ಪುತ್ತೂರು: ಹಿಂದೂ ರಾಷ್ಟ್ರ ಅಧಿವೇಶನ
ಪುತ್ತೂರು : ಸೆಕ್ಯಲರಿಸಂನ ಹೆಸರಿನಲ್ಲಿ ಹಿಂದೂ ಧರ್ಮದ ಮೇಲಾಗುವ ಆಕ್ರಮಣಗಳು, ಹಿಂದೂಗಳ ಹತ್ಯೆಯನ್ನು ತಟೆಗಟ್ಟಲು ಇರುವ ಏಕೈಕ ಮಾರ್ಗವೆಂದರೆ ಹಿಂದೂಸ್ತಾನವನ್ನು ಸಂವಿಧಾನಿಕವಾಗಿ ಹಿಂದೂ ರಾಷ್ಟ್ರವೆಂದು ಘೋಷಿಸುವುದಾಗಿದೆ. ಭಾರತವು ಸ್ವಯಂಭೂ ಹಿಂದೂ ರಾಷ್ಟ್ರವಾಗಿರುವಾಗ, ಹಿಂದೂ ರಾಷ್ಟ್ರವನ್ನಾಗಿಸಲು ತಡವೇಕೆ ಎಂದು ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕರ್ನಾಟಕ ಸಮನ್ವಯಕರಾದ ಶ್ರೀ. ಚಂದ್ರ ಮೊಗೇರ ಇವರು ಉದ್ಗರಿಸಿದರು ! ಅವರು ಪುತ್ತೂರಿನ ಸ್ವಾಮಿ ಕಲಾ ಮಂದಿರದಲ್ಲಿ ನವೆಂಬರ್ 19 ಮತ್ತು ನವೆಂಬರ್ 20 ರಂದು ಹಿಂದೂ ಜನಜಾಗೃತಿ ಸಮಿತಿಯಿಂದ ಆಯೋಜಿಸಲಾಗಿದ್ದ ಹಿಂದೂ ರಾಷ್ಟ್ರ ಜಾಗೃತಿ ಅಧಿವೇಶನದಲ್ಲಿ ಮಾತನಾಡಿದರು.
ಪುತ್ತೂರು ಅಂಬಿಕಾ ಸಮೂಹ ವಿದ್ಯಾ ಸಂಸ್ಥೆಯ ಸಂಚಾಲಕರಾದ ಶ್ರೀ.ಸುಬ್ರಹ್ಮಣ್ಯ ನಟ್ಟೋಜ,
ಹಿಂದೂ ಧರ್ಮದ ರಕ್ಷಣೆಯ ಬಗ್ಗೆ ಮಾತನಾಡುತ್ತಾ ಹಿಂದೂ ರಾಷ್ಟ್ರ ನಿರ್ಮಿತಿಯ ಯಜ್ಞದಲ್ಲಿ ಹಿಂದೂಗಳು ಸಮಿಧೆಯಂತೆ ಸಮರ್ಪಣೆಯಾಗಬೇಕು” – ಆದಿ ಶಂಕರಾಚಾರ್ಯರು ಹಿಂದೂ ಧರ್ಮವನ್ನು ಪುನರ್ಸ್ಥಾಪನೆ ಮಾಡಿದರು , ಸ್ವಾತಂತ್ರ್ಯ ವೀರ ಸಾರ್ವಕರ್ ಇವರು ಹಿಂದೂ ರಾಷ್ಟ್ರದ ನಿರ್ಮಾಣಕ್ಕಾಗಿ ಕರೆ ನೀಡಿದರು. ಇಂದು ಜಾತ್ಯಾತೀತ ರಾಷ್ಟ್ರದ ಕಲ್ಪನೆಯಲ್ಲಿ ಹಿಂದೂ ಧರ್ಮದ ಮೇಲೆ ಆಘಾತಗಳಾಗುತ್ತಿವೆ. ಈ ನಿಟ್ಟಿನಲ್ಲಿ ಧರ್ಮದ ರಕ್ಷಣೆಗಾಗಿ ಹಿಂದೂಗಳು ಸಮಿಧೆಯಂತೆ ಸಮರ್ಪಣೆಯಾಗಬೇಕಾಗಿದೆ ಎಂದು ಕರೆ ನೀಡಿದರು.
