• November 22, 2024

ಶ್ರೀ.ಧ. ಮಂ. ಆಂ ಮಾ ಶಾಲೆ, ಧರ್ಮಸ್ಥಳದಲ್ಲಿ ಶಾಲಾ ಸಂಘಗಳ ಉದ್ಘಾಟನೆ

 ಶ್ರೀ.ಧ. ಮಂ. ಆಂ ಮಾ ಶಾಲೆ, ಧರ್ಮಸ್ಥಳದಲ್ಲಿ ಶಾಲಾ ಸಂಘಗಳ  ಉದ್ಘಾಟನೆ

 


ಧರ್ಮಸ್ಥಳ: ಶ್ರೀ.ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಶಾಲಾ ಒಂಭತ್ತು ಸಂಘಗಳ ಉದ್ಘಾಟನೆ ಅದ್ದೂರಿಯಾಗಿ ಇಂದು ನೆರವೇರಿತು.

ದೀಪ ಪ್ರಜ್ವಲನೆಯೊಂದಿಗೆ ಶಾಲಾ ಸಂಚಾಲಕರಾದ ಅನಂತಪದ್ಮನಾಭ ಭಟ್ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದರು.ತದ ನಂತರ ಶಾಲಾ ಸಾಂಸ್ಕೃತಿಕ ಸಂಘವು ಧರ್ಮಸ್ಥಳ ದೇವಳದ ಪಾರುಪತ್ಯಗಾರರಾದ ಶ್ರೀಯುತ ಲಕ್ಷ್ಮೀನಾರಾಯಣ ರಾವ್ ಇವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು.

ರಾಜ ದರ್ಬಾರಿನ ಮಂತ್ರಿಗಳಿಂದ ಆ ಸಂಘದ ವಾರ್ಷಿಕ ಯೋಜನೆಯನ್ನು ವಿವರಿಸಲಾಯಿತು.ತದನಂತರ ಮಾತನಾಡಿದ ಅತಿಥಿಗಳು ಸಾಂಸ್ಕೃತಿಕ ಸಂಘದ ಯೋಜನೆಗಳನ್ನು ಶ್ಲಾಘಿಸಿ ಶುಭ ಹಾರೈಸಿದರು.

ಪರಿಸರ ಸಂಘವನ್ನು ಕೃಷಿಕರಾಗಿರುವ ಬಾಬು ಎಂ.ಕೆ.ಕಬ್ಬು ನೆಡುವ ಮೂಲಕ ಉದ್ಘಾಟಿಸಿ ಪರಿಸರದ ಮಹತ್ವ ವಿವರಿಸಿ ಶುಭ ಹಾರೈಸಿದರು.

ಸಂಘದ ಸದಸ್ಯರು ಮೈಮ್ ಶೋ ಮುಖಾಂತರ ಪರಿಸರ ಜಾಗೃತಿಯ ಕುರಿತಾಗಿ ವಿವರಿಸಿದರು. ತದನಂತರ ಶಾಲಾ ಮಾನವ ಸಂಪನ್ಮೂಲ ಸಂಘವನ್ನು ಶಾಲಾ ಸಂಚಾಲಕರಾದ ಶ್ರೀಯುತ ಅನಂತಪದ್ಮನಾ ಭಟ್ ಇವರು ಉದ್ಘಾಟಿಸಿ ಶುಭಹಾರೈಸಿದರು.

ವಿಜ್ಞಾನ ಸಂಘದ ಉದ್ಘಾಟನೆಯನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಿಯು ಕಾಲೇಜಿನ ಪ್ರಾಧ್ಯಾಪಕರಾಗಿರುವ ಶ್ರೀ.ಸುನಿಲ್ ಪಿ.ಜೆ.ಇವರು ವಿಜ್ಞಾನ ಪ್ರಯೋಗದ ಮುಖಾಂತರ ಉದ್ಘಾನೆಗೊಳಿಸಿದರು ತದನಂತರ ಮಾತನಾಡಿದ ಅವರು ವಿಜ್ಞಾನ ಎಂದರೇನು ?ನಿಜವಾದ ವಿಜ್ಞಾನ ಯಾವುದು?ಸೃಜನ ಶೀಲತೆ ಅಂದರೆ ಏನು?ನಿಸರ್ಗವನ್ನು ಅರಿತು ಬಾಳಿದರೆ ಅದುವೇ ನಿಜವಾದ ವಿಜ್ಞಾನ ಹಾಗೂ ಆಹಾರದ ಒಳಗಿನ ವಿಜ್ಞಾನ ಏನು ಎಂಬುದನ್ನು ವಿವರಿಸಿ ಶುಭ ಹಾರೈಸಿದರು.

ಶಾಲಾ ಭಿತ್ತಿ ಪ್ರತ್ರಿಕಾ ಸಂಘವನ್ನು ಪತ್ರಕರ್ತರಾಗಿರುವ ನಾಭಿರಾಜ್ ಪೂವಣಿ ಕನಸು ಹಾಗೂ ಹೊಂಗನಸು ಎಂಬ ಎರಡು ಭಿತ್ತಿ ಪತ್ರಿಕೆಯನ್ನು ಅನಾವರಣಗೊಳಿಸಿದರು.

