದರಿಂದ ಹಿಂದೂಗಳು ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಸ್ತುಗಳನ್ನು ಖರೀದಿಸುವಾಗ […]Read More

ಜಿಲ್ಲೆ ಧಾರ್ಮಿಕ ರಾಜ್ಯ ಸ್ಥಳೀಯ

ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ಸೀನಿಯರ್ ’ಕುಸ್ತಿ’ ರಾಷ್ಟ್ರೀಯ ಚಾಂಪಿಯನ್ ಶಿಪ್: ಕರ್ನಾಟಕ ಕುಸ್ತಿ

  ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ 2024 ರ ಸೀನಿಯರ್ ’ಕುಸ್ತಿ’ ರಾಷ್ಟ್ರೀಯ ಚಾಂಪಿಯನ್‌ಶಿಪ್ ಡಿಸೆಂಬರ್ 5 ರಿಂದ 8 ರವರೆಗೆ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಕುಸ್ತಿ ಪಂದ್ಯಾಟವನ್ನು ರಾಜ್ಯದಲ್ಲಿ ಪ್ರಥಮವಾಗಿ ಆಯೋಜನೆ ಮಾಡಲು ಅವಕಾಶ ಕಲ್ಪಿಸಿಕೊಟ್ಟ ಹಿನ್ನೆಲೆ ಮತ್ತು ಮುಂದೆ ನಡೆಯುವ ತಯಾರಿಗೆ ಸಂಬಂಧಿಸಿ ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷರು ಮತ್ತು ಭಾರತೀಯ ಕುಸ್ತಿ ಒಕ್ಕೂಟದ ಜಂಟಿ ಕಾರ್ಯದರ್ಶಿಯಾಗಿರುವ ಮತ್ತು ಇಂಡಿಯನ್ ಬೀಚ್ ಕುಸ್ತಿ ಫೆಡರೇಶನ್ ಅಧ್ಯಕ್ಷರಾದ ಪುತ್ತೂರಿನ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿಯವರು ಇತಿಹಾಸ […]Read More

ಸ್ಥಳೀಯ

ಉಜಿರೆ ಎಸ್ ಡಿಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಅಭಿವೃದ್ಧಿ ಹೊಂದುತ್ತಿರುವುದು ಶ್ಲಾಘನೀಯ:ಡಾ| ಚಿದೇಂದ್ರ ಎಂ

  ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಧಾರವಾಡ ಎಸ್.ಡಿ.ಎಂ ಯೂನಿರ್ವಸಿಟಿಯ ರಿಜಿಸ್ಟಾçರ್ ಹಾಗೂ ಮೂಳೆ ಚಿಕಿತ್ಸಾ ವಿಭಾಗದ ಮುಖ್ಯಸ್ಥರೂ ಆಗಿರುವ ಡಾ| ಚಿದೇಂದ್ರ ಎಂ. ಶೆಟ್ಟರ್ ಅ. 24ರಂದು ಭೇಟಿ ನೀಡಿದರು. ಬಳಿಕ ಎಲ್ಲಾ ವಿಭಾಗದ ಮುಖ್ಯಸ್ಥರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇವಲ ವಿಶಾಲವಾದ ಕಟ್ಟಡ ನೋಡಿ ಯಾವ ರೋಗಿಯೂ ಬರುವುದಿಲ್ಲ. ಆಸ್ಪತ್ರೆ ಅಭಿವೃದ್ಧಿಯಾಗಬೇಕಾದರೆ ಅಲ್ಲಿ ತುರ್ತಾಗಿ ದೊರೆಯುವ ಉತ್ತಮ ಸೇವೆ ಹಾಗೂ ರೋಗಿ ಮತ್ತು ರೋಗಿಯ ಸಹಾಯಕರೊಂದಿಗೆ ನಾವು ನಡೆಸುವ ಸಂವಹಣ ಕೂಡ ಪ್ರಮುಖ ಪಾತ್ರ […]Read More

ಸ್ಥಳೀಯ

ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಆಶಾಕೇಂದ್ರವಾಗಲಿದೆ ಬೈಂದೂರಿನ ಹೇನಬೇರು ಶಾಲೆ

  (ಬೈಂದೂರು ಅ. 22) : ಸೇವಾಭಾರತಿ ಕನ್ಯಾಡಿಯು ಕಳೆದ 6 ಜಿಲ್ಲೆಗಳ ವ್ಯಾಪ್ತಿಗಳಲ್ಲಿ 700ಕ್ಕೂ ಹೆಚ್ಚು ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಪುನಶ್ಚೇತನವನ್ನು ನೀಡುತ್ತಾ ಬಂದಿದ್ದು. ಇದರಲ್ಲಿ 100 ಕ್ಕೂ ಹೆಚ್ಚು ಮಂದಿ ಒತ್ತಡಗಾಯದಿಂದ ಬಳಲುತ್ತಿದ್ದು ಇದರ ನಿರ್ವಹಣೆಯನ್ನು ಮಾಡುವುದು ಅತಿ ಕಷ್ಟ. ಒತ್ತಡ ಗಾಯಗಳಿರುವಂತ ವ್ಯಕ್ತಿಗಳು ಪುನಶ್ಚೇತನವನ್ನು ಪಡೆದುಕೊಳ್ಳುವುದು ಸಹ ಕಷ್ಟದ ಸಂಗತಿ. ಈ ನಿಟ್ಟಿನಲ್ಲಿ ಬೈಂದೂರಿನ ಪಡುವರಿ ಗ್ರಾಮದಲ್ಲಿರುವ ಹೇನಬೇರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು 6 ವರ್ಷಗಳಿಂದ ವಿದ್ಯಾರ್ಥಿಗಳ ದಾಖಲಾತಿಯ ಕೊರತೆಯಿಂದ ಮುಚ್ಚಿದ್ದು. […]Read More

ಧಾರ್ಮಿಕ ಸ್ಥಳೀಯ

ಜ.7-12 ಪೆರ್ಲ ಬೈಪಾಡಿ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ:ಸಮಾಲೋಚನಾ ಸಭೆ

  ಬಂದಾರು : ಬಂದಾರು ಗ್ರಾಮದ ಪೆರ್ಲ ಬೈಪಾಡಿ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಜನವರಿ 07 ರಿಂದ 12 ರವರೆಗೆ ನಡೆಯುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಅನೇಕ ಪೂರ್ವಭಾವಿ ರೂಪುರೇಷೆ, ತಯಾರಿಗಳು ಭರದಿಂದ ಸಾಗುತಿದ್ದು, ನೂತನ ಸಭಾಭಾವನ ನಿರ್ಮಾಣ ಕಾರ್ಯದ ಸಲುವಾಗಿ ಅಕ್ಟೋಬರ್ 24 ರಂದು ಶ್ರೀ ಕ್ಷೇತ್ರಕ್ಕೆ ವಾಸ್ತುಶಿಲ್ಪಿಯವರಾದ ಪ್ರಸಾದ್ ಮುನಿಯoಗಳರವರು ಭೇಟಿ ನೀಡಿ ಮುಂದಿನ ಕಾಮಗಾರಿಯ ಬಗ್ಗೆ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರು, ಆಡಳಿತ ಮಂಡಳಿ, ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು, ಸದಸ್ಯರು […]Read More

error: Content is protected !!