ತಣ್ಣೀರುಪಂಥ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಬಿಜೆಪಿ ಆಡಳಿತ- ಹರೀಶ್ ಪೂಂಜ ಸಂತಸ
ಬೆಳ್ತಂಗಡಿ:ಜೂ.19: ಬಿಜೆಪಿ ಕಾರ್ಯಕರ್ತರ ಪಾಲಿಗೆ ಒಂದು ಕಾಲದಲ್ಲಿ ಕಬ್ಬಿಣದ ಕಡಲೆಯಾಗಿದ್ದ ತಣ್ಣೀರುಪಂಥ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಿರುವುದಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸಂತಸ ವ್ಯಕ್ತಪಡಿಸಿದ್ದಾರೆ.
ಇಂದು ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟಿ ಚುನಾಯಿತರಾದುದು ತಾಲೂಕಿನಲ್ಲಿ ಬಿಜೆಪಿಯ ಬೇರುಗಳು ಮತ್ತಷ್ಟು ಬಲಿಷ್ಟವಾಗುವ ಹಾಗೂ ಕಾಂಗ್ರೆಸ್ ತನ್ನ ಹಿಡಿತವನ್ನು ಕಳಕೊಳ್ಳುವ ಸೂಚನೆ ಎಂದ ಶಾಸಕರು ಪ್ರಕಟಣೆ ಮೂಲಕ ನೂತನ ಅಧ್ಯಕ್ಷರನ್ನು ಹಾಗೂ ಆಡಳಿತ ಮಂಡಳಿ ನಿರ್ದೇಶಕರನ್ನು ಅಭಿನಂದಿಸಿದ್ದಾರೆ.