• December 8, 2024

ಪುತ್ತೂರಿನ ತೆಂಕಿಲದ ಸ್ವಾಮಿ ಕಲಾ ಮಂದಿರದಲ್ಲಿ ಅಂತಿಮದಿನದ ಹಿಂದೂ ರಾಷ್ಟ್ರ ಅಧಿವೇಶನ

 ಪುತ್ತೂರಿನ ತೆಂಕಿಲದ ಸ್ವಾಮಿ ಕಲಾ ಮಂದಿರದಲ್ಲಿ ಅಂತಿಮದಿನದ ಹಿಂದೂ ರಾಷ್ಟ್ರ ಅಧಿವೇಶನ

 

‌‌

ದೇಶದ ಶಾಂತಿಯನ್ನು ಕೆಡಿಸಲು ಪ್ರಯತ್ನಿಸುತ್ತಿರುವ ಮತ್ತು ಹಿಂದೂಗಳ ಹತ್ಯೆ ಮಾಡುತ್ತಿರುವ ರಾಷ್ಟ್ರ ವಿರೋಧಿ ಶಕ್ತಿಗಳ ವಿರುದ್ಧ ಹೋರಾಡಲು‌ ಮತ್ತು ಅಸಹಾಯಕ ಹಿಂದೂಗಳು ಹಾಗೂ ದೇಶದ ಆಸ್ತಿಯ ರಕ್ಷಣೆಗಾಗಿ ಹಿಂದೂಗಳು ಬಲಿಷ್ಠರಾಗಿ ಸಂಘಟಿತರಾಗಬೇಕಾಗುವುದು ಅವಶ್ಯಕತೆ ಇದೆ.ಈ ನಿಟ್ಟಿನಲ್ಲಿ ಸ್ವಸಂರಕ್ಷಣಾ ಪ್ರಶಿಕ್ಷಣವನ್ನು‌ ಕಲಿಯುವ ಅಗತ್ಯತೆಯ ಬಗ್ಗೆ ಉಡುಪಿ ಜಿಲ್ಲಾ ಹಿಂದೂ ಜನಜಾಗೃತಿ ಸಮಿತಿ ಸಮನ್ವಯಕರಾದ ವಿಜಯಕುಮಾರ್ ವಿಷಯ ಮಂಡಿಸಿದರು.

ಅವರು ನ.19 ರಂದು ಪುತ್ತೂರಿನ ತೆಂಕಿಲದ ಸ್ವಾಮಿ ಕಲಾ ಮಂದಿರದಲ್ಲಿ ನಡೆದ ಅಂತಿಮ ದಿನದ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಮಾತನಾಡಿದರು.

ನಂತರ ಮಾತನಾಡಿದ ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತ ಮಾತೃ ಸುರಕ್ಷಾ ಸಂಯೋಜಕರಾದ ಶ್ರೀ.ಗಣರಾಜ್ ಭಟ್ ಲವ್ ಜಿಹಾದ್ ಎಂಬ ಮೋಸದ ಜಾಲದಿಂದ ಮಾತೃ ಸಂಸ್ಕೃತಿಯನ್ನು ರಕ್ಷಿಸಲು ಕಠಿಬದ್ಧರಾಗಬೇಕು ಎಂದು ಹೇಳಿದರು.

ಲ್ಯಾಂಡ್ ಜಿಹಾದ್‌ಗೆ ಉತ್ತೇಜನ ನೀಡುವ ಕಾನೂನು ರದ್ದುಪಡಿಸಲು ಹಿಂದೂಗಳು ಹೋರಾಟ ನಡೆಸಬೇಕು ಎಂದು ಸಾಮಾಜಿಕ‌ ಹೋರಾಟಗಾರರಾದ ದಿನೇಶ್ ಜೈನ್ ಹೇಳಿದರು.

ಈ ಸಂದರ್ಭದಲ್ಲಿ ಮುಂಬರುವ 3 ನೇ ಮಹಾಯುಧ್ಧದಿಂದ ರಕ್ಷಣೆಯಾಗಲು ಭಗವಂತನ ಭಕ್ತರಾಗಿರಿ ಎಂದು ಸನಾತನ ಸಂಸ್ಥೆಯ ಆನಂದ ಗೌಡ ತಿಳಿಸಿದರು.

ಹಿಂದೂ ಸಹೋದರಿಯರೇ ಆತ್ಮಬಲವನ್ನು ವೃಧ್ಧಿಸಿ ಶೌರ್ಯವನ್ನು ಜಾಗೃತಿಗೊಳಿಸಿರಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಹಿಂದೂ ಜನಜಾಗೃತಿ ಸಮಿತಿ ಸಮನ್ವಯಕರಾದ ಸೌ.ಪವಿತ್ರಾ ಕುಡ್ವಾ ಹೇಳಿದರು.

ಹಿಂದೂ ಧರ್ಮಕ್ಕಾಗಿ ತನು-ಮನ- ಧನವನ್ನು ತ್ಯಾಗ ಮಾಡುವ ಮೂಲಕ ಅಳಿಲು ಸೇವೆಯನ್ನು ಮಾಡಿರಿ ಎಂದು ಧರ್ಮಪ್ರೇಮಿ ಉದ್ಯಮಿಗಳು ಮಧುಸೂದನ್ ಅಯಾರ್ ತಿಳಿಸಿದರು.

Related post

Leave a Reply

Your email address will not be published. Required fields are marked *

error: Content is protected !!