ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಗೆ ಇಂಗ್ಲೇಂಡಿನ ಟೀಮ್ ಮಲ್ಟಿ ಅಕಾಡೆಮಿ ಸಂಸ್ಥೆಯ ಸಿ.ಇ.ಒ ಭೇಟಿ
ಉಜಿರೆ : ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಗೆ ಇಂಗ್ಲೇಂಡಿನ ಟೀಮ್ ಮಲ್ಟಿ ಅಕಾಡೆಮಿ ಸಂಸ್ಥೆಯ ಸಿ.ಇ.ಒ ಹಾಗೂ ಎಕ್ಸೆಕ್ಯುಟಿವ್ ಹೆಡ್ ಟೀಚರ್ ಆಗಿರುವ ಐಯನ್ ತೊಮಸ್ ಭೇಟಿ ನೀಡಿ ತಮ್ಮ ಮಂಗಳೂರು ಪ್ರವಾಸದ ಅನುಭವಗಳನ್ನು ಹಂಚಿಕೊಂಡರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ಸಾಂಸ್ಕೃತಿಕ ನೃತ್ಯಗಳಲ್ಲಿ ಒಂದಾದ ಭರತನಾಟ್ಯ, ತುಳುನಾಡ ಕಲೆಗಳಾದ ಯಕ್ಷಗಾನ, ಪಾಡ್ದನ, ತುಳು ಪದ್ಯ, ಕರಕುಶಲ ವಸ್ತುಗಳ ಪ್ರದರ್ಶನಗಳನ್ನು ವಿದ್ಯಾರ್ಥಿಗಳಿಂದ ಮಾಡಲಾಯಿತು.
ಭೇಟಿಯ ಕಾರ್ಯಕ್ರಮದಲ್ಲಿ ಮಂಗಳೂರು ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆಯ ಕರೆಸ್ಪಂಡೆಂಟ್ ಶ್ರೀಮತಿ ಶೃತ ಜಿತೇಶ್, ಮಂಗಳೂರು ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಜೋಯ್ ಜೀವನ್ ರೈ, ಮಂಗಳೂರು ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆಯ ಶೈಕ್ಷಣಿಕ ಸಂಯೋಜಕಿ ಶ್ರೀಮತಿ ಉಷಾ ಹೆಗ್ಡೆ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಮನ್ಮೋಹನ್ ನಾಯ್ಕ್ ಕೆ.ಜಿ ವಹಿಸಿದ್ದರು.
ಶಿಕ್ಷಕಿ ಕಲ್ಯಾಣಿ ಎಮ್ ರಾವ್ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಶಾಂಟಿ ಜಾರ್ಜ್ ಶೈಕ್ಷಣಿಕ ವರದಿಯನ್ನು ಪ್ರಸ್ತುತಿ ಪಡಿಸಿದರು.