ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್ ಕೊರತೆ: ಎಬಿವಿಪಿ ವತಿಯಿಂದ ಪ್ರತಿಭಟನೆ
ಬೆಳ್ತಂಗಡಿ: ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ಸು ಸೌಲಭ್ಯಗಳು ದೊರಕುತ್ತಿಲ್ಲ.ಬಸ್ಸುಗಳ ಸಂಖ್ಯೆ ಕಡಿಮೆಯಾಗಿದ್ದು, ಬಸ್ಸಿನ ಬಾಗಿಲಿನಲ್ಲಿ ನೇತಾಡಿಕೊಂಡು ಅಪಾಯಕಾರಿಯಾಗಿ ಪ್ರಯಾಣಿಸುವ ಸನ್ನಿವೇಶ ಉಂಟಾಗಿದ್ದು ವಿದ್ಯಾರ್ಥಿಗಳ ಸಮಸ್ಯೆಯನ್ನು ಆಲಿಸುವವರು ಇಲ್ಲ.ವಿದ್ಯಾರ್ಥಿಗಳು ಎದುರಿಸುತ್ತಿರುವ ಸರ್ಕಾರಿ ಬಸ್ಸುಗಳ ಕೊರತೆಯ ವಿರುದ್ಧ ಇಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳ್ತಂಗಡಿ ತಾಲೂಕು ಬಸ್ಸು ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.
ಬೆಳಿಗ್ಗೆ 8:30-10:30ರ ವೇಳೆ ಬಸ್ಸುಗಳ ಕಡಿಮೆಯಿದ್ದು ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳಿಗೆ ಬಸ್ಸು ಸೌಲಭ್ಯಗಳು ಸಿಗದೆ ತರಗತಿಗಳು ತಪ್ಪುತ್ತಿವೆ.ಕೊಯ್ಯರು ಬಸ್ಸ್ ನಿಲ್ದಾಣದ ಬಳಿ ಬಸ್ಸುಗಳು ನಿಲ್ಲುಸುತ್ತಿಲ್ಲ.ಬೆಳಾಲು ಕಡೆ ಬಸ್ಸು ಸೌಲಭ್ಯಗಳು ಇದ್ದರರೂ ಸಾಕಾಗುತ್ತಿಲ್ಲ.ಅಷ್ಟೇ ಅಲ್ಲದೆ ಇದು ತಾಲೂಕಿನಾದ್ಯಂತ ಈ ಸಮಸ್ಯೆ ಎದುರಾಗುತ್ತಿದೆ.ಸರಿಯಾಗಿ ಸಮರ್ಪಕವಾಗಿ ಬಸ್ಸು ಸೌಲಭ್ಯಗಳು ದೊರಕಿಸಬೇಕು. ವಿದ್ಯಾರ್ಥಿನಿಯರಿಗೆ ಶಕ್ತಿ ಯೋಜನೆಯನ್ನು ಕಲ್ಪಿಸಿದ್ದು ಸ್ವಾಗತಾರ್ಹ. ಅದೇ ರೀತಿ ಎಲ್ಲಾ ವಿದ್ಯಾರ್ಥಿಗಳಿಗೂ ದೊರಕುವಂತೆ ಮಾಡಿ ಎಲ್ಲಾ ವಿದ್ಯಾರ್ಥಿಗಳನ್ನು ಸಮಾನತೆಯ ಭಾವದಿಂದ ನೋಡಿ ಬಸ್ಸು ಪ್ರಯಾಣ ಉಚಿತವಾಗಿ ನೀಡಬೇಕು ಎಂದು ಸುವೀಜ್ ಶೆಟ್ಟಿ ಆಗ್ರಹಿಸಿದರು.
ವಿದ್ಯಾರ್ಥಿಗಳು ದೇಶದ ಆಸ್ತಿ ಎಂದು ಹೇಳುತ್ತಾರೆ ಆದರೆ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದೀರಿ.4 ಬಸ್ಸುಗಳು ಹೋಗುವ ಜಾಗಕ್ಕೆ 2 ಬಸ್ಸುಗಳು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.ವಿದ್ಯಾರ್ಥಿಗಳ ಸಮಸ್ಯೆಯನ್ನು ಕೇಳುವವರಿಲ್ಲ ಅಂತಾಗಿದೆ. ಸರ್ಕಾರಕ್ಕೆ ನಾವು ಎಚ್ಚರಿಸುತ್ತಿದ್ದೇವೆ.ನಮ್ಮ ಮನವಿಗೆ ಸ್ಪಂದಿಸದೆ ಇದ್ದಲ್ಲಿ ನಾವು ಮುಂಬರುವ ದಿನಗಳಲ್ಲಿ ಬೃಹತ್ ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದು ಚಿತ್ತಾರ ಬಂಟ್ವಾಳ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸದಸ್ಯರೆಲ್ಲರು ಸೇರಿ ಉಪತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.