ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಿಯ ಪವಾಡ: ನೊಂದ ದಂಪತಿಗಳ ಬಾಳಲ್ಲಿ ಸಂತಾನ ಭಾಗ್ಯ ಕರುಣಿಸಿದ ತಾಯಿ ಚಾಮುಂಡೇಶ್ವರಿ
ಆರಿಕೋಡಿ: ಅಭಯದ ನುಡಿಯಿಂದ ತನ್ನ ಕಷ್ಟಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಅದೆಷ್ಟೋ ಭಕ್ತರು ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಿಯ ಮೊರೆಹೋಗುತ್ತಾರೆ. ಅದೆಷ್ಟೋ ಭಕ್ತರಿಗೆ ಸಂತಾನಭಾಗ್ಯವಿಲ್ಲದೆ ಹಲವಾರು ದೇವಾಲಯಗಳಿಗೆ ಹರಕೆ ಇತ್ಯಾದಿಗಳನ್ನು ನೀಡಿದರೂ ಒಳಿದು ಬರದ ಭಾಗ್ಯ ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಿಯ ಮಹಿಮೆಯಿಂದ ಒಳಿದಿರುವ ನಿದರ್ಶನಗಳು ನಮ್ಮ ಕಣ್ಣ ಮುಂದಿದೆ.
ಅಂತೆಯೇ ಕಡಬ ತಾಲೂಕಿನ ಅಲಂದಾಯ ಗ್ರಾಮದ ಕೊಲೆಂಜಿರೋಡಿ ಮನೆಯ ರೋಹಿತ್ ಮತ್ತು ರಕ್ಷಿತಾ ಎಂಬುವವರು ಮೂರು ವರ್ಷದ ಹಿಂದೆ ಮದುವೆಯಾದರು. ಅವರ ದಾಂಪತ್ಯ ಜೀವನದಲ್ಲಿ ಮಕ್ಕಳ ಭಾಗ್ಯ ಒದಗಿ ಬರಲಿಲ್ಲ. ಎಲ್ಲಾ ರೀತಿಯ ಪ್ರಯತ್ನ ಪಟ್ಟರೂ ಪ್ರಯೋಜನ ಸಿಗಲಿಲ್ಲ. ಆ ಸಂದರ್ಭದಲ್ಲಿ ಪವಿತ್ರ ಕ್ಷೇತ್ರವಾದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಗೆ ಬಂದು ಶ್ರೀದೇವಿ ಚಾಮುಂಡೇಶ್ವರಿಯ ಆಭಯ ನುಡಿಯಲ್ಲಿ ವಿಚಾರಣೆ ಮಾಡಿದರು. ಆ ಸಂದರ್ಭದಲ್ಲಿ ಸಮಸ್ಯೆಯನ್ನು ಪರಿಹಾರ ಮಾಡಿ, ನಿಮ್ಮ ದಾಂಪತ್ಯದಲ್ಲಿ ಒಂದು ವರ್ಷದ ಒಳಗಡೆ ಮಕ್ಕಳ ಭಾಗ್ಯ ಒದಗಿ ಬರುತ್ತದೆ ಎಂದು ಆಭಯಕೊಟ್ಟಳು. ಕೊಟ್ಟ ಮಾತಿನ ಪ್ರಕಾರವಾಗಿ ಅವರ ದಾಂಪತ್ಯದಲ್ಲಿ ಮಗುವಿನ ಜನನ ವಾಯಿತು. ಅವರ ದಾಂಪತ್ಯದ ಕತ್ತಲೆಯನ್ನು ದೂರ ಮಾಡಿದ ಶ್ರೀದೇವಿಗೆ ವಿಶೇಷವಾಗಿ ಪೂಜೆಯನ್ನು ಸಲ್ಲಿಸಿದರು.