ಬಳಂಜ: ಕೋಟ್ಯಾನ್ ರಾಕರ್ಸ್ ನಿಂದ ವಾಲಿಬಾಲ್ ಪಂದ್ಯಾಟ: ಖ್ಯಾತ ನಟ ಸುಮನ್ ತಲ್ವಾರ್ ಉಪಸ್ಥಿತಿ
ಬಳಂಜ: ಕೋಟ್ಯಾನ್ ರಾಕರ್ಸ್ ವತಿಯಿಂದ, ಬಳಂಜ ವಾಲಿಬಾಲ್ ಕ್ಲಬ್ ಇದರ ಸಹಕಾರದೊಂದಿಗೆ ಹೊನಪು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಕೋಟ್ಯಾನದ ರಾಕರ್ಸ್ ಟ್ರೋಫಿ- 2023 ಶ್ರೀ ದೈವ ಕೊಡಮಣಿತ್ತಾಯ ಆವರಣ ಬಳಂಜದಲ್ಲಿ ಜ,14 ರಂದು ನಡೆಯಿತು.
ಪಂದ್ಯಾವಳಿಯ ಉದ್ಘಾಟನೆಯನ್ನು ಚಿತ್ರನಟ ಅರವಿಂದರವರು ನೇರವೇರಿಸಿ ಶುಭಕೋರಿದರು.
ಕ್ರೀಡಾಂಗಣದ ಉದ್ಘಾಟನೆಯನ್ನು ನಟ ಗುರುಹೆಗ್ಡೆ ಅವರು ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಹುಭಾಷಾ ನಟ ಸಮನ್ ತಲ್ವಾರ್, ಹಿರಿತೆರೆ ಹಾಗೂ ಕಿರುತೆರೆ ನಿರ್ದೇಶಕ ವಿನು ಬಳಂಜ, ಚಲನ ಚಿತ್ರ ನಟರಾದ ಗೀರೀಶ್,ಧವಳ್,ಪ್ರಸನ್ನ,ತಮ್ಮಣ್ಣ ಶೆಟ್ಟಿ, ನಟಿ ಶಾಂತಳಾ ಕಾಮತ್, ರೋಟರಿ ಕ್ಲಬ್ ಬೈಕಂಪಾಡಿಯ ಪೂರ್ವಾಧ್ಯಕ್ಷ ಭರತ್ ಶೆಟ್ಟಿ, ಬಳಂಜ ಬಿಲ್ಲವ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಹೆಚ್.ಎಸ್, ಪ್ರಗತಿಪರ ಕೃಷಿಕ ವಿಶ್ವನಾಥ ಹೊಳ್ಳ, ಉದ್ಯಮಿ ಅನಂತರಾಮ ಹೊಳ್ಳ,ಪ್ರೊಫೆಸರ್ ರಂಜಿತ್ ಹೆಚ್.ಡಿ, ಬಳಂಜ ವಾಲಿಬಾಲ್ ಕ್ಲಬ್ ಅಧ್ಯಕ್ಷ ರಾಕೇಶ್ ಹೆಗ್ಡೆ,ಕಾರ್ಯದರ್ಶಿ ಯೋಗೀಶ್ ಆರ್,ಬಳಂಜ ಗ್ರಾ.ಪಂ ಸದಸ್ಯ ಯಶೋಧರ ಶೆಟ್ಟಿ, ಕೋಟ್ಯಾನ್ ರಾಕರ್ಸ್ ತಂಡದ ಮ್ಯಾನೇಜರ್ ಶರತ್ ಅಂಚನ್, ಸಂಪತ್ ಕೋಟ್ಯಾನ್, ಪ್ರವೀಣ್ ಕೋಟ್ಯಾನ್, ಜಗದೀಶ್ ಕೋಟ್ಯಾನ್ , ದಿನೇಶ್ ಪೂಜಾರಿ ಅಂತರ,ರಂಜಿತ್ ಪೂಜಾರಿ,ಪ್ರಣಾಮ್ ಹಾಗೂ ಆಟಗಾರರು ಸಹಕರಿಸಿದರು.
ಪಂದ್ಯಾವಳಿಯು ಅತ್ಯಂತ ರೋಚಕತೆಯಿಂದ ಕೂಡಿದ್ದು ಮಜ್ಜೇನಿಬೈಲು ಬ್ರದರ್ಸ್ ತಂಡವು ವಿಜಯಶಾಲಿಯಾಗಿ ಎರಡನೇ ಬಾರಿಗೆ ಟ್ರೋಫಿ ತನ್ನದಾಗಿಸಿಕೊಂಡಿತ್ತು.
ದ್ವಿತೀಯ ಇಕೋಫ್ರೇಶ್ ಎಂಟರ್ಪ್ರೈಸಸ್, ತೃತೀಯ ಶ್ರೀಮಾತ ಎಂಟರ್ಪ್ರೈಸಸ್, ಚತುರ್ಥ ಶಿವಗಿರಿ ಕಾಪಿನಡ್ಕ ಪ್ರಶಸ್ತಿ ಪಡೆದರು.
ವೈಯಕ್ತಿಕ ಪ್ರಶಸ್ತಿಗಳನ್ನು ಬೆಸ್ಟ್ ಪಾಸರ್ ಲತೇಶ್ ಪೆರಾಜೆ,ಆಲ್ ರೌಂಡರ್ ಆಗಿ ದೀಪಕ್ ಹೆಚ್.ಡಿ,ಬೆಸ್ಟ್ ಹೊಡೆತಗಾರ ಗುರುಪ್ರಸಾದ್ ದರಿಮಾರ್ ಹಾಗೂ ಡಿಪೆಂಡರ್ ಆಗಿ ಪ್ರಶಸ್ತಿ ಪಡೆದರು.
ಕೋಟ್ಯಾನ್ ರಾಕರ್ಸ್ ತಂಡದ ಮಾಲಕ ಸಂತೋಷ್ ಪಿ ಕೋಟ್ಯಾನ್ ಸ್ವಾಗತಿಸಿದರು. ಚಂದ್ರಹಾಸ ಬಳಂಜ ವಂದಿಸಿದರು.ಮೊಹಮ್ಮದ್ ನಿಸಾರ್ ವೀಕ್ಷಕ ವಿವರಣೆಯನ್ನು ಮಾಡಿದರು.