• September 8, 2024

Tags :sports

ಕ್ರೀಡೆ ಜಿಲ್ಲೆ ಸ್ಥಳೀಯ

ಮೈರೋಳ್ತಡ್ಕ: ಶಿವಫ್ರೆಂಡ್ಸ್ ಕ್ರೀಡಾಂಗಣ ಖಂಡಿಗದಲ್ಲಿ ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

ಬಂದಾರು: ಬಂದಾರು ಗ್ರಾಮದ ಶಿವ ಫ್ರೆಂಡ್ಸ್ ಕುರಾಯ- ಖಂಡಿಗ ಇವರ ಆಶ್ರಯದಲ್ಲಿ ತಾಲೂಕು ವಾಲಿಬಾಲ್ ಅಸೋಶಿಯೇಶನ್ ಬೆಳ್ತಂಗಡಿ ಇದರ ಸಹಯೋಗದೊಂದಿಗೆ ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟವು ಜ.7 ರಂದು ಶಿವಫ್ರೆಂಡ್ಸ್ ಕ್ರೀಡಾಂಗಣ ಖಂಡಿಗ ಮೈರೋಳ್ತಡ್ಕ ದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಮುಂಡೂರು ಧರ್ಮದರ್ಶಿ ಆನಂದ ಗೌಡ ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು ಸುಂದರ ಗೌಡ ಖಂಡಿಗ ವಹಿಸಿದ್ದರು. ಕ್ರೀಡಾಂಗಣದ ಉದ್ಘಾಟನೆಯನ್ನು ಪದ್ಮುಂಜ ಸಿಎ ಬ್ಯಾಂಕ್ ನ ಮ್ಯಾನೇಜರ್ ರಘುಪತಿ ಭಟ್ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ […]Read More

ಕಾರ್ಯಕ್ರಮ ಕ್ರೀಡೆ ಶಾಲಾ ಚಟುವಟಿಕೆ ಸ್ಥಳೀಯ

14ರ ವಯೋಮಾನದ ಬಾಲಕಿಯರ ವಿಭಾಗಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಬಂದಾರು ಶಾಲೆ ರಾಜ್ಯಮಟ್ಟಕ್ಕೆ ಆಯ್ಕೆ

ಬಂದಾರು : ಅ 8 ,9ರಂದು ಚಿಕ್ಕಮಗಳೂರಿನ ಕಡೂರಿನಲ್ಲಿ ನಡೆದ 14 ನೇ ವಯೋಮಾನದ ಬಾಲಕಿಯರ ವಿಭಾಗಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಬಂದಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಸತತವಾಗಿ 10ನೇ ಬಾರಿಗೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಪೈನಲ್ ಪಂದ್ಯದಲ್ಲಿ ಬಲಿಷ್ಠ ಮಂಡ್ಯ ತಂಡವನ್ನು 25-12 25-10 ನೇರಾ ಸೆಟ್‌ಗಳಲ್ಲಿ‌ ಮಣಿಸಿ ರಾಜ್ಯ ಮಟ್ಟಕ್ಕೆ ಅಯ್ಕೆಯಾಗಿರುತ್ತಾರೆ.ವಿಜೇತ ತಂಡಕ್ಕೆ ಅಭಿನಂದನೆಗಳು.Read More

ಕಾರ್ಯಕ್ರಮ ಕ್ರೀಡೆ

ವಾಣಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ ಯ ಬಾಲಕರ ತ್ರೋಬಾಲ್ ತಂಡ ಜಿಲ್ಲಾ

ಬೆಳ್ತಂಗಡಿ: ಸೆ 10 ರಂದು ಸೇಕ್ರೆಡ್ ಹಾರ್ಟ್ ಪದವಿಪೂರ್ವ ಕಾಲೇಜು ಮಡಂತ್ಯಾರು ಇದರ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಬಾಲಕ-ಬಾಲಕಿಯರ ತ್ರೋಬಾಲ್ ಪಂದ್ಯಾಟದಲ್ಲಿ ವಾಣಿ ಪದವಿ ಪೂರ್ವ ಕಾಲೇಜಿನ ಬಾಲಕರ ತಂಡವು ಆತಿಥೇಯ ಸೇಕ್ರೆಟ್ ಹಾರ್ಟ್ ಪದವಿಪೂರ್ವ ಕಾಲೇಜು ಮಡಂತ್ಯಾರು ತಂಡವನ್ನು ಪರಾಭವಗೊಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತದೆ. ವಿಜೇತ ತಂಡಕ್ಕೆ ಮತ್ತು ತರಬೇತಿ ಗೊಳಿಸಿದ ಕ್ರೀಡಾ ಸಂಯೋಜಕ ನಂದಕುಮಾರ್ ಇವರನ್ನು ವಾಣಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಿ ಯದುಪತಿ ಗೌಡ ಅಭಿನಂದಿಸಿದರು.Read More

