• November 2, 2024

ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಯಂತ್ರಗಳ ಕೊರತೆ: ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರನ್ನು ತರಾಟೆಗೆ ತೆಗೆದುಕೊಂಡ ರಕ್ಷಿತ್ ಶಿವರಾಂ ಹಾಗೂ ಮಾಜಿ ಶಾಸಕ ಕೆ ವಸಂತ ಬಂಗೇರ

 ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಯಂತ್ರಗಳ ಕೊರತೆ: ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರನ್ನು ತರಾಟೆಗೆ ತೆಗೆದುಕೊಂಡ ರಕ್ಷಿತ್ ಶಿವರಾಂ ಹಾಗೂ ಮಾಜಿ ಶಾಸಕ ಕೆ ವಸಂತ ಬಂಗೇರ

 

ಬೆಳ್ತಂಗಡಿ: ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಯಂತ್ರಗಳು ಕೆಟ್ಟು ಹೋಗಿದ್ದು ರೋಗಿಗಳಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಮಾಹಿತಿ ತಿಳಿದ ಮಾಜಿ ಶಾಸಕ ಕೆ ವಸಂತ ಬಂಗೇರ ಹಾಗೂ ರಕ್ಷಿತ್ ಶಿವರಾಂ ಭೇಟಿ ನೀಡಿ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು.

8 ಡಯಾಲಿಸಿಸ್ ಯಂತ್ರಗಳಿದ್ದರೂ ಸಹ ಅದರಲ್ಲಿ 6 ಯಂತ್ರಗಳು ಸರಿ ಇದ್ದು, ಯಂತ್ರಗಳು ಕೆಟ್ಟುಹೋಗಿ 4 ತಿಂಗಳುಗಳು ಕಳೆದರು ಯಾವುದೇ ಮಾಹಿತಿ ನೀಡಿರಲಿಲ್ಲ. ಬೆಡ್ ಇಲ್ಲದೆ ರೋಗಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಬ್ಲೆಡ್ ಚೆಕಪ್ ಗೆ ಲ್ಯಾಬ್ ಗಳಿದ್ದರೂ ಸಹ ಆಸ್ಪತ್ರೆಯ ಒಳಭಾಗದಲ್ಲಿ ಬ್ಲೆಡ್ ಚೆಕಪ್ ಮಾಡದೆ ರೋಗಿಗಳನ್ನು ಹೊರ ಭಾಗಕ್ಕೆ ಕಳುಹಿಸುತ್ತಿದ್ದಾರೆ ಎಂದು ವರದಿಯಾಗಿದೆ . 2 ಹೊಸ ವಾರ್ಡ್ ವ್ಯವಸ್ಥೆಗಳಿದ್ದರೂ ಸಹ ಅದರಲ್ಲಿ 12 ಬೆಡ್ ಗಳ ವ್ಯವಸ್ಥೆಯಿದ್ದರೂ ಅದರಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡದೇ ಇರುವುದು ದುರಂತವೇ ಸರಿ.

7 ಡಾಕ್ಟರ್ಸ್, 27 ನರ್ಸ್ ಗಳಿರುವ ಈ ಆಸ್ಪತ್ರೆಯಲ್ಲಿ ಸರಿಯಾದ ವ್ಯವಸ್ಥೆಗಳಿಲ್ಲ ಎಂದು ಮಾಜಿ ಶಾಸಕ ಕೆ ವಸಂತ ಬಂಗೇರ ತರಾಟೆಗೆ ತೆಗೆದಕೊಂಡಿದ್ದಾರೆ. ಈ ತಿಂಗಳು 17 ರ ಒಳಗೆ ಸರಿಯಾದ ವ್ಯವಸ್ಥೆಗಳಾಗುವಂತೆ ಭರವಸೆಯನ್ನು ನೀಡಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!