ತದನಂತರ ಮಾತನಾಡಿದ ಅವರು ಬರವಣಿಗೆಯ ಮಹತ್ವ ವಿದ್ಯಾರ್ಥಿ ಜೀವನದಲ್ಲಿ ಬರವಣಿಗೆಯ ಮಹತ್ವವನ್ನು ಅವರು ವಿವರಿಸಿದರು.ಬರವಣಿಗೆಯನ್ನು ಹವ್ಯಾಸವಾಗಿಸಿ ಎಂದು ನುಡಿದು ಶುಭ ಹಾರೈಸಿದರು.

ತದನಂತರ ಜೂನಿಯರ್ ರೆಡ್ ಕ್ರಾಸ್ ಸಂಘವನ್ನು ಶ್ರೀಯುತ ಮಂಜುನಾಥ್ ಧರ್ಮಸ್ಥಳ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಉದ್ಘಾಟಿಸಿ ಮಾನವೀಯ ಮೌಲ್ಯಗಳನ್ನು ಉಳಿಸಿ ಬೆಳೆಸುವಂತೆ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಶಾಲಾ ಸ್ವಚ್ಛತಾ ಹಾಗೂ ಆರೋಗ್ಯ ಸಂಘ ಧರ್ಮಸ್ಥಳ ಪ್ರಾಥಮಿಕ ಆರೋಗ್ಯ ಕೇಂದ್ರ ಇದರ ಮುಖ್ಯ ವೈದ್ಯರಾಗಿರುವ ಡಾ. ಮಂಜು ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು ತೆರೆಯುವುದರ ಮುಖಾಂತರ ಉದ್ಘಾಟನೆಗೊಂಡಿತು.


ತದನಂತರ ಮಾತನಾಡಿದ ಅವರು ಆರೋಗ್ಯದ ಮಹತ್ವ ಅದನ್ನು ಕಾಪಾಡಿಕೊಳ್ಳುವ ರೀತಿ, ಸಂಸ್ಕೃತಿ ಸಂಸ್ಕಾರಗಳ ಹಿಂದಿನ ಕಾರಣಗಳು,ವೈಚಾರಿಕತೆ ಅಂದರೆ ಏನು?ಮಾನಸಿಕ ಆರೋಗ್ಯದ ಅಗತ್ಯ ವನ್ನು ಸಹ ವಿವರಿಸಿದರು.ಶಾಲಾ ಓದುಗರ ಸಂಘವನ್ನು ವಾರ್ತಾಭಾರತಿ ಇದರ ವರದಿಗಾರರು ಆಗಿರುವ ಶ್ರೀಯುತ ಶಿಬಿ ಧರ್ಮಸ್ಥಳ ಉದ್ಘಾಟಿಸಿ ಮಾನವೀಯ ಸಂಬಂಧಗಳ ಮಹತ್ವವನ್ನೂ, ಮನುಷ್ಯತ್ವ ಬೆಳೆಸುವ ಭಾವನೆಯನ್ನು ಶಾಲೆ ಬೆಳೆಸುತ್ತಿದೆ ಎಂದು ಶ್ಲಾಘಿಸಿದರು.ಓದಿನ ಮಹತ್ವ, ಓದಿನ ತುಡಿತವನ್ನ ಬೆಳೆಸಿಕೊಳ್ಳುವ ರೀತಿ,ಅದನ್ನು ಹವ್ಯಾಸವನಾಗಿಸುವ ವಿಚಾರ, ಶಬ್ಧ ಭಂಡಾರವನ್ನು ಹೆಚ್ಚಿಸುವ ರೀತಿ ಇತ್ಯಾದಿಗಳನ್ನು ವಿವರಿಸಿದರು.ಶಾಲಾ ಕ್ರೀಡಾ ಸಂಘವನ್ನು ಶಾಲಾ ಹಳೆ ವಿದ್ಯಾರ್ಥಿನಿ ಯೋಗಪಟು ಕುಮಾರಿ ಶರಧ್ವಿ ಚದುರಂಗ ಆಟ ಆಡುವ ಮುಖಾಂತರ ಉದ್ಘಾಟಿಸಿ ಜೀವನದಲ್ಲಿ ಆಟದ ಮಹತ್ವವನ್ನು ವಿವರಿಸಿದರು.ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ.ವಿ.ಶಾಲೆಯಲ್ಲಿ ಸಂಘಗಳ ಮಹತ್ವವನ್ನು ವಿವರಿಸಿ ಮುಂದಿನ ದಿನಗಳಲ್ಲಿ ಕಾರ್ಯಕ್ರಮಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದು ನುಡಿದರು. ಶಾಲೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ಶಾಲಾ ವಿದ್ಯಾರ್ಥಿನಿ ಕುಮಾರಿ ಅಪೇಕ್ಷ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿ, ಶಾಲಾ ವಿದ್ಯಾರ್ಥಿ ಆದಿತ್ಯ ಎಚ್.ಎಸ್. ಸರ್ವರಿಗೂ ಧನ್ಯವಾದ ಇತ್ತರು. ಶಾಲಾ ವಿವಿಧ ಸಂಘಗಳು ವಿಭಿನ್ನವಾಗಿ ಉದ್ಘಾಟನೆಗೊಂಡಿದ್ದು ಈ ಕಾರ್ಯಕ್ರಮದ ವಿಶೇಷವಾಗಿತ್ತು. ಶಾಲಾ ಶಿಕ್ಷಕರ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಗಳಾದರು.

Related post

Leave a Reply

Your email address will not be published. Required fields are marked *

error: Content is protected !!