• July 27, 2024

ಬಿಎಂಎಸ್ ನ ಕಟ್ಟಡ ಕಾರ್ಮಿಕ ವಿಭಾಗದಿಂದ ವಿಧಾನ ಪರಿಷತ್ ಸದಸ್ಯರ ಬೇಟಿ. ಮತ್ತು ಕಾರ್ಮಿಕರ ಸಮಸ್ಯೆಗಳನ್ನು ಕಲಾಪದಲ್ಲಿ ಪ್ರಶ್ನಿಸುವಂತೆ ವಿನಂತಿ

ಬೆಳ್ತಂಗಡಿ: ಕಟ್ಟಡ ಮತ್ತು ಇತರ ಕಾರ್ಮಿಕರ ವಿವಿಧ ಸಮಸ್ಯೆಗಳನ್ನು ಪರಿಹರಿಸುವ ದೃಷ್ಟಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಅವರನ್ನು ಭೇಟಿ ಮಾಡಿ ಕಾರ್ಮಿಕರ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಿ ವಿಧಾನ ಪರಿಷತ್ ನಲ್ಲಿ ನಡೆಯುವ ಕಲಾಪದಲ್ಲಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಪ್ರಶ್ನಿಸುವಂತೆ ವಿನಂತಿ ಮಾಡಲಾಯಿತು


1. 2021-22 ಸ್ಕಾಲರ್ಶಿಪ್ ಅರ್ಜಿ * ಮತ್ತು ಸೇವಾ ಸಿಂಧು ಪೋರ್ಟಲ್ ಗಳ ತಾಂತ್ರಿಕ ದೋಷದಿಂದ ಬರದವರ ಹಾಗೂ 2 .2022 23ನೇ ಸಾಲಿನ ಸ್ಕಾಲರ್ಶಿಪ್ ಅರ್ಜಿ ಹಾಕಿ ಇನ್ನೂ ಕಾರ್ಮಿಕರಿಗೆ ಹಣ ಬಂದಿರುವುದಿಲ್ಲ

3 ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಆಸ್ಪತ್ರೆ ಚಿಕಿತ್ಸಾ ವೆಚ್ಚದ ನ ಮರು ಪಾವತಿ

4 ಕಟ್ಟಡ ‌ಕಾರ್ಮಿಕರಿಗೆ ವಸತಿ ಯೋಜನೆಯಲ್ಲಿ ಸಬ್ಸಿಡಿ ಮತ್ತು ಸಾಲ ನೀಡುವ ಬಗ್ಗೆ ಹಾಗೂ ಇತರ 16 ವಿಷಯಗಳ ಬಗ್ಗೆ ಮನವಿ ನೀಡಿ ಈ ಬಗ್ಗೆ ವಿಧಾನ ಪರಿಷತ್ ಕಲಾಪದಲ್ಲಿ ಈ ಬಗ್ಗೆ ಪ್ರಶ್ನಿಸಿ ಕಾರ್ಮಿಕರಿಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿಕೊಳ್ಳಲಾಯಿತು .

ಈ ಬಗ್ಗೆ ಪೂರಕವಾಗಿ ಸ್ಪಂದಿಸಿದ ಪ್ರತಾಪ್ ಸಿಂಹ ನಾಯಕ್ ಅವರು ಕಲಾಪದಲ್ಲಿ ಪ್ರಶ್ನಿಸುವ ಬಗ್ಗೆ ಭರವಸೆಯನ್ನು ಇದ್ದರು ಕಳೆದ ವರ್ಷ ಕಾರ್ಮಿಕರ ಮಕ್ಕಳ ಸ್ಕಾಲರ್ ಶಿಪ್ ಲಭಿಸದೇ ಇದ್ದ ಸಂದರ್ಭದಲ್ಲಿ ಸದನದಲ್ಲಿ ಪ್ರಶ್ನೆ ಮಾಡಿದ ನಂತರ ಮರು ಆದೇಶ ಮಾಡಿ ರಾಜ್ಯದಲ್ಲಿ ಸ್ಕಾಲರ್ ಶಿಪ್ ಬರದೇ ಬಾಕಿ ಇರುವ 44 ಸಾವಿರ ಮಕ್ಕಳಿಗೆ ಸ್ಕಾಲರ್ ಶಿಪ್ ನೀಡುವಂತೆ ಆದೇಶ ಆಗಿತ್ತು ಇದಲ್ಲದೆ 16 ಇತರ ಕಾರ್ಮಿಕರ ಸಮಸ್ಯೆಗಳ ಬಗ್ಗೆಯೂ ಮನವಿಯಲ್ಲಿ ಉಲ್ಲೇಖಿಸಿ ಕೋರಿಕೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬಿಎಂಎಸ್ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ,ಕುಮಾರ್ ನಾಥ್ ಕಲ್ಮಂಜ ,ಸಾಂತಪ್ಪ ಕಲ್ಮಂಜ ಉಪಸ್ಥಿತರಿದ್ದರು

Related post

Leave a Reply

Your email address will not be published. Required fields are marked *

error: Content is protected !!