• September 13, 2024

ಬೆಳ್ತಂಗಡಿ ಸಮುದಾಯ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿದ್ದ ಡಾ. ಆದಂ ನಿಧನ

 ಬೆಳ್ತಂಗಡಿ ಸಮುದಾಯ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿದ್ದ ಡಾ. ಆದಂ ನಿಧನ

ಬೆಳ್ತಂಗಡಿ; ಇಲ್ಲಿನ ಸರಕಾರಿ ಸಮುದಾಯ ಆಸ್ಪತ್ರೆಯಲ್ಲಿ ಪ್ರಸೂತಿ ಮತ್ತು ಸ್ರ್ತೀ ರೋಗ ತಜ್ಞರಾಗಿದ್ದ ಡಾ. ಆದಂ ಅವರು ಅಲ್ಪ ಕಾಲದ ಅಸೌಖ್ಯದಿಂದ ಏ.20 ರಂದು ಕೆ.ಸಿ ರೋಡಿನ ಸ್ವಗೃಹದಲ್ಲಿ ನಿಧನರಾಗಿದ್ದಾರೆ.


ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದೀರ್ಘ ವರ್ಷಗಳಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿ, ಆಡಳಿತಾಧಿಕಾರಿಯಾಗಿ ಅವರು ಕರ್ತವ್ಯ ಸಲ್ಲಿಸಿದ್ದು ಕಳೆದ 4 ವರ್ಷಗಳ ಹಿಂದೆ ನಿವೃತ್ತರಾಗಿದ್ದರು. ನಿವೃತ್ತಿಯ ಬಳಿಕ ಅವರು ತಮ್ಮ ಊರಾದ ಕೆ.ಸಿ‌ ರೋಡಿನಲ್ಲಿ ಖಾಸಗಿ ಕ್ಲಿನಿಕ್ ತೆರೆದು ವೈದ್ಯಕೀಯ ಸೇವೆ ಮುಂದುವರಿಸಿಕೊಂಡು ಹೋಗಿದ್ದರು.
ಅವರಿಗೆ ಒಂದು ತಿಂಗಳ ಹಿಂದೆ ಮೆದುಳಿನ ರಕ್ತಸ್ರಾವ (ಬ್ರೈನ್ ಎಮರೇಜ್) ಆಗಿತ್ತು. ಕೋಮಾ ಸ್ಥಿತಿಯಲ್ಲಿದ್ದ ಅವರಿಗೆ ಆ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ರ್ತ ಚಿಕಿತ್ಸೆ ನಡೆದಿತ್ತು. ಅದಾಗ್ಯೂ ಅವರಿಗೆ‌ ಎಚ್ಚರ ಮರಳದೇ ಇದ್ದುದರಿಂದ ವಾರದ ಹಿಂದೆ ಅವರನ್ನು ಕೆ.ಸಿ‌ ರೋಡಿನಲ್ಲಿರುವ ಮನೆಗೆ ವಾಪಾಸು ಕರೆತರಲಾಗಿತ್ತು. ಇದೀಗ ಅವರು ಶನಿವಾರ ಸಂಜೆಯ ವೇಳೆ ಕೊನೆಯುಸಿರೆಳೆದಿದ್ದಾರೆ.

ಸರಳ ಸಾತ್ವಿಕ ಸ್ವಭಾವದವರಾಗಿದ್ದ ಅವರು ಮಿತಭಾಷಿಯಾಗಿದ್ದರು.
ಬೆಳ್ತಂಗಡಿ ಸಮುದಾಯ ಆಸ್ಪಸೇವೆಯಲ್ಲಿರುವ ವೇಳೆ ಎಲ್ಲರ ಪ್ರೀತಿ‌ ಗಳಿಸಿದ್ದರು.
ಮೃತರು ಪತ್ನಿ ಫಾತಿಮಾ ಸಾಹಿರಾ ಬಾನು, ಇಬ್ಬರು ಗಂಡು ಮಕ್ಕಳಾದ, ಕೇರಳದಲ್ಲಿ ಪಿಡಬ್ಲ್ಯುಡಿ ಗುತ್ತಿಗೆ ನಡೆಸುತ್ತಿರುವ ಶಾಹಿಮ್, ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿರುವ ಶಮೀಮ್ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ಅವರ ಹುಟ್ಟೂರಾದ ಕಡತದಲ್ಲಿ ರವಿವಾರ ಬೆಳಗ್ಗೆ ನಡೆಯಲಿದೆ ಎಂದು ಅವರ ಹಿರಿಯ ಪುತ್ರ ಶಾಹಿಮ್ ತಿಳಿಸಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!