• December 26, 2024

Tags :belthangady

ಕ್ರೈಂ ಸ್ಥಳೀಯ

ಬೆಳ್ತಂಗಡಿ: ಸುದೆಮುಗೇರು ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಜೂಜಾಟ ಆಡುತ್ತಿದ್ದ 7 ಆರೋಪಿಗಳ

  ಬೆಳ್ತಂಗಡಿ: ಬೆಳ್ತಂಗಡಿ ಕಸಬಾ ಗ್ರಾಮದ ಸುದೆಮುಗೇರು ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಜೂಜಾಟ ಆಡುತ್ತಿದ್ದ ಬಗ್ಗೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಹಣವನ್ನು ವಶಕ್ಕೆ ಪಡೆದು ಜೂಜಾಟದಲ್ಲಿ ತೊಡಗಿದ್ದ 7 ಮಂದಿಯನ್ನು ಬಂಧಿಸಿರುವ ಘಟನೆ ಜೂನ್ 16 ರಂದು ನಡೆದಿದೆ. ಇಸ್ಪಿಟು ಎಲೆಗಳು, ನಗದು ಹಾಗೂ ಇತರ ಸೊತ್ತುಗಳು ಪತ್ತೆಯಾಗಿದ್ದು ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆRead More

ಶಾಲಾ ಚಟುವಟಿಕೆ ಶುಭಾರಂಭ ಸ್ಥಳೀಯ

ಬೆಳ್ತಂಗಡಿ ವಾಣಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರತೀ ದಿನ ಶನಿವಾರ ವಯಲಿನ್ ತರಬೇತಿ

  ಬೆಳ್ತಂಗಡಿ: ಪಾಠ- ಆಟಗಳೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ಜೊತೆಯಾಗಬೇಕು.‌ ಪಠ್ಯೇತರ ಚಟುವಟಿಕೆಗಳಿಗೂ ಮಕ್ಕಳು ಹೆಚ್ಚಿನ ಒತ್ತು ನೀಡುವ ದೃಷ್ಟಿಯಿಂದ ಬೆಳ್ತಂಗಡಿ ವಾಣಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಯಲಿನ್ ತರಗತಿಯೂ ಜೂ.16 ರಂದು ಶುಭಾರಂಭಗೊಳಿಸಲಾಯಿತು. ವಾಣಿ ಪ.ಪೂ ಕಾಲೇಜಿನ ಉಪಪ್ರಾಂಶುಪಾಲರಾದ ವಿಷ್ಣುಪ್ರಕಾಶ್ ಅವರು ದೀಪ ಬೆಳಗಿಸಿ ತರಗತಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಪೋಷಕರು, ಮೊದಲಾದವರು ಭಾಗಿಯಾಗಿದ್ದರು. ಇನ್ನು ಪ್ರತೀ ಶನಿವಾರ ಅಪರಾಹ್ನ ಶ್ರೀಪ್ರಿಯಾ ಪರಕ್ಕಜೆಯವರು ತರಬೇತಿ ನೀಡಲಿದ್ದಾರೆRead More

ಕ್ರೈಂ ನಿಧನ ಸ್ಥಳೀಯ

ಬೆಳ್ತಂಗಡಿ ಹಳೆಕೋಟೆ ಬಳಿ ಲಾರಿ- ಬೈಕ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೆ ಸಾವು

  ಬೆಳ್ತಂಗಡಿ: ಹಳೆಕೋಟೆ ಪೆಟ್ರೋಲ್ ಪಂಪ್ ಹತ್ತಿರ ಲಾರಿಯೊಂದು ಬೈಕ್ ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ನಡೆದಿದೆ. ಮೃತ ವ್ಯಕ್ತಿ ಬಳ್ಳಮಂಜ ನಿವಾಸಿ ಜಿ ವಿನೋದ್ ಎಂದು ಗುರುತಿಸಲಾಗಿದೆ. ರಸ್ತೆ ಕಾಮಗಾರಿಯ ಅವ್ಯವಸ್ಥೆಯಿಂದ ಇಂತಹ ಘಟನೆಗಳು ನಡೆಯುತ್ತಿರುವುದಾಗಿ ಸಾರ್ವಜನಿಕರ ಆಕ್ರೋಶ.Read More

ಜಿಲ್ಲೆ ಸಮಸ್ಯೆ ಸ್ಥಳೀಯ

ಬೆಳ್ತಂಗಡಿ : ಸಿಎಂ , ಡಿಸಿಎಂ ಗೆ ಶುಭಕೋರುವ ಫ್ಲೆಕ್ಸ್ ತೆರವುಗೊಳಿಸಿದ ಬೆಳ್ತಂಗಡಿ

  ಬೆಳ್ತಂಗಡಿ: ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಬೆಳ್ತಂಗಡಿ ಗೆ ಆಗಮಿಸುತ್ತಿದ್ದು ಅವರನ್ನು ಸ್ವಾಗತ ಕೋರಿ ಬೆಳ್ತಂಗಡಿ ಮೂರು ಮಾರ್ಗದ ಬಳಿ ಹಾಕಲಾಗಿದ್ದ ಫ್ಲೆಕ್ಸ್ ತೆರವುಗೊಳಿಸಲಾಗಿದೆ. ಪಟ್ಟಣ ಪಂಚಾಯತ್ ಸಿಬ್ಬಂಧಿಗಳು ಅಕ್ರಮವಾಗಿ ಫ್ಲೆಕ್ಸ್ ಅಳವಡಿಸಲಾಗಿದೆ ಎಂದು ತೆರವುಗೊಳಿಸಲಾಗಿದೆ ಎನ್ನಲಾಗಿದೆRead More

ನಿಧನ

ಬೆಳ್ತಂಗಡಿ ಸಮುದಾಯ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿದ್ದ ಡಾ. ಆದಂ ನಿಧನ

  ಬೆಳ್ತಂಗಡಿ; ಇಲ್ಲಿನ ಸರಕಾರಿ ಸಮುದಾಯ ಆಸ್ಪತ್ರೆಯಲ್ಲಿ ಪ್ರಸೂತಿ ಮತ್ತು ಸ್ರ್ತೀ ರೋಗ ತಜ್ಞರಾಗಿದ್ದ ಡಾ. ಆದಂ ಅವರು ಅಲ್ಪ ಕಾಲದ ಅಸೌಖ್ಯದಿಂದ ಏ.20 ರಂದು ಕೆ.ಸಿ ರೋಡಿನ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದೀರ್ಘ ವರ್ಷಗಳಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿ, ಆಡಳಿತಾಧಿಕಾರಿಯಾಗಿ ಅವರು ಕರ್ತವ್ಯ ಸಲ್ಲಿಸಿದ್ದು ಕಳೆದ 4 ವರ್ಷಗಳ ಹಿಂದೆ ನಿವೃತ್ತರಾಗಿದ್ದರು. ನಿವೃತ್ತಿಯ ಬಳಿಕ ಅವರು ತಮ್ಮ ಊರಾದ ಕೆ.ಸಿ‌ ರೋಡಿನಲ್ಲಿ ಖಾಸಗಿ ಕ್ಲಿನಿಕ್ ತೆರೆದು ವೈದ್ಯಕೀಯ ಸೇವೆ ಮುಂದುವರಿಸಿಕೊಂಡು ಹೋಗಿದ್ದರು.ಅವರಿಗೆ ಒಂದು ತಿಂಗಳ […]Read More

ರಾಜಕೀಯ ಸ್ಥಳೀಯ

ಗೃಹಲಕ್ಷ್ಮಿ ಯೊಜನೆಯ ಬಗ್ಗೆ ಕುಮಾರಸ್ವಾಮಿಯವರ ವಿವಾದಾದ್ಮಕ ಹೇಳಿಕೆಗೆ ಮಹಿಳಾ ಕಾಂಗ್ರೆಸ್ ಬೆಳ್ತಂಗಡಿ ನಗರ

  ಬೆಳ್ತಂಗಡಿ: ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಯವರ ವಿವಾದಾತ್ಮಕ ಹೇಳಿಕೆ ಬಗ್ಗೆ, ಇಂದು ಬ್ಲಾಕ್ ಕಾಂಗ್ರೆಸ್ ಕಚೇರಿ ಸಂತೆಕಟ್ಟೆಯಲ್ಲಿ ಮಹಿಳಾ ಕಾಂಗ್ರೆಸ್ ಬೆಳ್ತಂಗಡಿ ನಗರ ಹಾಗೂ ಗ್ರಾಮೀಣ ವತಿಯಿಂದ ಸುದ್ದಿಗೋಷ್ಠಿ ನಡೆಯಿತು. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ಹಳ್ಳಿ ಹೆಣ್ಣುಮಕ್ಕಳು ದಾರಿ ತಪ್ಪಿದ್ದಾರೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ಕುಮಾರಸ್ವಾಮಿ ಯವರು ನೀಡಿದ್ದು, ಇದನ್ನು ಮಹಿಳಾ ಕಾಂಗ್ರೆಸ್ ಬಲವಾಗಿ ಖಂಡಿಸುತ್ತದೆ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಾಡಿನ ಸಮಸ್ತ ಮಹಿಳೆಯರಲ್ಲಿ ಕ್ಷಮೆಯನ್ನು ಕೇಳಬೇಕು ಎಂದು ಆಕ್ರೋಶ […]Read More

ನಿಧನ

ಅಪಘಾತದಲ್ಲಿ ಮೃತರಾದ ಪ್ರೈಸ್ ಮ್ಯಾಥ್ಯೂ ಅವರಿಗೆ ಅಂತಿಮ ನಮನ: ಅಂತ್ಯಸಂಸ್ಕಾರಕ್ಕಾಗಿ ಕೇರಳದ ಇರಟ್ಟಿಗೆ

  ಬೆಳ್ತಂಗಡಿ: ಮಾ.29 ರಂದು ಶುಕ್ರವಾರ ಗುರುವಾಯನಕೆರೆ ಶಕ್ತಿ ನಗರದಲ್ಲಿ ಕಾರು ಅಪಘಾತದಲ್ಲಿ ಮೃತಪಟ್ಟ ಪ್ರೈಸ್ ಮ್ಯಾಥ್ಯೂ ಅವರ ಅಂತಿಮ ದರ್ಶನ ಬೆಳ್ತಂಗಡಿ ಕೆಥಡ್ರಲ್ ಮಹಾ ದೇವಾಲಯದಲ್ಲಿ ನಡೆಯಿತು. ಈ ವೇಳೆ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ ಅವರ ನೇತೃತ್ವದಲ್ಲಿ ಧರ್ಮಗುರುಗಳ ಬಳಗ ಅಂತಿಮ ಪ್ರಾರ್ಥನಾ ವಿಧಿ ನಡೆಸಿಕೊಟ್ಟರು. ಬೆಳ್ತಂಗಡಿ ಸದರ್ನ್ ರಬ್ಬರ್ಸ್ ಇದರ ಮಾಲಕ ವಿ.ವಿ.ಮ್ಯಾಥ್ಯೂ ಅವರ ಪುತ್ರರಾಗಿರುವ ಪ್ರೈಸ್ ಮ್ಯಾಥ್ಯೂ ಅವರು ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಆಕಸ್ಮಿಕವಾಗಿ ಕಾರು ನಿಯಂತ್ರಣ ಕಳೆದುಕೊಂಡು ಧರೆಗೆ […]Read More

ಕಾರ್ಯಕ್ರಮ

ಬೆಳ್ತಂಗಡಿ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ

  ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ- ಬೆಂಗಳೂರು ಇದರ ಬೆಳ್ತಂಗಡಿ ತಾಲೂಕು ಶಾಖೆಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಬೆಳ್ತಂಗಡಿ ಮಾರಿಗುಡಿ ಬಳಿಯ ಏಕತಾ ಸೌದದಲ್ಲಿ ಜರುಗಿತು. ಸಂಘದ 2023 ನೇ ಸಾಲಿನ ಸಾಧಕರ ಸನ್ಮಾನ ಹಾಗೂ ಸಂಘದ ನಿಕಟ ಪೂರ್ವ ಅಧ್ಯಕ್ಷ ಡಾ. ಜಯಕೀರ್ತಿ ಜೈನ್ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಕೆ.ಎಸ್ ಚಂದ್ರಶೇಖರ ನೆರವೇರಿಸಿದರು. ಅಧ್ಯಕ್ಷತೆಯನ್ನು ತಾಲೂಕು ಸಂಘದ ಅಧ್ಯಕ್ಷ ಜಯರಾಜ್ ಜೈನ್ ವಹಿಸಿದ್ದರು. ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಾ ಕೇಸರಿ, […]Read More

ಜಿಲ್ಲೆ ಸಮಸ್ಯೆ ಸ್ಥಳೀಯ

ರಸ್ತೆ ಅಪಘಾತ: ಬಡ ಕುಟುಂಬಕ್ಕೆ‌ಆಧಾರ ಸ್ಥಂಭವಾಗಿದ್ದ ಯುವಕ‌ನ ಶಸ್ತ್ರಚಿಕಿತ್ಸೆಗೆ ಬೇಕಾಗಿದೆ ಸಹಾಯ ಹಸ್ತ

  ನ್ಯಾಯತರ್ಪು: ಬೆಳ್ತಂಗಡಿ ತಾಲೂಕಿನ ನ್ಯಾಯತರ್ಪು ಗ್ರಾಮದ ನಿವಾಸಿ ದಿನೇಶ್ ನಾಯಕ್ ಎಂಬವರು ಮೂರು ತಿಂಗಳಿನ ಹಿಂದೆ ರಸ್ತೆ ಅಪಘಾತವಾಗಿದ್ದು ಇವರಿಗೆ ಎರಡು ಬಾರಿ ಶಸ್ರ್ತಚಿಕಿತ್ಸೆಯಾಗಿದೆ. ಅಂದಾಜು 1.8 ಲಕ್ಷ ಖರ್ಚಾಗಿದ್ದು ಇನ್ನು ಮುಂದಿನ ಚಿಕಿತ್ಸೆಗಾಗಿ ಕೆಎಂಸಿ ಆಸ್ಪತ್ರೆಯಲ್ಲಿ ಒಂದು ತಿಂಗಳ ಕಾಲ ಚಿಕಿತ್ಸೆ ಮುಂದುವರೆಸಲು ತಿಳಿಸಿದ್ದು, ಮುಂದಿನ ಚಿಕಿತ್ಸೆಗೆ ಅಂದಾಜು 1.5 ಲಕ್ಷ ಖರ್ಚಾಗಬಹುದೆಂದು ತಿಳಿಸಲಾಗಿದೆ. ಬಡಕುಟುಂಬದವರಾಗಿದ್ದು ತನ್ನ ಮನೆಯ ಆಧಾರ ಸ್ತಂಭವಾಗಿದ್ದಾರೆ.ಇನ್ನು ಇವರಿಗೆ ಒಂದು ವರ್ಷ ಕೆಲಸ ಮಾಡಲು ಸಾಧ್ಯವಾಗದೇ ಇರುವುದರಿಂದ ಸಹಾಯದ ಹಸ್ತವನ್ನು […]Read More

ಆಯ್ಕೆ

ಬೆಳ್ತಂಗಡಿ: ಜಿಲ್ಲಾಧ್ಯಕ್ಷ ಸತೀಶ್ ಕುಂಪಲರವರ ನೇತೃತ್ವದಲ್ಲಿ, ಬಿಜೆಪಿ ದ.ಕ ಜಿಲ್ಲಾ ಸಮಿತಿಯ ವಿವಿಧ

  ಬೆಳ್ತಂಗಡಿ: ಜಿಲ್ಲಾಧ್ಯಕ್ಷ ಸತೀಶ್ ಕುಂಪಲರವರ ನೇತೃತ್ವದಲ್ಲಿ ಬಿಜೆಪಿ ದ.ಕ ಜಿಲ್ಲಾ ಸಮಿತಿಯ ವಿವಿಧ ಮೋರ್ಚಾಗಳಿಗೆ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಶಶಿಧರ ಕಲ್ಮಂಜ ಆಯ್ಕೆಯಾಗಿದ್ದಾರೆ. ಇನ್ನುಳಿದ ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಸಿ.ಕೆ ಚಂದ್ರಕಲಾ, ಯುವ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್ ಕುಲಾಲ್ ಆಯ್ಕೆಯಾಗಿದ್ದಾರೆ.Read More

error: Content is protected !!