ಮಗು ಗಲಾಟೆ ಮಾಡಿತೆಂದು ಮನಸೋ ಇಚ್ಛೆ ಥಳಿಸಿದ ಪಾಪಿ ತಂದೆ: ನರಳಿ ಉಸಿರು ಚೆಲ್ಲಿದ 2 ವರ್ಷದ ಪುಟ್ಟ ಕಂದಮ್ಮ
ಹೈದರಾಬಾದ್: 2 ವರ್ಷದ ಪುಟ್ಟ ಕಂದಮ್ಮ ಗಲಾಟೆ ಮಾಡಿದ್ದಕ್ಕೆ ಮಗುವಿನ ತಂದೆ ಮನಸೋ ಇಚ್ಛೆ ಥಳಿಸಿದ್ದು ಪುಟ್ಟ ಕಂದಮ್ಮ ಉಸಿರು ಚೆಲ್ಲಿದ ಘಟನೆ ಹೈದರಾಬಾದ್ ನ ತೆಲಂಗಾಣದಲ್ಲಿ ನಡೆದಿದೆ.
ಕೋಪದ ಕೈಗೆ ಬುದ್ದಿ ಕೊಟ್ಟರೆ ಆಗುವ ಪರಿಣಾಮಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ. ಇದಕ್ಕೆ ದೃಷ್ಟಾಂತ ಎಂಬಂತೆ ಘಟನೆಯೊಂದು ವರದಿಯಾಗಿದೆ. ಜಗತ್ತಿನ ಪರಿವೇ ಇಲ್ಲದೆ ಆಟ ಆಡುತ್ತಾ ಎಲ್ಲರ ನಗಿಸುವ ಮುದ್ದು ಕಂದಮ್ಮ ಗಲಾಟೆ, ತುಂಟಾಟ ಮಾಡುವುದು ಸಹಜ. ಸಾಮಾನ್ಯವಾಗಿ ಮಗುವಿನ ಆಟ ನೋಡುತ್ತಾ ಅತ್ಯಂತ ಸಂತೋಷಗೊಳ್ಳುವ ಜೀವ ಎಂದರೆ ಅದು ತಂದೆ ಆದರೆ ಈ ಒಂದು ವರದಿಯಲ್ಲಿ ತಂದೆಯೇ ಮಗುವಿನ ಯಮನಾದ್ದಾನೆ.
ತಂದೆ ತನ್ನ ಎರಡು ವರ್ಷದ ಮಗುವಿಗೆ ಮನಬಂದಂತೆ ಥಳಿಸಿ ಕೊಂದಿರುವ ಅಮಾನವೀಯ ಘಟನೆ ನರೇಡ್ ಮೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.