ಶ್ರೀ ಧ. ಮಂ. ಆ. ಮಾ ಶಾಲೆ, ಧರ್ಮಸ್ಥಳದಲ್ಲಿ ಶಾಸ್ತ್ರೀಯ ಸಂಗೀತ ಹಾಗೂ ಶಾಸ್ತ್ರೀಯ ನೃತ್ಯ ತರಗತಿಗಳ ಉದ್ಘಾಟನಾ ಸಮಾರಂಭ
ಧರ್ಮಸ್ಥಳ: ಪಠ್ಯದ ಜೊತೆಗೆ ಪಠ್ಯೇತರ ಶಿಕ್ಷಣಕ್ಕೆ ಒತ್ತು ನೀಡುವ ಸಲುವಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಶಾಸ್ತ್ರೀಯ ಸಂಗೀತ ಹಾಗೂ ಶಾಸ್ತ್ರೀಯ ನೃತ್ಯದ ತರಗತಿಗಳ ಉದ್ಘಾಟನಾ ಸಮಾರಂಭ ಇಂದು ನೆರವೇರಿತು.
ಈ ಕಾರ್ಯಕ್ರಮವನ್ನು ಅದೇ ಶಾಲೆಯ ಹಳೆಯ ವಿದ್ಯಾರ್ಥಿನಿ ಭರತನಾಟ್ಯದಲ್ಲಿ ವಿಶೇಷ ಸಾಧನೆಯನ್ನು ಮಾಡಿರುವ ಕುಮಾರಿ ಧರಿತ್ರಿ ಬಿಡೆ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .
ತದನಂತರ ಮನಸ್ಸನ್ನು ಕೇಂದ್ರೀಕರಿಸಲು ನೃತ್ಯ ಹಾಗೂ ಸಂಗೀತ ಎರಡು ಉತ್ತಮ ಸಾಧನಗಳು. ಎರಡು ಒಂದೇ ನಾಣ್ಯದ ಮುಖಗಳಿದ್ದಂತೆ. ಶ್ರದ್ಧೆ ಹಾಗೂ ಏಕಾಗ್ರತೆ ಇದ್ದರೆ ಬದುಕಿನಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು. ಹಲವು ರೋಗಗಳಿಗೆ ಇದು ರಾಮಬಾಣವೂ ಹೌದು ಎಂದು ತನ್ನ ವೈಯಕ್ತಿಕ ಜೀವನದ ಹಲವು ಯಶಸ್ಸಿನ ಉದಾಹರಣೆಗಳನ್ನು ನೀಡಿದರು.
ತದನಂತರ ಮಾತನಾಡಿದ ಶಾಸ್ತ್ರೀಯ ಸಂಗೀತದ ತರಬೇತುದಾರರಾಗಿರುವ ಶ್ರೀಮತಿ ಮನೋರಮ ತೋಳ್ಪಡಿತ್ತಾಯ ವಿದ್ಯಾರ್ಥಿ ಜೀವನದಲ್ಲಿ ಸಂಗೀತದ ಮಹತ್ವವನ್ನು ವಿವರಿಸಿದರು.ನಂತರ ಭರತನಾಟ್ಯದ ತರಭೇತುದಾರರಾದ ಶ್ರೀಮತಿ ವಿದ್ಯಾತೊಸರ್ ನಾಟ್ಯದ ಆರಂಭಿಕ ಹಂತದ ವಿಧಾನ ತಿಳಿಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ.ವಿ.ಶಾಲೆಯಲ್ಲಿ ತರಬೇತಿ ಆರಂಭಿಸಿದ ಉದ್ದೇಶ ವಿದ್ಯಾರ್ಥಿಗಳು ಅದನ್ನು ಸದುಪಯೋಗಪಡಿಸಿಕೊಳ್ಳುವ ರೀತಿ ಹಾಗೂ ಅದರ ಪರಿಣಾಮಗಳನ್ನು ಸವಿಸ್ತಾರವಾಗಿ ವಿವರಿಸಿದರು.
ಆರಾಧ್ಯ ಪಿ ಜೋಶಿ ನೆರವೇರಿಸಿದ ಕಾರ್ಯಕ್ರಮದಲ್ಲಿ
ಸನಾ ರಾಜೀವ್ ಸ್ವಾಗತಿಸಿ, ವೈಷ್ಣವಿ ಧನ್ಯವಾದ ಇತ್ತರು.
ಅತಿಥಿಗಳ ಪರಿಚಯವನ್ನು ಸಮ್ಯಕ್, ವಿದ್ವತ್ ಜೈನ್ ಮತ್ತು ಪ್ರಣವ್ ಜೋಯಿಷಾ ಮಾಡಿಕೊಟ್ಟರು.ಶಾಲಾ ಶಿಕ್ಷಕರು ವಿದ್ಯಾರ್ಥಿ ಪೋಷಕರು ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾದರು.