ಕುಡುಪು: ನ.19 ರಂದು ಶ್ರೀ ಹರಿಲೀಲಾ ಯಕ್ಷನಾದ 3 ನೇ ವರ್ಷದ ಪ್ರಶಸ್ತಿ ಪ್ರದಾನ
ಕುಡುಪು: ಶ್ರೀ ಹರಿಲೀಲಾ ಯಕ್ಷನಾದ 3 ನೇ ವರ್ಷದ ಪ್ರಶಸ್ತಿ ಪ್ರದಾನ ಯಕ್ಷನಾದ ಪ್ರಶಸ್ತಿ| ಯಕ್ಷನಾದೋತ್ಸವ ತಾಳಮದ್ದಲೆ| ಪರಂಪರೆಯ ಯಕ್ಷಗಾನವು ನವೆಂಬರ್ 19 ರಂದು ಮದ್ಯಾಹ್ನ 2 ರಿಂದ ಶ್ರೀ ಅನಂತಪದ್ಮನಾಭ ದೇವಸ್ಥಾನ ಕುಡುಪುವಿನಲ್ಲಿ ಜರುಗಲಿದೆ.
ಕಾರ್ಯಕ್ರಮದಲ್ಲಿ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷರು ಪ್ರೊ.ಎಂ.ಎಲ್ ಸಾಮಗ ಯಕ್ಷಗಾನ ಕಲಾವಿದರು ಅಧ್ಯಕ್ಷತೆಯನ್ನು ವಹಿಸಲಿದ್ದು, ಶ್ರೀ ಕುಡುಪು ನರಸಿಂಹ ತಂತ್ರಿಗಳಾದ ವೇದಮೂರ್ತಿ ಶುಭಾಶೀರ್ವಚನ ಗೈಯಲಿದ್ದು, ಅಭ್ಯಾಗತರಾಗಿ ಹರಿಕೃಷ್ಣ ಪುನರೂರು, ಪಳ್ಳಿ ಕಿಶನ್ ಹೆಗ್ಡೆ, ಮುರಳಿ ಕಡೆಕಾರ್ , ಹರಿಲೀಲಾ ಯಕ್ಷನಾದ ಪ್ರಶಸ್ತಿ 2023 ಪುರಸ್ಕೃತ ರು, ಮಿಜಾರು ಮೋಹನ ಶೆಟ್ಟಿಗಾರ್ ಭಾಗಿಯಾಗಲಿದ್ದು, ಅಭಿನಂದನ ನುಡಿಯನ್ನು ಚಂದ್ರಶೇಖರ ಕೊಂಕಣಾಜೆ ಭಾಗಿಯಾಗಲಿದ್ದಾರೆ.