ಕುದ್ಯಾಡಿ: ಚಿರತೆ ದಾಳಿಗೆ ದನವೊಂದು ಬಲಿಯಾದ ಘಟನೆ ಕುದ್ಯಾಡಿ ಗ್ರಾಮದಲ್ಲಿ ನಡೆದಿದೆ. ಕುದ್ಯಾಡಿ ಗ್ರಾಮದ ಕೆಳಗಿನಬೆಟ್ಟು ಮನೆಯ ಶೀನ ಪೂಜಾರಿಯವರು ತಮ್ಮ ದನವನ್ನು ಇಂದು ಬೆಳಿಗ್ಗೆ ತೋಟದಲ್ಲಿ ಮೇಯಲು ಬಿಟ್ಟಿದ್ದರು. ಸುಮಾರು 11 ಗಂಟೆ ಸಮಯಕ್ಕೆ ಚಿರತೆ ದನದ ಮೇಲೆ ದಾಳಿ ಮಾಡಿದೆ.ಮನೆಯವರು ತೋಟಕ್ಕೆ ಬಂದಾಗ ಚಿರತೆ ಮನೆಯವರನ್ನು ಅಟ್ಟಾಡಿಸಿದೆ. ಚಿರತೆಯ ದಾಳಿಗೆ ದನ ಬಲಿಯಾಗಿದೆ. ಕೂಡಲೇ ಶೀನ ಪೂಜಾರಿಯವರು ಸ್ಥಳೀಯ ಪಂಚಾಯತ್ ಸದಸ್ಯ ಶುಭಕರ್ ಅವರಿಗೆ ಕಾಲ್ ಮಾಡಿ ತಿಳಿಸಿದ್ದು, ಅವರು ಇಲಾಖೆಗೆ ಮಾಹಿತಿ […]Read More
Tags :Cow
ಪುಂಜಾಲಕಟ್ಟೆ: ಹಸುವಿನ ಗರ್ಭಕೋಶದ ಒಳಗೆ ಸತ್ತ ಕರುವನ್ನು ಹಸುವಿನ ಜೀವಕ್ಕೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಮಡಂತ್ಯಾರ್ ಸರಕಾರಿ ಪಶು ವೈದ್ಯ ಡಾ.ವಿನಯ ಕುಮಾರ್ ರವರು ಶಸ್ತ್ರ ಚಿಕಿತ್ಸೆ ಮಾಡದೆ ಯಶಸ್ವಿಯಾಗಿ ಹೊರತೆಗೆದು ಹಸುವಿನ ಪ್ರಾಣ ಉಳಿಸಿದ ಘಟನೆ ಅ.7 ರಂದು ನಡೆದಿದೆ. ತುಂಬು ಗಬ್ಬದಲ್ಲಿದ್ದ ದನ ಅನಾರೋಗ್ಯದಿಂದ ಬಳಲುತ್ತಿತ್ತು. ವಿಷಯ ತಿಳಿದ ಮಡಂತ್ಯಾರು ಪಶು ಚಿಕಿತ್ಸಾಲಯ ಪಶು ವೈದ್ಯ ಡಾ| ವಿನಯ ಕುಮಾರ್‌ರವರು ಮನೆಗೆ ಆಗಮಿಸಿ ದನವನ್ನು ಪರಿಶೀಲಿಸಿದಾಗ ಗಬ್ಬದಲ್ಲಿರುವ ಕರು ಸ್ಕಿಸ್ಟೊಸೋಮಸ್ ರಿಫ್ಲೆಕ್ಸಸ್ ಎಂಬ […]Read More
ಮೇಲಂತಬೆಟ್ಟು: ಪಿಕಪ್ ವಾಹನವೊಂದರಲ್ಲಿ ಯಾವುದೇ ಪರವಾನಿಗೆಯಿಲ್ಲದೆ ಹಿಂಸಾತ್ಮಕವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಘಟನೆ ಸೆ.29 ರಂದು ನಡೆದಿದೆ. ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಮಂಜಲಪಲ್ಕೆ ಹಟತ್ತೋಡಿ ನಿವಾಸಿ ಸುಂದರ ಮೂಲ್ಯ ಎಂಬಾತ ಪಿಕಪ್ ನಲ್ಲಿ ಹಿಂಸಾತ್ಮಕವಾಗಿ ಗೊವುಗಳನ್ನು ತುಂಬಿಸಿಕೊಂಡು ಸವಣಾಲು ಗ್ರಾಮದಿಂದ ಮೇಲಂತಬೆಟ್ಟು ಕ್ರಾಸ್ ಬಳಿ ಬರುತ್ತಿದ್ದ ವೇಳೆ ಬೆಳ್ತಂಗಡಿ ಪೊಲೀಸರು ವಾಹನವನ್ನು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದ ವೇಳೆ ಅಕ್ರಮ ಗೋಸಾಗಾಟ ಮಾಡಿರುವುದು ಗಮನಕ್ಕೆ ಬಂದಿದೆ. ತಕ್ಷಣ ಆರೋಪಿಯನ್ನು ಹಾಗೂ ಪಿಕಪ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.Read More
ಬಾಳೆಹೊನ್ನೂರು: ಅಕ್ರಮ ಕಸಾಯಿ ಕಾಣೆ ನಡೆಸಿದ್ದಲ್ಲದೆ ಕದ್ದು ತಂದ ಗಬ್ಬದ ಗೋವನ್ನ ಕಡಿದು ಇನ್ನೂ ಭೂಮಿಗೆ ಬಾರದ ಅದರ ಕರುವನ್ನ ಕಾಡಿನಲ್ಲಿ ಎಸೆದ ಹಿಂಸಾತ್ಮಕ ಕೃತ್ಯವೊಂದು ಮಲೆನಾಡಿನಲ್ಲಿ ಬೆಳಕಿಗೆ ಬಂದಿದ್ದು ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ವ್ಯಾಪ್ತಿಯ ಹಳೆ ಕಡಬಗೆರೆ ನಿವಾಸಿ ರವೀಂದ್ರ ಎಂಬವರಿಗೆ ಸೇರಿದ ಗಬ್ಬದ ದನ ಇದಾಗಿದ್ದು ಕಳೆದ ರಾತ್ರಿ ಗೋ ಕಳ್ಳರ ಪಾಲಾಗಿತ್ತು ಬಳಿಕ ಹಂತಕರು ಎಲೆಕಲಿ ಎಂಬಲ್ಲಿ ಹಸುವಿನ ತಲೆ ಕಡಿದು ಮಾಂಸ ಮಾಡಿದ್ದಲ್ಲದೆ […]Read More
ಕಡಿರುದ್ಯಾವರ: ನಿರಂತರ ಸುರಿದ ಧಾರಾಕಾರ ಮಳೆಯಿಂದಾಗಿ ಕಡಿರುದ್ಯಾವರ ಗ್ರಾಮದ ಕೊಪ್ಪದ ಗಂಡಿ ನೇತ್ರಾವತಿ ನದಿಯಲ್ಲಿ ದನ ಒಂದು ತೇಲಿ ಬಂದಿರುವ ಘಟನೆ ಇಂದು ಮುಂಜಾನೆ ವೇಳೆ ಬೆಳಕಿಗೆ ಬಂದಿದೆ. ನಿರಂತರ ಸುರಿಯುತ್ತಿರುವ ಮಳೆಗೆ ನೇತ್ರಾವತಿ ನದಿಯು ತುಂಬಿ ಹರಿಯುತ್ತಿದ್ದು, ರಭಸವಾಗಿ ಹರಿಯುತ್ತಿರುವ ನೀರಿನಲ್ಲಿ ದನವೊಂದು ತೇಲಿ ಬಂದು ಸೇತುವೆಯ ದಡದಲ್ಲಿ ಸಿಲುಕಿಕೊಂಡು ಮೃತಪಟ್ಟಿರುವ ಘಟನೆ ನಡೆದಿದೆ. ಇಂದು ಮುಂಜಾನೆ ಸ್ಥಳೀಯರಿಗೆ ಕಂಡುಬಂದಿದ್ದು ವಾರಸುದಾರ ಯಾರೆಂದು ತಿಳಿದು ಬಂದಿಲ್ಲ.Read More