ಅಕ್ಟೋಬರ್ 12 ರಂದು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯಲ್ಲಿ ದೇವಿಗೆ ನವರಾತ್ರಿ ಪೂಜೆ: ನಾಗತಂಬಿಲ, ಮಹಾಪೂಜೆ ಮತ್ತು ಆಯುಧಪೂಜೆ
ಆರಿಕೋಡಿ: ಕಾರ್ಣಿಕ ಕ್ಷೇತ್ರವಾದ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಗೆ ನವರಾತ್ರಿ ಪೂಜೆ, ನಾಗತಂಬಿಲ, ಮಹಾಪೂಜೆ ಮತ್ತು ಆಯುಧಪೂಜೆಯು(ವಾಹನ ಪೂಜೆ) ಅಕ್ಟೋಬರ್ 12 ರಂದು ಶನಿವಾರ ಜರುಗಲಿದೆ.
ಆ ಪ್ರಯುಕ್ತ ಶಾಲಾ ಮಕ್ಕಳಿಗೆ ಪುಸ್ತಕ, ಪೆನ್ ಮತ್ತು ಬಳಪ ವಿತರಣೆ ನಡೆಯಲಿದ್ದು, ಮಹಿಳೆಯರಿಗೆ ರವಿಕೆ ಕಣ ಮತ್ತು ಬಳೆ ವಿತರಣೆ, ವಾಹನ ಪೂಜೆ ಮಾಡಿಸುವವರು 1 ತೆಂಗಿನಕಾಯಿ, ಲಿಂಬೆ, ಹೂವು ಇತ್ಯಾದಿ ಸಾಮಾಗ್ರಿಗಳನ್ನು ತರುವುದಾಗಿ ತಿಳಿಸಲಾಗಿದೆ