• December 3, 2024

ಬೆಳ್ತಂಗಡಿ: ಮಗುವಿನೊಂದಿಗೆ ತಾಯಿ ನಾಪತ್ತೆ: 2022 ನೇ ಇಸವಿಯಲ್ಲೂ ನಾಪತ್ತೆಯಾಗಿದ್ದ ಈಕೆಯನ್ನು ಮನೆಯ ಕರೆತಂದ ಪೊಲೀಸರು

 ಬೆಳ್ತಂಗಡಿ: ಮಗುವಿನೊಂದಿಗೆ ತಾಯಿ ನಾಪತ್ತೆ: 2022 ನೇ ಇಸವಿಯಲ್ಲೂ ನಾಪತ್ತೆಯಾಗಿದ್ದ ಈಕೆಯನ್ನು ಮನೆಯ ಕರೆತಂದ ಪೊಲೀಸರು

 

ಗುರುವಾಯನಕೆರೆ: ಕಡಬ ತಾಲೂಕು ಬೆಳಂದೂರು ಗ್ರಾಮದ ಕೈಮನೆ ನಿವಾಸಿ ನವೀನ್ ಎಂಬವರ ಪತ್ನಿ ಕವನಾ ಮಗ ರಕ್ಷಣ್ ಜೂನ್ 6 ರಂದು ನಾಪತ್ತೆಯಾದ ಘಟನೆ ನಡೆದಿದೆ.

ಇವರು ಗುರುವಾಯನಕೆರೆಯ ಬಾಡಿಗೆ ಕೋಣೆಯಲ್ಲಿ ವಾಸವಾಗಿದ್ದರು. ಕವನ ಜೂ.5 ರಂದು ರಾತ್ರಿ ಊಟ ಮಾಡಿ ಮಲಗಿದ್ದು ಬೆಳಗಾಗುದರೊಳಗೆ ಮಗುವಿನೊಂದಿಗೆ ನಾಪತ್ತೆಯಾಗಿರುವುದು ವರದಿಯಾಗಿದೆ.

ಈ ಹಿಂದೆಯೂ ಈಕೆ ಕಾಣೆಯಾಗಿದ್ದು ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಬಳಿಕ ಈಕೆ ಪರಿಚಯಸ್ಥರೊಂದಿಗೆ ತೆರಳಿರುವ ವಿಷಯ ತಿಳಿದು ಪೊಲೀಸರು ಪತ್ತೆ ಮಾಡಿದ್ದರು. ಕಾಣೆಯಾಗಿರುವ ಪತ್ನಿ ಹಾಗೂ ಮಗನನ್ನು ಹುಡುಕಿಕೊಡುವಂತೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಪತಿ ದೂರನ್ನು ನೀಡಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!