ಕೆ ಎಸ್ ಎಂ ಸಿ ಎ ವತಿಯಿಂದ ಕಾರ್ಗಿಲ್ ವಿಜಯೋತ್ಸವ: ನಿವೃತ್ತ ಸೈನಿಕರಿಗೆ ಸನ್ಮಾನ
ಬೆಳ್ತಂಗಡಿ; ಕರ್ನಾಟಕ ಸೀರೋ ಮಲಬಾರ್ ಕ್ಯಾಥೊಲಿಕ್ ಅಸೋಸಿಯೇಷನ್ (ಕೆಎಸ್‌ಎಮ್‌ಸಿಎ) ವತಿಯಿಂದ ಕಾರ್ಗಿಲ್ ವಿಜಯ ದಿವಸ ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಉಜಿರೆ ಧರ್ಮಕ್ಷೇತ್ರದಲ್ಲಿ ನೆಲೆಸಿರುವ ರೊಯ್ ಅಂಬಿಕೋನತ್ ಮತ್ತು ಡೇವಿಸ್ ಕಣ್ಣುಕಡನ್ ರವರನ್ನು ಸಂಘಟನೆಯ ವತಿಯಿಂದ ಸನ್ಮಾನಿಸಲಾಯಿತು.
ಉಜಿರೆ ಸೈಂಟ್ ಜಾರ್ಜ್ ಚರ್ಚ್ ನ ಧರ್ಮಗುರು ಫಾ. ಬಿಜು ಮ್ಯಾಥ್ಯೂ ಅಂಬಟ್ ಅವರು ಯೋಧರನ್ಮು ಶಾಲು ಹೊದಿಸಿ ಸನ್ಮಾನಿಸಿದರು. ಉಜಿರೆ ಘಟಕ ಅಧ್ಯಕ್ಷ ಜೋಬಿ ಮುಳವನ ಸ್ಮರಣಿಕೆ ನೀಡಿ ಸನ್ಮಾನಿಸಿದರು.
ರೊಯ್ ಅಂಬಿಕೋನತ್ ರವರು 1980ರಲ್ಲಿ ಸೇನೆಗೆ ಸೇರಿ ಮಿಸೋರಮ್,ಅಹ್ಮದಾಬಾದ್, ಸಿಕ್ಕಿಂ ಜೈಪುರ್, ಕಾಶ್ಮೀರ, ಶ್ರೀಲಂಕಾದ ಜಾಫ್ನ, ಬೆಂಗಳೂರು ಮುಂತಾದೆಡೆ ಸೇವೆ ಸಲ್ಲಿಸಿ 2001ರಲ್ಲಿ ನಿವೃತ್ತಿ ಹೊಂದಿದರು.
ಶ್ರೀ ಡೇವಿಸ್ ಕಣ್ಣುಕಾಡನ್ ರವರು 1992 ರಲ್ಲಿ ಸೇನೆಗೆ ಸೇರಿ ಜಾವಲ್ಪುರ್, ಜಲಂಧರ್, ಮಧುರೈ, ದೆಹಲಿ, ಶ್ರೀನಗರ, ಗುಡ್ಗವ್, ಲಡಾಕ್, ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದರು. ಇವರು 2008 ರಲ್ಲಿ ನಿವೃತ್ತಿ ಹೊಂದಿದರು.
ಕೆ ಎಸ್ ಎಂ ಸಿ ಎ ಕೇಂದ್ರ ಸಮಿತಿ ನಿರ್ದೇಶನದಂತೆ ಬೆಳ್ತಂಗಡಿ ಧರ್ಮಕೇಂದ್ರದ ಎಲ್ಲ ಚರ್ಚ್ ಗಳಲ್ಲಿಯೂ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರೊಟ್ಟಿಗೆ ಎಸ್ ಎಸ್ ಎಲ್ ಸಿ ಉನ್ನತ ಶ್ರಣಿಯಲ್ಲಿ ತೇರ್ಗಡೆ ಗೊಂಡ ಮಕ್ಕಳನ್ನೂ ಗೌರವಿಸಲಾಯಿತು. ದಿವ್ಯ ಬಲಿಪೂಜೆ ಮತ್ತು ಸಂತ ಅಲ್ಫೋನ್ಸ್ ರವರ ಹಬ್ಬವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಉಜಿರೆ ಘಟಕ ದ ಉಪಾಧ್ಯಕ್ಷೆ ಲಿಜಿ ಜಾನ್ಸನ್, ಜೇಮ್ಸ್ ನೆಲ್ಲಿಕುನ್ನಲ್, ಮನೋಜ್ ಪಟ್ಟೆರಿಲ್, ಡ್ಯಾನಿಶ್ ಉಜಿರೆ, ಸನ್ನಿ ಬೆಳಾಲ್, ಚೆರಿಯನ್, ಶೋಭಾ ಕೊಲ್ಲಿಯಿಲ್, ಬಿಂದು , ರಿನ್ಸ್ ಉಜಿರೆ ಮತ್ತು ಪಾಲನಾ ಸಮಿತಿ ಎಲ್ಲಾ ಭಕ್ತ ವೃಂದದವರು ಉಪಸ್ಥಿತರಿದ್ದರು.