ಅಕ್ಕಿ ಬದಲು ಫಲಾನುಭವಿಗಳಿಗೆ ಖಾತೆಗೆ ಬೀಳಲಿದೆ ತಲಾ 170 ರೂಪಾಯಿ
ಬೆಂಗಳೂರು: ಜುಲೈ 1 ರಿಂದ ಪಡಿತರ ಚೀಟಿದಾರರಿಗೆ 5 ಕೆಜಿ ಅಕ್ಕಿ ನೀಡುವುದಾಗಿ ಈಗಾಗಲೇ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಅಕ್ಕಿ ದೊರೆಯದ ಕಾರಣ ಅಕ್ಕಿಯ ಬದಲಾಗಿ ಹಣವನ್ನು ನೀಡಲು ಸರ್ಕಾರ ತೀರ್ಮಾನಿಸಿದೆ.
ಸಚಿವ ಸಂಪುಟ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಹಾರ ಸಚಿವ ಮುನಿಯಪ್ಪ ಐದು ಕೆಜಿ ಅಕ್ಕಿ ಬದಲಾಗಿ ಹಣ ನೀಡಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಒಂದು ಕೆಜಿ ಅಕ್ಕಿಗೆ ರೂ 34 ನೀಡಲು ನಿರ್ಧರಿಸಲಾಗಿದೆ. ಜುಲೈ 1 ರಂದು ಫಲಾನುಭವಿಗಳಿಗೆ ಖಾತೆಗೆ ತಲಾ 170 ರೂಪಾಯಿಗಳನ್ನು ಜಮೆ ಮಾಡಲು ನಿರ್ಧರಿಸಲಾಗಿದೆ ಎಂದರು.
ಅಕ್ಕಿ ಸಿಕ್ಕ ನಂತರ 10 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ ಎಂಬುವುದಾಗಿ ಘೋಷಣೆ ಮಾಡಿದರು.