ಕನ್ಯಾಡಿ ಶ್ರೀರಾಮ ಕ್ಷೇತ್ರದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಶ್ರೀಗಳ ಚತುರ್ಮಾಸ್ಯ ವೃತಾರಂಭ – ಹರೀಶ್ ಪೂಂಜಾ ಸುದ್ದಿಗೋಷ್ಠಿ
ಧರ್ಮಸ್ಥಳ : ನಿತ್ಯಾನಂದ ನಗರ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವೃತ ಜು.13 ರಿಂದ ಆರಂಭಗೊಂಡು 48 ದಿನಗಳ ವರೆಗೆ ನಡೆಯಲಿದೆ ಎಂದು ಚತುರ್ಮಾಸ್ಯ ಸಮಿತಿ ಅಧ್ಯಕ್ಷ ಶಾಸಕ ಹರೀಶ್ ಪೂಂಜಾ ಹೇಳಿದರು. ಅವರು ಜು.12 ರಂದು ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು. ಜುಲೈ 13 ರಿಂದ ಅಗೋಸ್ಟ್ 29 ರ ವರೆಗೆ 48 ದಿನಗಳಲ್ಲಿ ನಡೆಯಲಿರುವ ಈ ವರ್ಷದ ಸ್ವಾಮೀಜಿಯ 3 ನೇ ವರ್ಷda ಚತುರ್ಮಾಸ್ಯ ವೃತ 5 ಜಿಲ್ಲೆಗಳ ಗುರುಗಳ ಶಿಷ್ಯರಿಂದ ಶ್ರದ್ಧಾ ಭಕ್ತಿಯಿಂದ ನಡೆಯಲಿದ್ದು ಜಿಲ್ಲೆಯ ಮಂತ್ರಿಗಳ ಮತ್ತು ಶಾಸಕರ ಮತ್ತು ಭಕ್ತರ ಸಹಕಾರದಿಂದ ನಡೆಯಲಿದೆ. ಗುರುದೇವ ಮಠದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಶಾಶ್ವತ ಚಪ್ಪಾರ ನಿರ್ಮಾಣ ಕಾರ್ಯ ಮತ್ತು ಪೂರ್ವ ತಯಾರಿ ನಡೆದಿದೆ ಶ್ರೀರಾಮ ಕ್ಷೆತ್ರ ಸೇವಾ ಸಮಿತಿ ಚಂಚಾಲಕ ಜಯಂತ್ ಕೋಟ್ಯಾನ್ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ತಾಲೂಕು ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಚತುರ್ಮಾಸ್ಯ ಸಮಿತಿ ಕಾರ್ಯದರ್ಶಿ ಗಣೇಶ್ ಗೌಡ, ತಾಲೂಕು ಶ್ರೀ ರಾಮ ಕ್ಷೇತ್ರ ಸಮಿತಿಯ ಪದಾಧಿಕಾರಿಗಳು, ಸದಸ್ಯರು,ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಶಿಷ್ಯವರ್ಗದವರು ಭಾಗವಹಿಸಲಿದ್ದಾರೆ . ಪ್ರತಿ ದಿನ ತಾಲೂಕಿನ 81 ಗ್ರಾಮದ ಶಿಷ್ಯರು ದಿನಕ್ಕೆ 2 ಗ್ರಾಮದವರು ಹೊರೆಕಾಣಿಕೆ ಯೊಂದಿಗೆ ಪಾಲ್ಗೊಳ್ಳಲಿದ್ದಾರೆ. ಪ್ರತಿ ನಿತ್ಯ ಭಜನೆ, ಶನಿವಾರ, ಆದಿತ್ಯವಾರ ಪೌರಾಣಿಕ ಯಕ್ಷಗಾನ ಜರಗಲಿದೆ ಎಂದರು.ಪತ್ರಿಕಾ ಗೋಷ್ಠಿಯಲ್ಲಿ ಸಂಚಾಲಕ ಜಯಂತ ಕೋಟ್ಯಾನ್, ಕಾರ್ಯದರ್ಶಿ ಗಣೇಶ್ ಗೌಡ, ಸೀತಾರಾಮ್ ಬಿ. ಎಸ್.ಬೆಳಾಲು ಉಪಸ್ಥಿತರಿದ್ದರು