ಕ್ರೀಡೆ

ಧರ್ಮನಗರ ಸಿದ್ದಿವಿನಾಯಕ ಯುವಕ ಮಂಡಲ ವತಿಯಿಂದ ಕೆಸರ್ಡೊಂಜಿ ದಿನ

ಕಂಬಳಬೆಟ್ಟು: ಸಿದ್ದಿವಿನಾಯಕ ಯುವಕ ಮಂಡಲ ಧರ್ಮನಗರ- ಕಂಬಳಬೆಟ್ಟು ಇವರ ವತಿಯಿಂದ ಮೂರೂ ಗ್ರಾಮಗಳನ್ನೊಳಗೊಂಡ ಹಿಂದೂ ಬಾಂಧವರ ತುಳುನಾಡ ಜಾನಪದ ಕ್ರೀಡೆ ಮತ್ತು ಆಚರಣೆಗಳನ್ನು ನೆನಪಿಸುವ ಸಲುವಾಗಿ ಮತ್ತು ಯುವಜನತೆಯ ಮನಸ್ಸುಗಳನ್ನು ದೇಶ ಭಾಷೆಗಳೊಂದಿಗೆ ಒಗ್ಗೂಡಿಸುವ ಸಲುವಾಗಿ ಕೆಸರ್ಡೊಂಜಿ ದಿನ ಕಾರ್ಯಕ್ರಮವು ಜು.24 ರಂದು ಕಾರ್ಯಾಡಿ ಬೈಲಿನಲ್ಲಿ ಜರುಗಿತು. ಧರ್ಮನಗರದಿಂದ ಕಾರ್ಯಾಡಿ ಬೈಲಿಗೆ ಬೈಕ್ ರ್ಯಾಲಿ ಮೂಲಕ ಬರಲಾಯಿತು. ಕಾರ್ಯಕ್ರಮವನ್ನು ಪುತ್ತೂರು ಚಾರಿಟೇಬಲ್ ಟ್ರಸ್ಟ್ ಮತ್ತು ರೈ ಎಜುಕೇಶನ್ ಸಂಚಾಲಕರು ಅಶೋಕ್ ಕುಮಾರ್ ರೈ ಕೋಡಿಂಬಾಡಿ ಉದ್ಘಾಟಿಸಿ, ಆಟಿ […]Read More

ಕ್ರೀಡೆ ದೇಶ ರಾಜ್ಯ

ಸ್ಪೆಷಲ್ ಒಲಂಪಿಕ್ ಭಾರತ್ ಪವರ್ ಲಿಫ್ಟಿಂಗ್ ಕ್ರೀಡಾ ಕೂಟದಲ್ಲಿ ಭಾಗವಹಿಸಲಿರುವಸ್ಪೂರ್ತಿ ವಿಶೇಷ ಶಾಲೆಯ

ಸ್ಪೆಷಲ್ ಒಲಂಪಿಕ್ ಭಾರತ್ ಪವರ್ ಲಿಫ್ಟಿಂಗ್ ಕ್ರೀಡಾ ಕೂಟದಲ್ಲಿ ಕರ್ನಾಟಕದಿಂದ ರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ಸ್ಪೂರ್ತಿ ವಿಶೇಷ ಶಾಲೆಯ ವಿದ್ಯಾರ್ಥಿನಿ ರಫಿಯಾ ಹಾಗೂ ಶಿಕ್ಷಕಿ ಸುಚಿತ್ರ ಕೋಚ್ ಆಗಿ ಬೆಂಗಳೂರಿನಿಂದ ಗುಜರಾತ್ ಗೆ ಇಂದು ತೆರಳಿದ್ದಾರೆ.Read More

error: Content is protected !!