ಬೆಳಾಲು: ಮರದಿಂದ ಬಿದ್ದು ಗಂಭೀರ ಗಾಯಗೊಂಡ ವಿಶ್ವನಾಥ್ ಗೌಡ: ಬಡ ಕುಟುಂಬಕ್ಕೆ ಆಸರೆಯಾಗಿದ್ದ ಇವರಿಗೆ ಸಹಾಯದ ಹಸ್ತ ಬೇಕಾಗಿದೆ
ಬೆಳಾಲು: ಮಾಯ ಪುಚ್ಚೆಹಿತ್ತಿಲು ನಿವಾಸಿ, ವೃತ್ತಿಪರ ಆಟೋ ಚಾಲಕ ವಿಶ್ವನಾಥ್ ಗೌಡ ಮರ ಕಡಿಯುವ ವೇಳೆ ಆಕಸ್ಮಿಕವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಿನಗೂಲಿ ಕಾರ್ಮಿಕನಾಗಿ ದುಡಿಯುತ್ತಾ ಕುಟುಂಬಕ್ಕೆ ಆಸರೆಯಾಗಿದ್ದ ಗೆಳೆಯನ ಚಿಕಿತ್ಸಾ ವೆಚ್ಚವು ಬರೋಬ್ಬರಿ 5 ಲಕ್ಷ ರೂಪಾಯಿಯಷ್ಟಾಗಿದೆ.
ಈ ದುಬಾರಿ ವೆಚ್ಚವು ಕುಟುಂಬಕ್ಕೆ ಭರಿಸಲು ತುಂಬಾ ಕಷ್ಟಕರವಾದ ಈ ಸಂದರ್ಭದಲ್ಲಿ ದಾನಿಗಳ, ಸಂಘ ಸಂಸ್ಥೆಗಳ ನಮ್ಮೆಲ್ಲರ ಸಹಾಯ ಅಗತ್ಯವಿದೆ