ವಾಣಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ ಯ ಬಾಲಕರ ತ್ರೋಬಾಲ್ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ.


ಬೆಳ್ತಂಗಡಿ: ಸೆ 10 ರಂದು ಸೇಕ್ರೆಡ್ ಹಾರ್ಟ್ ಪದವಿಪೂರ್ವ ಕಾಲೇಜು ಮಡಂತ್ಯಾರು ಇದರ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಬಾಲಕ-ಬಾಲಕಿಯರ ತ್ರೋಬಾಲ್ ಪಂದ್ಯಾಟದಲ್ಲಿ ವಾಣಿ ಪದವಿ ಪೂರ್ವ ಕಾಲೇಜಿನ ಬಾಲಕರ ತಂಡವು ಆತಿಥೇಯ ಸೇಕ್ರೆಟ್ ಹಾರ್ಟ್ ಪದವಿಪೂರ್ವ ಕಾಲೇಜು ಮಡಂತ್ಯಾರು ತಂಡವನ್ನು ಪರಾಭವಗೊಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತದೆ.

ವಿಜೇತ ತಂಡಕ್ಕೆ ಮತ್ತು ತರಬೇತಿ ಗೊಳಿಸಿದ ಕ್ರೀಡಾ ಸಂಯೋಜಕ ನಂದಕುಮಾರ್ ಇವರನ್ನು ವಾಣಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಿ ಯದುಪತಿ ಗೌಡ ಅಭಿನಂದಿಸಿದರು.