ಮೈರೋಳ್ತಡ್ಕ: ಹರೀಶ್ ಪೂಂಜರ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳಿಂದ ಮುಂಡೂರು ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ
ಮೈರೋಳ್ತಡ್ಕ: ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಮೈರೋಳ್ತಡ್ಕ ದ ಮುಂಡೂರು ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಶಾಸಕರಾದ ಹರೀಶ್ ಪೂಂಜರವರ ಜನುಮ ದಿನದ ಪ್ರಯುಕ್ತ ದೇವಸ್ಥಾನ ದ ಪರವಾಗಿ ಹಾಗೂ ಬಂದಾರು ಗ್ರಾಮದ ಅಭಿಮಾನಿಗಳ ಪರವಾಗಿ ಶಾಸಕರಿಗೆ ಆರೋಗ್ಯ,ದೀರ್ಘಾಯುಷ್ಯ,ಉತ್ತಮ ಉಜ್ವಲ ಭವಿಷ್ಯ ಸಿಗಲೆಂದು ಪ್ರಾರ್ಥಿಸಲಾಯಿತು.ವಿಶೇಷ ಪುಷ್ಪಾರ್ಚನೆ ಸೇವೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶಾಸಕರ ಅಭಿಮಾನಿ ಬಳಗ ಭಾಗಿಯಾಗಿದ್ದರು.