ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ:ಸಾಮಾಜಿಕ, ಧಾರ್ಮಿಕ,ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರದ ಸಾಧನೆಗೆ ಪ್ರಶಸ್ತಿ
ಬೆಳ್ತಂಗಡಿ:ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯು ಕಳೆದ 45 ವರುಷಗಳಿಂದ ಸಾಮಾಜಿಕ,ಧಾರ್ಮಿಕ, ಶೈಕ್ಷಣಿಕ, ಕ್ರೀಡಾ, ಸಾಂಸ್ಕೃತಿಕ, ಆರೋಗ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಹಾಗೂ ಸಮಾಜಮುಖಿ ಸಾಧನೆಯನ್ನು ಗುರುತಿಸಿ ಈ ಬಾರಿಯ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅಯ್ಕೆಯಾಗಿದೆ.
ಮಂಗಳೂರಿನಲ್ಲಿ ನ. 1ರಂದು ನಡೆದ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್,ಸಂಸದ ಕ್ಯಾ.ಬೃಜೇಶ್ ಚೌಟ,ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ, ಜಿಲ್ಲಾಧಿಕಾರಿಯವರು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷರಾದ ಸಂತೋಷ್ ಪಿ ಕೋಟ್ಯಾನ್ ಅವರಿಗೆ ಪ್ರಶಸ್ತಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ದಿನೇಶ್ ಅಂತರ, ಕಾರ್ಯದರ್ಶಿ ಜಗದೀಶ್ ಬಳ್ಳಿದಡ್ಡ ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷರಾದ ಭಾರತಿ ಸಂತೋಷ್ ಸಾಲಿಯಾನ್, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಶರತ್ ಅಂಚನ್ ಹಾಗೂ ಪುರಸಭೆ ಸದಸ್ಯರಾದ ಜಯ ಪೂಜಾರಿ ದರ್ಖಾಸು, ನಿರ್ದೇಶಕರಾದ ಯತೀಶ್ ವೈ ಎಲ್, ದಿನೇಶ್ ನಿಟ್ಟಡ್ಕ, ರಂಜಿತ್ ಮಜಲಡ್ಡ, ಸದಸ್ಯರಾದ ಚಂದ್ರಹಾಸ ಬಳಂಜ, ರೂಪನಾಥ ವೈ ಬಳಂಜ,ಶಿವಧ್ಯಾನ್ ಉಪಸ್ಥಿತರಿದ್ದರು.
ಸಮಾಜದಲ್ಲಿ ತೀರಾ ಹಿಂದುಳಿದಿರುವ ಬಡ ಕುಟುಂಬಗಳಿಗೆ ಆರ್ಥಿಕ ನೆರವು, ಗ್ರಾಮಗ್ರಾಮಗಳಲ್ಲಿ ಸಾಮಾಜಿಕ ಕಾರ್ಯ,ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು, ವೃತ್ತಿ ಮಾರ್ಗದರ್ಶನ ಶಿಬಿರ, ಆಶಕ್ತರಿಗೆ ಆರೋಗ್ಯ ನೆರವು, ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ,ಯೋಗ ಶಿಬಿರ,ಗುರು ಜಯಂತಿ,ಸಾರ್ವಜನಿಕ ಶ್ರೀ ಶಾರದೋತ್ಸವ, ಬೊಳ್ಳಜ್ಜ ದೈವದ ಅಗೇಲು ಸೇವೆ,ಭರತನಾಟ್ಯ,ಕುಣಿತಾ ಭಜನೆ,ಶಾಸ್ತ್ರೀಯ ಸಂಗೀತ,ಧರ್ಮ ಶಿಕ್ಷಣ,ಕ್ರೀಡಾಕೂಟ,ದೀಪಾವಳಿ ಆಚರಣೆ,ಗುರು ಪೂಜೆ,ಧತ್ತಿನಿಧಿಯಿಂದ ಪುಸ್ತಕ ವಿತರಣೆ,ಸತ್ಯನಾರಾಯಣ ಪೂಜೆ,ಸರ್ವೇಶ್ವರಿ ದೇವಿಯ ಪೂಜೆ,ಭಜನೆ,ವ್ಯಕ್ತಿತ್ವ ವಿಕಸನ ಶಿಬಿರ, ಹೀಗೆ ನೂರಾರು ಕಾರ್ಯಕ್ರಮಗಳನ್ನು ಸಂಘವು ನಡೆಸುತ್ತಾ ಬಂದಿದೆ. ಸಂಘದ ನೂರಾರು ಸದಸ್ಯರು ಕಳೆದ 45 ವರುಷಗಳಿಂದ ಸಾಮಾಜಿಕವಾಗಿ ತೊಡಗಿಸಿಕೊಂಡು ಸೇವೆಯನ್ನು ನೀಡುತ್ತಾ ಬರುತ್ತಿದ್ದಾರೆ.
