• December 3, 2024

ಭಾರತದ 4ನೇ ಅತ್ಯುನ್ನತ ನಾಗರೀಕ ಪ್ರಶಸ್ತಿ ಪದ್ಮಶ್ರೀ ನಾಮನಿರ್ದೇಶನಗೊಂಡಿರುವ ಉಡುಪಿ ಯುವ ಸಾಧಕ ಸಂಜಯ್ ದಯಾನಂದ ಕಾಡೂರು

 ಭಾರತದ 4ನೇ ಅತ್ಯುನ್ನತ ನಾಗರೀಕ ಪ್ರಶಸ್ತಿ ಪದ್ಮಶ್ರೀ ನಾಮನಿರ್ದೇಶನಗೊಂಡಿರುವ   ಉಡುಪಿ ಯುವ ಸಾಧಕ ಸಂಜಯ್ ದಯಾನಂದ ಕಾಡೂರು

 

ಉಡುಪಿ ಜಿಲ್ಲೆ ಕೊಕ್ಕರ್ಣೆ ಕಾಡೂರು ಶ್ರೀಮತಿ ಪುತ್ರ ಸುನಿತಾ ಮತ್ತು ದಯಾನಂದ ಪೂಜಾರಿಯವರ ಪುತ್ರ ಸಂಜಯ್ ದಯಾನಂದ ಪೂಜಾರಿ 2025ರ ಪದ್ಮಶ್ರೀ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಅವರು
ಯುವ ಕಲಾವಿದ, ಉದ್ಯಮಿ, ಸಮಾಜ ಸೇವಕ ಹಾಗೂ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದರು. ಅವರು ಸರಳ ಸಜ್ಜನಿಕೆ ಮತ್ತು ಸಮಾಜಕ್ಕೆ ಬೇಕಾದ ವ್ಯಕ್ತಿಯಾಗಿದ್ದರು. ಎಲ್ಲರ ಮನದಲ್ಲೂ ಮೈಕ್ರೊ ಸಂಜು, ನ್ಯಾನೋ ಗಣೇಶ ಎಂದೇ ಗುರುತಿಸಿಕೊಂಡಿದ್ದಾರೆ .
ಮೈಕ್ರೋ ಕಲಾವಿದರಾಗಿ 2010 ರಲ್ಲಿ ತನ್ನ ಮೈಕ್ರೋ ಗಣೇಶನ ವಿಗ್ರಹಕ್ಕಾಗಿ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ಅನ್ನು ಪ್ರವೇಶಿಸಿದರು. ಇದಕ್ಕೂ ಮುನ್ನ 2003ರಲ್ಲಿ ಮೈಸೂರು ಕಲಾಮಂದಿರದಲ್ಲಿ ನಡೆದ ರಾಜ್ಯ ಮಟ್ಟದ ಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. ಧಾರವಾಡ ಚಿತ್ತಾರ ಆರ್ಟ್ ಗ್ಯಾಲರಿ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ಪ್ರಥಮ ಮೈಸೂರು ದಸರಾ ಕ್ರೀಡಾಕೂಟದ ಲಾಂಗ್ ಜಂಪ್ ನಲ್ಲಿ ರಾಜ್ಯಮಟ್ಟದ ಆಯ್ಕೆ ಕಾಲೇಜು ದಿನದ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿದ್ದರು ದಾವಣಗೆರೆ ಲಲಿತಾಕಲಾ ವಿದ್ಯಾಲಯದ ವಿಶುಯಲ್ ಆರ್ಟ್ ಪದವಿಯೊಂದಿಗೆ ಹಲವಾರು ಪ್ರಶಸ್ತಿ, ಪದಕಗಳನ್ನು ಪಡೆದಿದ್ದಾರೆ.
2 ಗಿನ್ನಿಸ್ ದಾಖಲೆಗಳು 1 ವರ್ಲ್ಡ್ ಕಿಂಗ್ಸ್ ವರ್ಲ್ಡ್ ಯೂತ್ ಐಕಾನ್ ಪ್ರಶಸ್ತಿ ತುಳು ಸಂಶೋಧನೆಗಾಗಿ ಹಾಂಗ್ ಕಾಂಗ್ ಜಾನಪದ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಯುವ ಪ್ರಶಸ್ತಿ, ಮತ್ತು 200ಕ್ಕೂ ಮಿಕ್ಕಿ ಸನ್ಮಾನ ಪ್ರಶಸ್ತಿ ಗೌರವಗಳನ್ನು ಪಡೆದು ಏಷ್ಯಾದ ಅತ್ಯುತ್ತಮ ಸಾಧಕರ ಪಟ್ಟಿಯಲ್ಲಿ 57 ನೇ ಸ್ಥಾನ ಪಡೆದ ಸಾಧಕರಾದ ಇವರು 2023 ರಿಂದ ಭಾರತದ ಟಾಪ್ 10 ಸಾಧಕ ಕಲಾವಿದರ ಪಟ್ಟಿಯಲ್ಲಿ 3 ನೇ ಸ್ಥಾನ ಪಡೆದುಕೊಂಡಿದ್ದಾರೆ 1ಕವನ ಸಂಕಲನವನ್ನು ಬರೆದಿದ್ದಾರೆ. ಟಿವಿ ಮಾಧ್ಯಮ ಸಂದರ್ಶನ ಸಭೆ, ಸಮಾರಂಭ ಎಂದು ಸಾಮಾಜಿಕವಾಗಿ ಗುರುತಿಸಿಕೊಂಡರೂ ತುಳು ಸಂಸ್ಕೃತಿಯನ್ನು ಉಳಿಸಿ ತುಳುವಿನ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿರುವುದು ಗಮನಾರ್ಹ.

