ಬೆಳ್ತಂಗಡಿ ಬಿ. ಎಂ ಎಸ್ ಕಛೇರಿ ವ್ಯಾಪ್ತಿಯಲ್ಲಿ ಕ್ಷೇಮನಿಧಿ ಯೋಜನೆಗೆ ಚಾಲನೆ
ಬೆಳ್ತಂಗಡಿ : ಬೆಳ್ತಂಗಡಿ ಬಿ. ಎಂ ಎಸ್ ಕಛೇರಿ ವ್ಯಾಪ್ತಿಯಲ್ಲಿ ಕ್ಷೇಮನಿಧಿ ಯೋಜನೆ ಚಾಲನೆ ಕಾರ್ಯಕ್ರಮವು ರಿಕ್ಷಾ ಚಾಲಕ – ಮಾಲಕರ ಸಂಘದ ಅಧ್ಯಕ್ಷ ಕೃಷ್ಣ ಬೆಳಾಲು ಇವರ ಅಧ್ಯಕ್ಷತೆಯಲ್ಲಿ ಫೆ.22 ರಂದು ನಡೆಯಿತು .
ಕಾರ್ಯಕ್ರಮದ ಮುನ್ನೋಟವನ್ನು ರಾಜ್ಯ ಕಾರ್ಯದರ್ಶಿಯಾದ ಜಯರಾಜ್ ಸಾಲ್ಯಾನ್ ತಿಳಿಸಿದರು. ಅಧ್ಯಕ್ಷರು ಕ್ಷೇಮ ನಿಧಿ ಬಗ್ಗೆ ಮಾಹಿತಿ ನೀಡಿದರು. ರಿಕ್ಷಾ ಚಾಲಕ ಮಾಲಕ ಸಂಘದ ಕಾರ್ಯದರ್ಶಿಯಾದ ರಮೇಶ್ ಕುದ್ರಡ್ಕ ಇವರು ಸ್ವಾಗತ ಮತ್ತು ಧನ್ಯವಾದವಿತ್ತರು. ಗೌರವ ಸಲಹೆಗಾರರಾದ ಉಮೇಶ್ ಅತ್ತಾಜೆ,ಬಿಎಂಎಸ್ ತಾಲೂಕು ಸಂಯೋಜಕ ಸಾಂತಪ್ಪ ಕಲ್ಮಂಜ ಉಪಸ್ಥಿತರಿದ್ದರು.