ಸಂಘದ ಅದ್ಯಕ್ಷ ಸಂತೋಷ್ ಪಿ ಕೋಟ್ಯಾನ್, ಗೌರವಾಧ್ಯಕ್ಷ ಹೆಚ್.ಧರ್ಣಪ್ಪ ಪೂಜಾರಿ,ಗೌರವ ಮಾರ್ಗದರ್ಶಕ ಕೆ.ವಸಂತ ಸಾಲಿಯಾನ್, ಮಾಜಿ ಅಧ್ಯಕ್ಷರುಗಳಾದ ದಿ.ಬೋಜರಾಜ್ ಅಮಿನ್ ಮಜಲು,ನೋಣಯ್ಯ ಪೂಜಾರಿ ಎಲ್ಯೋಟ್ಟು,ಶ್ರೀಧರ ಪೂಜಾರಿ ಅಲ್ಲಿಂತ್ಯಾರು,ಕೊರಗಪ್ಪ ಪೂಜಾರಿ ಪೆರಾಜೆ,ರವೀಂದ್ರ ಪೂಜಾರಿ ಹೇವ,ಬಿ.ಶಾಂತಪ್ಪ ಸುವರ್ಣ ಹಾಕೋಟೆ,ಯುವರಾಜ ವೈ ಎಲ್ಯೋಟ್ಟು,ಶ್ಯಾಮ್ ಬಂಗೇರ ಪೆರಾಜೆ,ಬಾಲಕೃಷ್ಣ ಪೂಜಾರಿ ಯೈಕುರಿ,ಹೆಚ್.ದೇಜಪ್ಪ ಪೂಜಾರಿ ಸುಧಾಮ,ತಿಮ್ಮಪ್ಪ ಪೂಜಾರಿ ತಾರಿಪಡ್ಪು,ಸಂತೋಷ್ ಕುಮಾರ್ ಕಾಪಿನಡ್ಕ,ದಿನೇಶ್ ಪೂಜಾರಿ ಕುದ್ರೋಟ್ಟು,ಸುರೇಶ್ ಪೂಜಾರಿ ಜೈಮಾತಾ,ದಿನೇಶ್ ಪೂಜಾರಿ ಅಂತರ,ಪ್ರವೀಣ್ ಕುಮಾರ್ ಹೆಚ್.ಎಸ್ ಹೊಸಮನೆ ಸಂಘದ ಸಾರಥ್ಯ ವಹಿಸಿ ಸೇವೆ ಸಲ್ಲಿಸಿದ್ದಾರೆ.
ಪ್ರಸ್ತುತ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್, ಪ್ರ.ಕಾರ್ಯದರ್ಶಿ ಜಗದೀಶ್ ಪೂಜಾರಿ, ಪ್ರವೀಣ್ ಕುಮಾರ್ ಹೆಚ್.ಎಸ್,ಸಂತೋಷ್ ಕುಮಾರ್ ಕಾಪಿನಡ್ಕ, ದಿನೇಶ್ ಕೋಟ್ಯಾನ್,ಪ್ರವೀಣ್ ಕೋಟ್ಯಾನ್ ದರ್ಖಾಸು,ದಿನೇಶ್ ಅಂತರ,ಯೋಗೀಶ್ ಆರ್,ಯತೀಶ್ ವೈ.ಎಲ್,ಸದಾನಂದ ಪೂಜಾರಿ, ಪ್ರವೀಣ್ ಲಾಂತ್ಯಾರ್,ಜಗದೀಶ್ ಕೋಟ್ಯಾನ್,ರಂಜಿತ್ ಪೂಜಾರಿ,ರಕ್ಷಿತ್ ಪೂಜಾರಿ,ರವೀಂದ್ರ,ಪವನ್,ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಶರತ್ ಅಂಚನ್,ಕಾರ್ಯದರ್ಶಿ ಲತೇಶ್,ಮಹಿಳಾ ಬಿಲ್ಲವ ವೇದಿಕೆ ಅದ್ಯಕ್ಷೆ ಭಾರತಿ ಸಂತೋಷ್, ಕಾರ್ಯದರ್ಶಿ ಅಶ್ವಿತಾ ಸಂತೋಷ್ ಹಾಗೂ ಸದಸ್ಯರು ಸೇವೆ ನೀಡುತ್ತಿದ್ದಾರೆ.