ವಿಶ್ವ ಹಿಂದೂ ಪರಿಷದ್ ನ ಜಿಲ್ಲಾ ಧರ್ಮಪ್ರಸಾರಕರಾದ ಶ್ರೀಕೃಷ್ಣ ಉಪಾಧ್ಯಾಯ ಮಾತನಾಡಿ ಹಿಂದೂಗಳು ರಾಷ್ಟ್ರ ಮತ್ತು ಧರ್ಮ ರಕ್ಷಣೆಗಾಗಿ ಪ್ರತಿದಿನ 1 ಗಂಟೆಯನ್ನು ನೀಡಿರಿ” –
ಹಿಂದೂ ರಾಷ್ಟ್ರದ ಕಲ್ಪನೆ ಸಾಕಾರವಾಗಲು ಜನ್ಮ ಹಿಂದೂಗಳು ಕರ್ಮ ಹಿಂದೂಗಳಾಗಬೇಕಾಗಿದೆ. ಈ ಮನುಷ್ಯ ಜನ್ಮವನ್ನು ಧರ್ಮಕಾರ್ಯಕ್ಕಾಗಿ ನೀಡಬೇಕಾಗಿದೆ. ಧರ್ಮರಕ್ಷಣೆಗಾಗಿ ಪ್ರತಿಯೊಬ್ಬ ಹಿಂದೂಗಳು ಕನಿಷ್ಠ 1 ಗಂಟೆಯನ್ನಾದರು ನೀಡಿದರೆ ಶೀಘ್ರವೇ ಭಾರತವು ಹಿಂದೂ ರಾಷ್ಟ್ರವಾಗಬಹುದು ಎಂದು ವಿಚಾರ ಮಂಡಿಸಿದರು
“ಗೋ ಮಾತೆಯ ರಕ್ಷಣೆಯು ಪ್ರತಿಯೊಬ್ಬ ಹಿಂದೂವಿನ ಕರ್ತವ್ಯವಾಗಿದೆ” ಗೋಮಾತೆಯನ್ನು ಹಿಂದೂ ಧರ್ಮದಲ್ಲಿ ಪೂಜನೀಯ ಸ್ಥಾನದಲ್ಲಿ ಗೌರವಿಸಲಾಗುತ್ತದೆ. ಗೋ ಮಾತೆಯು ಅಪಾಯದಲ್ಲಿರುವಾಗ ರಕ್ಷಣೆ ಮಾಡಲು ಸಿಧ್ದನಾಗಿರುವುದು ಪ್ರತಿಯೊಬ್ಬ ಹಿಂದೂವಿನ ಕರ್ತವ್ಯವಾಗಿದೆ. 33 ಕೋಟಿ ದೇವತೆಗಳು ವಾಸಿಸುವ ಗೋವಿನ ಪೋಷಣೆಯ ಜೊತೆಗೆ ಗೋ ಉತ್ಪನ್ನಗಳ ಬಳಕೆಗೆ ಉತ್ತೇಜಿಸಬೇಕಾಗಿದೆ. ಈ ಮೂಲಕ ದೇಶಿ ಗೋವಿನ ಸಂರಕ್ಷಣೆ ಮಾಡಬೇಕಾಗಿದೆ ಎಂದು ಜಯಾನಂದ, ಪ್ರಧಾನ ಕಾರ್ಯದರ್ಶಿ, ಭಾರತೀಯ ಗೋ ಪರಿವಾರ, ಪುತ್ತೂರು
ಎಂದು ಇವರು ವಿಚಾರ ಮಂಡಿಸಿದರು.
“ಮಕ್ಕಳಲ್ಲಿ ಧರ್ಮದ ವಿಚಾರಗಳ ಸಂಸ್ಕಾರವನ್ನು ಮೂಡಿಸುವುದು ಪ್ರತಿಯೊಬ್ಬ ಪೋಷಕರ ಕರ್ತವ್ಯವಾಗಿದೆ”ಹಿಂದೂ ಧರ್ಮವನ್ನು ಉಳಿಸುವ ಜೊತೆಗೆ ಅದನ್ನು ಬೆಳೆಸುವುದು ಮತ್ತು ಕೃತಿಯಲ್ಲಿ ತರುವುದು ಅಗತ್ಯವಾಗಿದೆ. ಮಕ್ಕಳಲ್ಲಿ ಬಾಲ್ಯದಿಂದಲೇ ಧರ್ಮದ ಬೀಜವನ್ನು ಬಿತ್ತಬೇಕು ಎಂದು ಸಾಮಾಜಿಕ ಹೋರಾಟಗಾರರಾದ
ದಿನೇಶ್ ಜೈನ್ ತಿಳಿಸಿದರು.