• October 16, 2024

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಮಹಾಸಭೆ

 ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಮಹಾಸಭೆ

 

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘ ಇದರ ಮಹಾಸಭೆಯು ಕೊಲ್ಲಿ ಶ್ರೀ ದುರ್ಗಾ ದೇವಿ ಕಲಾ ಮಂದಿರದಲ್ಲಿ ಸೆ. 17 ರಂದು ಜರುಗಿತು.
ಮಹಾಸಭೆಯು ಸಂಘದ ಅಧ್ಯಕ್ಷ ಹರೀಶ್ ಸಾಲಿಯಾನ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.


ಸಂಘವು ವರದಿ ಸಾಲಿನಲ್ಲಿ ಲೆಕ್ಕ ಪರಿಶೋಧನೆಯಲ್ಲಿ ಎ ಶ್ರೇಣಿಯಲ್ಲಿದೆ. ಹಾಗೂ ವರ್ಷಾಂತ್ಯಕ್ಕೆ ರೂ.7.05 ಕೋಟಿ ಪಾಲು ಬಂಡವಾಳವನ್ನು ಹೊಂದಿದ್ದು, ರೂ 1020.75 ಕೋಟಿ ವ್ಯವಹಾರವನ್ನು ಮಾಡಿ ರೂ 4,30, 73,720.24 ಲಾಭವನ್ನು ಹೊಂದಲು ಸಾಧ್ಯವಾಗಿದೆ. ಸಂಘದ ಪ್ರಗತಿಗಾಗಿ ಸಂಘದ ಮಾಜಿ ಅಧ್ಯಕ್ಷರು , ನಿರ್ದೇಶಕರು ಸದಸ್ಯರ ಸಹಕಾರ ಹಾಗೂ ಸಿಬ್ಬಂದಿಗಳ ಪರಿಶ್ರಮವನ್ನು ಅಧ್ಯಕ್ಷರು ಈ ಸಂದರ್ಭದಲ್ಲಿ ಸ್ಮರಿಸಿದರು.


ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ವಸಂತ ಗೌಡ, ನಿರ್ದೇಶಕರಾದ ಎನ್ ಲಕ್ಷ್ಮಣ್ ಗೌಡ, ಎಬಿ ಉಮೇಶ್, ತನುಜಾ ಶೇಖರ್, ಆನಂದ ಗೌಡ ಬಿ, ರಮೇಶ್ ಕೆಂಗಾಜೆ, ವಿನಯ ಚಂದ್ರ, ವಿಜಯ, ರಘುನಾಥ, ಸತೀಶ್ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು

Related post

Leave a Reply

Your email address will not be published. Required fields are marked *

error: Content is protected !!