ಬೆಳ್ತಂಗಡಿ ಬಿಜೆಪಿ ಮಂಡಲ ವತಿಯಿಂದ ಸುದ್ದಿಗೋಷ್ಠಿ: ರಾಜ್ಯ ಸರಕಾರ ಇದೀಗ ಗ್ಯಾರಂಟಿ ಯೋಜನೆಯ ಭಾರವನ್ನು ಹೊರಲಾಗದೆ ಅಭಿವೃದ್ದಿಯನ್ನು ಮಾಡಲಾಗದೆ ಕಾರಣಗಳನ್ನು ಹುಡುಕುತ್ತಿದೆ: ಪ್ರತಾಪ್ ಸಿಂಹ ನಾಯಕ್
ಬೆಳ್ತಂಗಡಿ: ಗ್ಯಾರಂಟಿ ಯೊಜನೆಯ ಭಾರವನ್ನು ಕಾಂಗ್ರೆಸ್ ಸರಕಾರಕ್ಕೆ ತಡೆಯಲಾಗುತ್ತಿಲ್ಲ.ಅಂಗನವಾಡಿ ಆಶಾಕಾರ್ಯಕರ್ತರಿಗೆ ಹೆಚ್ಚಿನ ಅನುದಾನ ನೀಡುತ್ತೇವೆ ಎಂಬ ಭರವಸೆ ಭರವಸೆಯಾಗಿಯೇ ಉಳಿದೆದೆ ಎಂದು ಕಾಂಗ್ರೆಸ್ ಸರಕಾರದ ವಿರುದ್ಧ ವಿಧಾನ ಪರಿಷತ್ ಶಾಸಕರಾದ ಪ್ರತಾಪ್ ಸಿಂಹ ನಾಯಕ್ ಕಿಡಿ ಕಾರಿದರು.
ಅವರು ಇಂದು ಬೆಳ್ತಂಗಡಿ ಬಿಜೆಪಿ ಮಂಡಲ ವತಿಯಿಂದ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯ ಸರಕಾರ ಇದೀಗ ಗ್ಯಾರಂಟಿ ಯೋಜನೆಯ ಭಾರವನ್ನು ಹೊರಲಾಗದೆ ಅಭಿವೃದ್ದಿಯನ್ನು ಮಾಡಲಾಗದೆ ಕಾರಣಗಳನ್ನು ಹುಡುಕುತ್ತಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸುತ್ತೇವೆ ಎಂದವರು ಯಾಕೆ ಈವರೆಗೂ ನಿರ್ಮಿಸಲಾಗಲಿಲ್ಲ? 5 ಲಕ್ಷ ರೂಪಾಯಿ ಶೂನ್ಯ ಸಾಲ ಬಡ್ಡಿ ಎಂದು ಹೇಳಿದ್ದರು ಯಾಕೆ ಜಾರಿಗೆ ಬರಲಿಲ್ಲ? ಎಸ್ಟಿ ಎಸ್ಸಿಗಳಿಗೆ ಇಟ್ಟಂತಹ 25 ಸಾವಿರ ಕೋಟಿ ರೂಪಾಯಿಗಳನ್ನು ಗ್ಯಾರಂಟಿ ಯೋಜನೆಗಳಿಗೆ ಉಪಯೋಗ ಮಾಡಿದ್ದಾರೆ. ಎಸ್ಟಿ ಎಸ್ಸಿಗಳಿಗೆ ರಕ್ಷಕರಾಗಿ ನಾವಿದ್ದೇವೆ ಎಂದು ಕಾಂಗ್ರೆಸ್ ಸರಕಾರ ಇದೀಗ ಅವರಿಗೆ ವಂಚನೆಯನ್ನು ಮಾಡಿದೆ ಎಂದು ಕಿಡಿ ಕಾರಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರು ಭಾಗಿಯಾಗಿದ್ದರು