ಭಾರತ ಸರ್ಕಾರ ನೀಡುವ ಅತ್ಯುನ್ನತ ಪ್ರಶಸ್ತಿಯಾದ ಪದ್ಮಶ್ರೀ ಅವರ ಶ್ರಮ ಮತ್ತು ಶ್ರಮಕ್ಕೆ ಸಂದ ಗೌರವ.

ಪದ್ಮಶ್ರೀ ಗೆ ನಾಮ ನಿರ್ದೇಶನಗೊಂಡ ಯುವ ಸಾಧಕ ಉಡುಪಿಯ ಸಂಜಯ್ ದಯಾನಂದ ಕಾಡೂರುರವರ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿಯವರಿಂದ ಪತ್ರ

3 ಗಿನ್ನಸ್ ಧಾಖಲೆ 4 ಅಂತಾರರಾಷ್ಟ್ರೀಯ 2 ರಾಷ್ಟೀಯ ಹಾಗೂ 118 ಸಾರ್ವಜನಿಕ ಸನ್ಮಾನಗಳು ಹಾಂಗಕೊಂಗ್ ವಿಶ್ವವಿದ್ಯಾಲಯದಿಂದ ತುಳು ಸಂಶೋಧನೆಗೆ ಗೌರವ ಡಾಕ್ಟರೇಟ್ ಪಡೆದ ಹಾಗೂ ಚಿತ್ರರಂಗದಲ್ಲಿ ನಿರ್ದೇಶಕರು ಹಾಗೂ ನಿರ್ಮಾಪಕರಾಗಿ ಗುರುತಿಸಿಕೊಂಡ ಯುವ ಮೈಕ್ರೋ ಆರ್ಟಿಸ್ಟ್ ಹಾಗೂ ದಕ್ಷಿಣ ರೈಲ್ವೆ ತಿರುವನಂತಪುರ ವಿಭಾಗದ ಅಧಿಕಾರಿ ಶ್ರೀಯುತ ಸಂಜಯ್ ದಯಾನಂದ ಕಾಡೂರು ರವರ ಸಾಧನೆಗೆ ಭಾರತದ 4ನೇ ಅತ್ಯುನ್ನತ ನಾಗರೀಕ ಪ್ರಶಸ್ತಿಗೆ ನಾಮನಿರ್ದೇಶನಂಗೊಂಡಿದ್ದು ಈ ಪ್ರಕ್ರಿಯೆಗಳು ಸೆಪ್ಟೆಂಬರ್ 15 ಕ್ಕೆ ನಾಮಿನೇಷನ್ ಪ್ರಕ್ರಿಯೆಗಳು ಮುಗಿಯಲಿದ್ದು ಈ ಸಂಧರ್ಭ ಅತ್ಯುನ್ನತ ಸಾಧನೆ ಮಾಡಿದ ಸಾಧಕ ಸಂಜಯ್ ದಯಾನಂದ ರವರ ಮಾರ್ಗದರ್ಶಕರಾದ ಮುಂಬೈನ ರಾಹುಲ್ ಶೆವಲ್ ರವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಪತ್ರ ಮುಖೇನ ಪ್ರಶಂಸೆ ವ್ಯಕ್ತಪಡಿಸಿದ್ದಾರೆ

ಸಂಜಯ್ ರವರ ಸಾಧನೆಗೆ ಪ್ರಧಾನಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದು ಇದೇ ತಿಂಗಳು 29ರಂದು ನಡೆಯುವ ಮನ್ ಕಿ ಭಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಜಿ ರವರು ಸಂಜಯರೊಂದಿಗೆ ಮಾತನಾಡಲಿದ್ದಾರೆ ಈ ಸಂಬಂಧ ಈಗಾಗಲೇ pmo ನ ಪ್ರಕ್ರಿಯೆಗಳು ಆರಂಭವಾಗಿದೆ

Related post

Leave a Reply

Your email address will not be published. Required fields are marked *

error: Content is protected !!