ಮೃತ್ಯುಂಜಯ ನದಿಯಲ್ಲಿ ಹರಿದು ಬಂದ ಮಣ್ಣು ಮಿಶ್ರಿತ ನೀರು: ಬೆಟ್ಟಗಳ ಹಾಗೂ ನದಿಯ ಪಾತ್ರದಲ್ಲಿರುವ ತಾಲೂಕಿನ ಜನರು ಭೂಕುಸಿತ, ನೀರಿನ ಮಟ್ಟ ಕಂಡುಬಂದಲ್ಲಿ ತಕ್ಷಣ ಶಾಸಕರನ್ನು ಸಂಪರ್ಕಿಸುವಂತೆ ಸೂಚನೆ
ದುರ್ಗದ ಬೆಟ್ಟ, ರಾಣಿ ಝರಿ, ಮೈದಾಡಿ ಬೆಟ್ಟದ ಕಡೆಯಿಂದ ಹೊಳೆಯ ನೀರಿನಲ್ಲಿ ಮಣ್ಣು ಮಿಶ್ರಿತ ನೀರು ರಭಸದಿಂದ ಬರುತ್ತಿರುವ ಕುರಿತು ಸ್ಥಳೀಯರಿಂದ ಮಾಹಿತಿ ಬಂದಿದ್ದು, ಬೆಟ್ಟಗಳ ಹಾಗೂ ನದಿಯ ಪಾತ್ರದಲ್ಲಿರುವ ತಾಲೂಕಿನ ಜನರು ಜಾಗರುಕರಾಗಿರುವಂತೆ ಶಾಸಕರು ಮನವಿ ಮಾಡಿದ್ದಾರೆ.
ಜಿಲ್ಲಾಡಳಿತ ಹಾಗೂ ಭೂ ಶಾಸ್ತ್ರಜ್ಞರು ಈ ಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವಸ್ತುಸ್ಥಿತಿ ಬಗ್ಗೆ ವರದಿ ನೀಡಲಿದ್ದಾರೆ. ನೀರಿನ ಮಟ್ಟ ಹಾಗೂ ಭೂ ಕುಸಿತದ ಲಕ್ಷಣ ಕಂಡರೆ ಕೂಡಲೇ ಸಮಯಾಸಮಯವೆನ್ನದೆ ಶಾಸಕರನ್ನು, ಅವರ ಕಚೇರಿಯನ್ನು ಅಥವಾ ಸ್ಥಳೀಯ ಬಿಜೆಪಿ ನಾಯಕರನ್ನು ಸಂಪರ್ಕಿಸುವಂತೆ ಸೂಚಿಸಿದ್ದಾರೆ