ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಪಟ್ರಮೆಯಲ್ಲಿ ಸಂಕ್ರಮಣದ ಪ್ರಯುಕ್ತ ಸನಾತನದ ಸಾಧಕರಾದ ಆನಂದ ಗೌಡ ಇವರಿಂದ ವಿಶೇಷ ಧಾರ್ಮಿಕ ಪ್ರವಚನ
ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಪಟ್ರಮೆಯಲ್ಲಿ ಸಂಕ್ರಮಣದ ಪ್ರಯುಕ್ತ ಸನಾತನದ ಸಾಧಕರಾದ ಶ್ರೀ ಆನಂದ ಗೌಡ ಇವರು ವಿಶೇಷ ಧಾರ್ಮಿಕ ಪ್ರವಚನವನ್ನು ನೀಡಿದರು.
ಹಿಂದೂ ಧರ್ಮ ಅತ್ಯಂತ ಪ್ರಾಚೀನ ಧರ್ಮ ಹಾಗೂ ವೈಜ್ಞಾನಿಕ ಧರ್ಮ, ಅನಾದಿಕಾಲದಿಂದ ಅನಂತಕಾಲದವರೆಗೂ ಇರುವ ಧರ್ಮ. ಇಂತಹ ಮಹಾನ್ ಧರ್ಮದಲ್ಲಿ ಜನಿಸಿದ ಹಿಂದೂಗಳು ಇವತ್ತು ಧರ್ಮಾಚರಣೆಯಿಂದಾಗುವ ಲಾಭವನ್ನು ಪಡೆಯುವಲ್ಲಿ ದೂರ ಉಳಿದಿದ್ದಾರೆ. ದಿನನಿತ್ಯದ ಆಚರಣೆಗಳನ್ನು, ಹಬ್ಬಗಳನ್ನು, ವೃತಗಳನ್ನು ಇವತ್ತು ಸಾಮಾಜಿಕ ಕಾರ್ಯಕ್ರಮದ ಹಾಗೆ ಆಚರಿಸುವುದನ್ನು ನಾವು ನೋಡುತ್ತೇವೆ. ಇದರಿಂದ ಆಧ್ಯಾತ್ಮಿಕ ಲಾಭವನ್ನು ಪಡೆಯುವಲ್ಲಿ ನಾವೆಲ್ಲರೂ ವಂಚಿತರಾಗಿದ್ದೇವೆ. ಇದಕ್ಕೆಲ್ಲ ಮೂಲ ಕಾರಣ ಧರ್ಮ ಶಿಕ್ಷಣದ ಅಭಾವ. ಧರ್ಮ ಶಿಕ್ಷಣ ಸಿಕ್ಕಿದರೆ ಧರ್ಮದ ಆಚರಣೆಗೆ ಯೋಗ್ಯ ದಿಶೆ ಸಿಗುತ್ತದೆ. ಧರ್ಮದ ಆಚರಣೆ ಮಾಡಿದಾಗ ನಮಗೆ ಅದರ ಮಹಾನತೆ ತಿಳಿಯುತ್ತದೆ. ಧರ್ಮದ ಮಹಾನತೆ ತಿಳಿದ ನಂತರ ಪ್ರತಿಯೊಂದು ಆಚರಣೆಗಳು ಶ್ರದ್ಧೆ ಭಕ್ತಿಯಿಂದ ಆಗುತ್ತದೆ. ಹಾಗೂ ಇದರಿಂದ ಧರ್ಮದ ರಕ್ಷಣೆಯು ಆಗುತ್ತದೆ. ಈ ನಿಟ್ಟಿನಲ್ಲಿ ಹಿಂದುಗಳು ಪ್ರತಿವಾರದಲ್ಲಿ ಕನಿಷ್ಠಪಕ್ಷ 1 ಗಂಟೆಯಾದರೂ ಧರ್ಮ ಶಿಕ್ಷಣವನ್ನು ಪಡೆದುಕೊಳ್ಳಬೇಕು. ಮುಂಬರುವ ಕಾಲವು ಭೀಕರವಿದೆ ಎಂಬುದನ್ನು ಸಾಧುಸಂತರು, ದೃಷ್ಟಾರರು ಸಮಾಜಕ್ಕೆ ತಿಳಿಸಿರುತ್ತಾರೆ. ಇದಕ್ಕಾಗಿ ನಮ್ಮ ರಕ್ಷಣೆಗೋಸ್ಕರ ಭಕ್ತಿಯನ್ನ ಹೆಚ್ಚು ಮಾಡಬೇಕು. ‘ನಮೇ ಭಕ್ತ ಪ್ರಣಶ್ಯತಿ’ ಎಂಬಂತೆ ನಮ್ಮ ರಕ್ಷಣೆಗೆ ಧರ್ಮದ ಆಚರಣೆ ಅನಿವಾರ್ಯ ಎಂಬುದಾಗಿ ಮಾರ್ಗದರ್ಶನವನ್ನು ಮಾಡಿದರು.
ಈ ಕಾರ್ಯಕ್ರಮದಲ್ಲಿ 175 ಭಕ್ತರು ಉಪಸ್ಥಿತರಿದ್ದು ಇದರ ಲಾಭವನ್ನು ಪಡೆದುಕೊಂಡರು.