ಬೆಂಗಳೂರಲ್ಲಿ ಇನ್ನೂ ಹೆಚ್ಚಾಗುತ್ತೆ ಬಿಸಿಲು
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು,. ಬೆಂಗಳೂರಿನಲ್ಲಿ ಇನ್ನೂ ಒಂದು ವಾರ ಬಿಸಿಲು ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಇನ್ನೊಂದು ವಾರದವರೆಗೆ ದೀರ್ಘ ಒಣಹವೆ ಇರುತ್ತದೆ ಎಂದು IMD ಮುನ್ಸೂಚನೆ ನೀಡಿದೆ. ಏಪ್ರಿಲ್ 19ರವರೆಗೆ ಯಾವುದೇ ಮಳೆಯ ಮುನ್ಸೂಚನೆ ಇಲ್ಲ ಎಂದು ತಿಳಿಸಿದೆ. ಭಾನುವಾರ ಸ್ವಲ್ಪ ಮೋಡ ಕವಿದ ವಾತಾವರಣವಿರಬಹುದು. ಆದರೆ ಮಳೆಯಾಗುವ ಸಾಧ್ಯತೆಗಳಿಲ್ಲ. ಸೋಮವಾರದಿಂದ ನಗರದಲ್ಲಿ ಒಣಹವೆ ಮುಂದುವರಿಯಲಿದೆ. ಆದಾಗ್ಯೂ, IMD ಯ ವಿಜ್ಞಾನಿಗಳು ಏಪ್ರಿಲ್ 20 ರ ನಂತರ ಸ್ವಲ್ಪ ಮಳೆಯ ನಿರೀಕ್ಷೆಯಲ್ಲಿದ್ದಾರೆ.
ಈ ವರ್ಷ ನಗರದಲ್ಲಿ ಯಾವುದೇ ಮಳೆಯಾಗದಿದ್ದರೂ, ಕಳೆದ ಎರಡು ದಿನಗಳಿಂದ, ತಾಪಮಾನವು ಸುಮಾರು ಮೂರು ಡಿಗ್ರಿ ಸೆಲ್ಸಿಯಸ್‍ನಷ್ಟು ಕಡಿಮೆಯಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಏಪ್ರಿಲ್ 13 ರಂದು, ನಗರದಲ್ಲಿ 34.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಸುಮಾರು ಮೂರು ಡಿಗ್ರಿಗಳಷ್ಟು ಕುಸಿತವಾಗಿದೆ. ಆದಾಗ್ಯೂ, ಗರಿಷ್ಠ ತಾಪಮಾನವು 34 ಡಿಗ್ರಿ ಸೆಲ್ಸಿಯಸ್‍ಗಿಂತ ಹೆಚ್ಚಿದೆ, ಇದು ಏಪ್ರಿಲ್‍ನಲ್ಲಿ ಬೆಂಗಳೂರಿನ ಸಾಮಾನ್ಯ ಸರಾಸರಿ ತಾಪಮಾನವಾಗಿದೆ.
ಏಪ್ರಿಲ್‍ನಲ್ಲಿ ಬೆಂಗಳೂರಲ್ಲಿ ಒಮ್ಮೆ ಮಳೆ ನರಬಹುದು. ಆದರೆ ಎರಡು ಅಥವಾ ಮೂರು ಬಾರಿ ಮಳೆಯಾಗುವ ಸಾಧ್ಯತೆ ತೀರಾ ಕಡಿಮೆ ಎಂದು ಬೆಂಗಳೂರಿನ ಐಎಂಡಿ ಹಿರಿಯ ವಿಜ್ಞಾನಿ ಎ ಪ್ರಸಾದ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮಾರ್ಚ್‍ನಲ್ಲಿ 14.7 ಮಿಮೀ ಮತ್ತು ಏಪ್ರಿಲ್‍ನಲ್ಲಿ 61.7 ಮಿಮೀ ಮಳೆಯಾಗುತ್ತದೆ. ಈ ವರ್ಷ ಮಾರ್ಚ್ ಸಂಪೂರ್ಣವಾಗಿ ಶುಷ್ಕವಾಗಿತ್ತು. ಮತ್ತು ಏಪ್ರಿಲ್‍ನಲ್ಲಿ, ಬೆಂಗಳೂರು ಕೇವಲ 10 ಮಿಮೀ ಅಥವಾ 20 ಮಿಮೀ ಮಳೆಯನ್ನು ದಾಖಲಿಸಬಹುದು. ಇದು ಸರಾಸರಿ ಮಳೆಗಿಂತ ಕಡಿಮೆಯಾಗಿದೆ.