• September 8, 2024

ರೆಖ್ಯ: ಅಂಗನವಾಡಿಯಲ್ಲಿ ವಿತರಿಸಿದ ಮೊಟ್ಟೆಯಲ್ಲಿ ಪತ್ತೆಯಾಯ್ತು ಕೋಳಿ‌ ಮರಿ: ಇಂತಹ ಘಟನೆ ನಮ್ಮ ಗಮನಕ್ಕೆ ಬಂದಿಲ್ಲ ಅಂಗನವಾಡಿ ಕಾರ್ಯಕರ್ತೆಯಿಂದ ಉಡಾಫೆ ಉತ್ತರ: ಹಲವಾರು ಫಲಾನುಭವಿಗಳಿಗೂ ಉಂಟಾದ ಅನುಭವ

 ರೆಖ್ಯ: ಅಂಗನವಾಡಿಯಲ್ಲಿ ವಿತರಿಸಿದ ಮೊಟ್ಟೆಯಲ್ಲಿ ಪತ್ತೆಯಾಯ್ತು ಕೋಳಿ‌ ಮರಿ: ಇಂತಹ ಘಟನೆ ನಮ್ಮ ಗಮನಕ್ಕೆ ಬಂದಿಲ್ಲ ಅಂಗನವಾಡಿ ಕಾರ್ಯಕರ್ತೆಯಿಂದ ಉಡಾಫೆ ಉತ್ತರ: ಹಲವಾರು ಫಲಾನುಭವಿಗಳಿಗೂ ಉಂಟಾದ ಅನುಭವ

ರೆಖ್ಯ: ಬೆಳ್ತಂಗಡಿ ತಾಲೂಕಿನ ರೆಖ್ಯ, ಅರಸಿನಮಕ್ಕಿ ಅಂ ಗನವಾಡಿಯಲ್ಲಿ ವಿತರಿಸಿದ ಮೊಟ್ಟೆಯನ್ನು ಬೇಯಿಸಿದಾಗ ಕೋಳಿ ಮರಿ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ.

ಎಂಜಿರಕಟ್ಟೆ ಅಂಗನವಾಡಿ ಕೇಂದ್ರದಿಂದ ವಿತರಣೆಯಾಗಿದ್ದ ಮೊಟ್ಟೆಯನ್ನು ಪಡೆದುಕೊಂಡ ಫಲಾನುಭವಿಗಳು ಮನೆಯಲ್ಲಿ ಮೊಟ್ಟೆಯನ್ನು ಬೇಯಿಸಿದಾಗ ಈ ಘಟನೆ ಕಂಡುಬಂದಿದೆ.

ಹಲವಾರು ಫಲಾನುಭವಿಗಳು ಇದೇ ದೂರನ್ನು ನೀಡಿದ್ದಾರೆ. ಈ ವಿಚಾರ ಅರಸಿನಮಕ್ಕಿ ಗ್ರಾ.ಪಂ ವಾರ್ಡ್ ಸಭೆಯಲ್ಲಿ ಪ್ರಸ್ತಾಪವಾಗಿದ್ದು, ಮುಂದಿನ ಗ್ರಾಮ ಸಭೆಯಲ್ಲೂ ಚರ್ಚೆಗೆ ಬರಲಿದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷರು ತಿಳಿಸಿದ್ದಾರೆ.ಆದರೆ ಅಂಗನವಾಡಿ ಕಾರ್ಯಕರ್ತೆ ಅಂತಹ ಯಾವುದೇ ಘಟನೆ ನಡೆದಿಲ್ಲ ನಮ್ಮ ಗಮನಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!