• October 30, 2024

ನಾರಾವಿ ವಲಯದಲ್ಲೀ ನೂತನ ವಾಗಿ ಆಯ್ಕೆಯಾದ ಒಕ್ಕೂಟದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ

 ನಾರಾವಿ ವಲಯದಲ್ಲೀ ನೂತನ ವಾಗಿ ಆಯ್ಕೆಯಾದ ಒಕ್ಕೂಟದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ

 


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನಾರಾವಿ ವಲಯ ದಲ್ಲಿ ನೂತನ ವಾಗಿ ಆಯ್ಕೆಯಾದ 11 ಒಕ್ಕೂಟಗಳ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರ ವನ್ನು ನಾರಾವಿಯ ಶ್ರೀ ಮಹಾವೀರ ಸಬಾ ಭವನದಲ್ಲಿ ಜರಗಿತು


ತರಬೇತಿಯ ಉದ್ಘಾಟನೆಯನ್ನು ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ಕೇಂದ್ರ ಒಕ್ಕೂಟದ ಅಧ್ಯಕ್ಷ ರಾದ ಶ್ರೀ ಸದಾನಂದ ಬಂಗೇರಾ ರವರು ಉದ್ಘಾಟಿಸಿ ಒಕ್ಕೂಟದ ಪದಾಧಿಕಾರಿಗಳು ಸೇವಾಮನೋ ಭಾವನೆಯನ್ನ ಬೆಳೆಸಿಕೊಂಡು ಪಾಲುದಾರ ಕುಟುಂಬಗಳಿಗೆ ಸಹಕಾರ ನೀಡಬೇಕು ಎಂದು ಶುಭ ಹಾರೈಸಿದರು JCI ತರಬೇತಿ ದಾರ ರಾದ ಚಂದ್ರ ಹಾಸ ಬಳೆಂಜ ನಾಯಕತ್ವ ಗುಣ ಲಕ್ಷಣಗಳ ಕುರುತು ವಿವರಿಸಿದರು ಸೇವಾ ಪ್ರತಿನಿಧಿಗಳ ವಿಭಾಗದ ಯೋಜನಾಧಿಕಾರಿಗಳಾದ ಶ್ರೀ ಶಿವ ಪ್ರಸಾದ್ ಒಕ್ಕೂಟದ ಪದಾಧಿಕಾರಿಗಳ ಜವಾಬ್ದಾರಿ ಹಾಗು ಒಕ್ಕೂಟ ಸಭೆ ನಡೆಸುವ ಪ್ರಾಯೋಗಿಕ ತರಬೇತಿಯನ್ನು ನೀಡಿದರು ತಾಲೂಕ್ ಯೋಜನಾಧಿಕಾರಿ ದಯಾನಂದ ಪೂಜಾರಿ ಉಪಸ್ಥಿತರಿದ್ದರು

ವಲಯ ಮೇಲ್ವಿಚಾರಕ ರಾದ ಶ್ರೀಮತಿ ದಮಯಂತಿ ಸ್ವಾಗತಿಸಿದರು ಕುತ್ಲುರು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಕೇಶವ ನಿರೂಪಿಸಿದರು ವಲಯದ ಎಲ್ಲಾ ಸೇವಾ ಪ್ರತಿನಿಧಿ ಗಳು ಹಾಜರಿದ್ದರು ನಾರಾವಿ ವಲಯದ ವಲಯ ಅದ್ಯಕ್ಷರಾಗಿ ಶೇಕರ್ ಹೆಗ್ಡೆ ಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು

Related post

Leave a Reply

Your email address will not be published. Required fields are marked *

error: Content is protected !!