• November 13, 2024

ಜೇಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ತಾಲೂಕಿನ ಹಲವು ಕಡೆ ಯೋಗ ದಿನಾಚರಣೆ ಅಂಗವಾಗಿ ಏಕಕಾಲಕ್ಕೆ 20 ತರಬೇತಿ ಕಾರ್ಯಕ್ರಮಗಳು

 ಜೇಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ತಾಲೂಕಿನ ಹಲವು ಕಡೆ ಯೋಗ ದಿನಾಚರಣೆ ಅಂಗವಾಗಿ ಏಕಕಾಲಕ್ಕೆ 20 ತರಬೇತಿ ಕಾರ್ಯಕ್ರಮಗಳು

 

ಬೆಳ್ತಂಗಡಿ‌ – ಪ್ರತೀ ಸಲವು ವಿಭಿನ್ನ ಯೋಚನೆಗಳೊಂದಿಗೆ ಕಾರ್ಯಕ್ರಮಗಳನ್ನ ಆಯೋಜಿಸಿ ಯಶಸ್ಸನ್ನ ಕಾಣುತ್ತ, ವಲಯದಲ್ಲಿಯೇ ಅತ್ಯಂತ ಯಶಸ್ವಿ ಘಟಕವಾಗಿ ಜೇಸಿಐ ಬೆಳ್ತಂಗಡಿ ಮಂಜುಶ್ರೀಯು ಗುರುತಿಸಿಕೊಂಡು ಅಂತರಾಷ್ಟ್ರಿಯ ಯೋಗ ದಿನಾಚರಣೆಯನ್ನು ಕೂಡ ಒಂದೇ ದಿನದಲ್ಲಿ ಏಕಕಾಲಕ್ಕೆ 20 ತರಬೇತಿಯನ್ನು ಬೇರೆ ಬೇರೆ ಶಾಲಾ ಕಾಲೇಜುಗಳಲ್ಲಿ ನಡೆಸುವ ಮುಖೇನ ಶಿಕ್ಷಣದೊಂದಿಗೆ ಯೋಗ ಎಂಬ ವಿಷಯನ್ನು ಮಕ್ಕಳಿಗೆ ತಿಳಿಸಿ ಉತ್ತಮ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದಾರೆ ಇದು ಯಶಸ್ವಿಯಾಗಲಿ ಎಂದು ಮೇಲಂತಬೇಟ್ಟು ಕಾಲೇಜಿನಲ್ಲಿ ಜೇಸಿಐ ಬೆಳ್ತಂಗಡಿ ಮಂಜುಶ್ರೀ, ಯುವ ರೆಡ್ ಕ್ರಾಸ್ ಘಟಕ ಹಾಗೂ ರೋವರ್ಸ್ ರೇಂಜರ್ಸ್ ಘಟಕ ಸಹಯೋಗದಿಂದಿಗೆ ನಡೆದ ಆಜ್ಙಾ ಅರಿವಿನ‌ ಧ್ಯಾನ ಕಾರ್ಯಕ್ರಮವನ್ನ ಉದ್ಘಾಟಿಸಿದ ವಲಯದ ಕಾರ್ಯಕ್ರಮ ವಿಭಾಗದ ನಿರ್ದೇಶಕರಾದ ಅಕ್ಷತಾ ಗೀರೀಶ್ ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಲೇಜಿನ‌ ಪ್ರಭಾರ ಪ್ರಾಂಶುಪಾಲರು ರಾಘವ್ ವ್ಯಕ್ತಿತ್ವ ವಿಕಸನದ ಮೂಲಕ ಯುವಜನರಿಗೆ ಮಾರ್ಗದರ್ಶಿಯಾಗಿ ಜೆಸಿಐ ಕೆಲಸ ಮಾಡ್ತ ಇದ್ದು ಇದರ ಪ್ರಯೋಜನವನ್ನ ಸಲಹೆ ನೀಡಿದರು.

