ಧರ್ಮಸ್ಥಳ: ಸೌಜನ್ಯ ಕೊಲೆ ಪ್ರಕರಣ: ಆರೋಪಿ ಸಂತೋಷ್ ರಾವ್ ನಿರಪರಾಧಿ: ಕೊನೆಗೂ ಸಿಗಲಿಲ್ಲ ನ್ಯಾಯ
ಧರ್ಮಸ್ಥಳ: 2012ರಲ್ಲಿ ನಡೆದ ಉಜಿರೆಯ ವಿದ್ಯಾರ್ಥಿನಿ ಸೌಜನ್ಯ (17 ವರ್ಷ) ಕೊಲೆ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂತೋಷ್ ರಾವ್‌ನನ್ನು ಕೋರ್ಟ್ ದೋಷಮುಕ್ತಗೊಳಿಸಿದೆ.
ಸುಮಾರು 10ವರುಷಗಳ ರಾಷ್ಟ್ರ ಮಟ್ಟದಲ್ಲಿ ಬಹಳ ಸುದ್ದಿಮಾಡಿ ಇಡೀ ದೇಶವೇ ದಕ್ಷಿಣ ಕನ್ನಡ ಜಿಲ್ಲೆಯ ಕುಗ್ರಾಮದತ್ತ ತಿರುಗಿನೋಡುವಂತೆ ಮಾಡಿದ್ದ ಉಜಿರೆ ಎಸ್ ಡಿ ಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ತೀರ್ಪು ಇದೀಗ ಬರೋಬ್ಬರಿ 11 ವರ್ಷಗಳ ಬಳಿಕ ಹೊರಬಿದ್ದಿದ್ದು, ಕೊನೆಗೂ ಸೌಜನ್ಯಳ ಸಾವಿಗೆ ನ್ಯಾಯ ದೊರಕದಂತಾಗಿದೆ.