ಹಾಗೇ ಇನ್ನೋರ್ವ ಅತಿಥಿ ರೋವರ್ಸ್ ರೇಂಜರ್ಸ್ ಘಟಕದ ರವಿ ಎಮ್ ಎನ್ ಸರ್ ಮಾತಾಡಿ ಕಾಲೇಜು ದಿವಸಗಳಲ್ಲೆ ನಾಯಕತ್ವ ಗುಣವನ್ನ ಮೈಗೂಡಿಸಿಕೊಂಡಿದ್ದ ಶಂಕರ್ ರಾವ್ ಇಂದು ಜೇಸಿಐ ಮುಖೇನ ಅತ್ಯುತ್ತಮ ಕೆಲಸಗಳನ್ನ ಮಾಡಿ ಕಾಲೇಜಿನ‌ ಹಿರಿಯ ವಿದ್ಯಾರ್ಥಿಯಾಗಿ ಹಿರಿಮೆಯನ್ನು ತಂದಿದ್ದಾರೆ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಬೆಳ್ತಂಗಡಿಯ ಅಧ್ಯಕ್ಷರಾದ ಶಂಕರ್ ರಾವ್ ವಹಿಸಿ ಎಲ್ಲರನ್ನು ಸ್ವಾಗತಿಸಿದರು.

ಉದ್ಘಾಟನಾ ಕಾರ್ಯಕ್ರಮದ ನಂತರ ಶಿಕ್ಷಣದೊಂದಿಗೆ ಯೋಗ ಕಾರ್ಯಾಗಾರವನ್ನ ಎಸ್ ಡಿ ಎಮ್ ಯೋಗ ವಿದ್ಯಾರ್ಥಿ ಅನನ್ಯ ಜೈನ್ ನಡೆಸಿಕ್ಕೊಟ್ಟರು, ವೇದಿಕೆಯಲ್ಲಿ ನಿಕಟಪೂರ್ವಧ್ಯಕ್ಷರಾದ ಪ್ರಸಾದ್ ಎಸ್, ಕಾರ್ಯಕ್ರಮ ಸಂಯೋಜಕರಾದ ಘಟಕದ ಉಪಾಧ್ಯಕ್ಷ ಪ್ರೀತಮ್ ಶೆಟ್ಟಿ ಜೆಜೆಸಿ ಅಧ್ಯಕ್ಷ ರಾಮಕೃಷ್ಣ ಶರ್ಮಾ ಉಪಸ್ಥಿತರಿದ್ದು, ಪೂರ್ವಾಧ್ಯಕ್ಷ ಚಿದಾನಂದ ಇಡ್ಯಾ ಅತಿಥಿಗಳನ್ನ ವೇದಿಕೆ ಆಹ್ವಾನಿಸಿ, ವಿದ್ಯಾರ್ಥಿ ಭರತೇಶ್ ಜೇಸಿ ವಾಣಿ ವಾಚಿಸಿ, ಘಟಕದ ಕಾರ್ಯಕ್ರಮ‌ ನಿರ್ದೇಶಕರಾದ ಚಂದ್ರಹಾಸ ಬಳಂಜ ಪ್ರಸ್ತಾವಿಕ ಮಾತುಗಳನ್ನಾಡಿ ಕಾರ್ಯದರ್ಶಿ ಸುಧೀರ್ ಕೆ.ಎನ್ ಧನ್ಯವಾದವಿತ್ತರು.

ಕಾರ್ಯಕ್ರಮದಲ್ಲಿ ಘಟಕದ ಪೂರ್ವಧ್ಯಕ್ಷರಾದ ನಾರಾಯಣ ಶೆಟ್ಟಿ, ಸ್ವರೂಪ್ ಶೇಖರ್, ಉಪಾಧ್ಯಕ್ಷರಾದ ಹೇಮಾವತಿ, ರಕ್ಷಿತ್ ಅಂಡಿಂಜೆ ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!